'ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ...' ವರ್ಷದ ಬಳಿಕ ಪುನೀತ್‌ ಟ್ವಿಟರ್‌ ಹ್ಯಾಂಡಲ್‌ನಿಂದ ಪೋಸ್ಟ್‌!

ಪುನೀತ್‌ ರಾಜ್‌ಕುಮಾರ್‌ ಈಗ ನಮ್ಮ ನಡುವೆ ಇಲ್ಲ. 29ಕ್ಕೆ ಒಂದು ವರ್ಷವಾಗಲಿದೆ. ಅಂದಾಜು ಒಂದು ವರ್ಷದ ಬಳಿಕ ಪುನೀತ್‌ ರಾಜ್‌ಕುಮಾರ್‌ ಅವರ ಟ್ವಿಟರ್‌ ಹ್ಯಾಂಡಲ್‌ನಿಂದ ಒಂದು ಪೋಸ್ಟ್‌ ಹೊರಬಂದಿದೆ. ಈ ಪೋಸ್ಟ್‌ ಬರುತ್ತಲೇ ಜನರು ಸ್ವತಃ ಪುನೀತ್‌ ಅವರೇ ಟ್ವೀಟ್‌ ಮಾಡಿದ್ರು ಅಂದುಕೊಂಡೇ ಖುಷಿಪಟ್ಟಿದ್ದಾರೆ.
 

From Puneeth Rajkumar Twitter handle after One year a Post From next release Gandhada Gudi san

ಬೆಂಗಳೂರು (ಅ. 27): ವ್ಯಕ್ತಿಗೆ ಸಾವಿರಬಹುದು, ವ್ಯಕ್ತಿತ್ವ ಅವರ ಯೋಚನೆಗಳಿಗೆ ಎಂದಿಗೂ ಸಾವಾಗೋದಿಲ್ಲ. ಪುನೀತ್‌ ರಾಜ್‌ಕುಮಾರ್‌ ನೆನಪನ್ನು ಚಿರಸ್ಥಾಯಿಯಾಗಿಸುವ ನೆನಪಿನಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯುತ್ತಿದೆ. ಶನಿವಾರ ಪುನೀತ್‌ ರಾಜ್‌ಕುಮಾರ್‌ ನಮ್ಮ ನಡುವೆ ಇರದೇ ಒಂದು ವರ್ಷವಾಗಲಿದೆ. ಶುಕ್ರವಾರ ಅವರ ನಟನೆಯ ಕೊನೆಯ ಚಿತ್ರ ಗಂಧದ ಗುಡಿ ಬಿಡುಗಡೆಗೆ ತಯಾರಾಗಿದೆ. ಈ ಹಂತದಲ್ಲಿ ಸ್ವತಃ ಪುನೀತ್‌ ರಾಜ್‌ಕುಮಾರ್‌  ಟ್ವಿಟರ್‌ ಹ್ಯಾಂಡಲ್‌ನಿಂದ ಒಂದು ಪೋಸ್ಟ್‌ ದಾಖಲಾಗಿದೆ. ಈ ಪೋಸ್ಟ್‌ ನೋಡಿದವರೇ ಜನರು ಭಾವುಕರಾಗಿದ್ದು, ಒಂದು ಕ್ಷಣ ಸ್ವತಃ ಪುನೀತ್‌ ರಾಜ್‌ಕುಮಾರ್‌ ಅವರೇ ಟ್ವೀಟ್‌ ಮಾಡಿದ್ರು ಅಂದುಕೊಂಡೆ ಎನ್ನುವ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. 2021ರ ಅಕ್ಟೋಬರ್‌ 21 ರಂದು ಬೆಳಗ್ಗೆ 7.33ಕ್ಕೆ ಭಜರಂಗಿ 2 ಚಿತ್ರಕ್ಕೆ ಪುನೀತ್‌ ರಾಜ್‌ಕುಮಾರ್‌ ಟ್ವಿಟರ್‌ನಲ್ಲಿ ವಿಶ್‌ ಮಾಡಿದ್ದೇ ಕೊನೆ. ಆ ಬಳಿಕ ಅವರ ದಿಢೀರ್‌ ಅಗಲಿಕೆ ಇಂದಿಗೂ ಕನ್ನಡಿಗರನ್ನು ಕಾಡುತ್ತಿದೆ. ಒಂದು ವರ್ಷವಾದರೂ ಅವರ ನೆನಪು ಜನರಿಗೆ ಮಾಸಿಲ್ಲ. ಜನರು ಹಾಗೂ ಅಭಿಮಾನಿಗಳೊಂದಿಗೆ ಬೆರೆಯಲು ಮಾತ್ರವೇ ಟ್ವಿಟರ್‌ಅನ್ನು ಬಳಕೆ ಮಾಡುತ್ತಿದ್ದ ಪುನೀತ್‌ ರಾಜ್‌ಕುಮಾರ್‌ ಅವರ ಟ್ವಿಟರ್‌ ಹ್ಯಾಂಡಲ್‌ಅನ್ನು ಅವರ ಪಿಆರ್‌ಕೆ ಟೀಮ್‌ ನಿರ್ವಹಣೆ ಮಾಡುತ್ತಿದೆ.

ಅಂದಾಜು ಒಂದು ವರ್ಷಗಳ ಬಳಿಕ ಅವರ ಹ್ಯಾಂಡಲ್‌ನಿಂದ ಬಂದಿರುವ ಟ್ವೀಟ್‌ನಲ್ಲಿ, 'ನಿಮ್ಮನ್ನೆಲ್ಲ ನೋಡುವ ಕಾತುರದಲ್ಲಿ...' ಎಂದು ಬರೆದುಕೊಂಡಿದ್ದಾರೆ. ಅದರೊಂದಿಗೆ ಗಂಧದ ಗುಡಿಯ 19 ಸೆಕೆಂಡ್‌ನ ದೃಶ್ಯವನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಸ್ವತಃ ಪುನೀತ್‌ (Puneeth Rajkumar), "ಕಾಡಲ್ಲಿ ಕ್ಯಾಂಪ್‌ ಮಾಡ್ತೀರೋದು ಇದು ಮೊದಲ ಎಕ್ಸ್‌ಪೀರಿಯನ್ಸ್‌. ಹೇಗಿರುತ್ತೆ ಅಂತಾ ಗೊತ್ತಿಲ್ಲ. ಒಕೆ ಗುಡ್‌ ನೈಟ್‌..' ಎಂದು ಹೇಳಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಅವರ ಟ್ವಿಟರ್‌ (Twitter Page) ಪುಟಕ್ಕೆ ಈವರೆಗೂ 390ಕೆ ಫಾಲೋವರ್ಸ್‌ಗಳಿದ್ದಾರೆ. ಕೆಲವು ತಿಂಗಳ ಹಿಂದೆ ಅವರ ಟ್ವಿಟರ್‌ ಪುಟದ ಬ್ಲ್ಯೂಟಿಕ್‌ ಮಾರ್ಕ್‌ಅನ್ನು ತೆಗೆದಿದ್ದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿತ್ತು. ಕೊನೆಗೆ ಅಭಿಮಾನಿಗಳು ಈ ಕುರಿತಾಗಿ ಟ್ರೆಂಡ್‌ ಮಾಡಿದ್ದರಿಂದ ಟ್ವಿಟರ್‌ ಕೂಡ, ಅವರ ಹೆಸರಿನ ಪಕ್ಕ ಇದ್ದ ಬ್ಲ್ಯೂ ಟಿಕ್‌ ವಾಪಾಸ್‌ ಇರಿಸಿತ್ತು.

Puneeth Rajkumar ನಿಧನಕ್ಕೂ ಮುನ್ನ ಮಾಡಿದ್ದ ಟ್ವೀಟ್‌ ಮತ್ತೆ ವೈರಲ್; ಕನಸು ನನಸು ಮಾಡಿದ ಮಡದಿ

ಅಭಿಮಾನಿಗಳು ಭಾವುಕ: ಪುನೀತ್‌ ರಾಜ್‌ಕುಮಾರ್‌ ಟ್ವಿಟರ್‌ ಹ್ಯಾಂಡಲ್‌ನಿಂದ ಬಂದ (Gandhada Gudi) ಪೋಸ್ಟ್‌ಗೆ ಅಭಿಮಾನಿಗಳು ಭಾವುಕರಾಗಿದ್ದಾರೆ. 'ಒಂದ್ ಸೆಕೆಂಡ್ ಬಾಸೆ ಪೋಸ್ಟ್ ಹಾಕಿದ್ರು ಅನ್ಕೊಂಡೆ...!..' ಎಂದು ಪ್ರದೀಪ್‌ ಎನ್ನುವವರು ಬರೆದಿದ್ದಾರೆ. 'ಈ ಟ್ವೀಟ್‌ನ ನಮ್ಮ ಅಪ್ಪುನೇ ಮಾಡಿದ್ರೆ ಹೆಂಗಿರ್ತಿತ್ತು. ಮಿಸ್‌ ಯು ಅಪ್ಪು' ಎಂದು ಟ್ರೋಲ್‌ ಕನ್ನಡ ಮೂವೀಸ್‌ ಬರೆದಿದೆ. 'ಈ ಪೋಸ್ಟ್‌ಗೆ ಎಲ್ಲರೂ ಕಾಮೆಂಟ್‌, ಲೈಕ್‌ ಮತ್ತು ರೀಟ್ವೀಟ್‌ ಮಾಡಿ. ಇದು ಸ್ಯಾಂಡಲ್‌ವುಡ್‌ನಲ್ಲಿ ಮೋಸ್ಟ್‌ ಲೈಕ್ಡ್‌ ಟ್ವೀಟ್‌ ಎನಿಸಿಕೊಳ್ಳಬೇಕು' ಎಂದು ಇನ್ನೊಬ್ಬರು ಬರೆದಿದ್ದಾರೆ. 'ಇನ್ನು ಮುಂದೆ ಆಗಾಗ ಈ ಅಕೌಂಟ್‌ನಿಂದ (Twitter Account) ಒಂದೊಂದು ಟ್ವೀಟ್‌ ಬರ್ತಾ ಇರಲಿ. ಕನಿಷ್ಠ ಅಪ್ಪು ಅಲ್ಲಿದ್ದಾರೆ ಎನ್ನುವ ಭಾವನೆಯಾದರೂ ನಮ್ಮ ನಡುವೆ ಇರುತ್ತದೆ' ಎಂದು ಬರೆದಿದ್ದಾರೆ.

Gandhada Gudi ಪ್ರೀಮಿಯರ್ ಶೋ ಟಿಕೆಟ್‌ಗಳು ಸೋಲ್ಡ್‌ ಔಟ್‌; ನಾಳೆ 200 ಥಿಯೇಟರ್‌ಗಳಲ್ಲಿ ರಿಲೀಸ್!

'ಪುನೀತ್‌ ರಾಜ್‌ಕುಮಾರ್‌ ಅಣ್ಣ ನಿಜಕ್ಕೂ ತುಂಬಾ ಖುಷಿ ಆಗಿತ್ತಿದೆ. ಇಷ್ಟು ದಿನಗಳ ನಂತರ ನಿಮ್ಮ ಖಾತೆಯಿಂದ ಒಂದು ಟ್ವೀಟ್‌ ಬರುತ್ತೆ ಅಂದ್ರೆ ಹೆಮ್ಮೆ ಆಗುತ್ತಿದೆ ಅಣ್ಣಾ. ಲವ್‌ ಯು ರಾಜಕುಮಾರ. ನಿಮ್ಮನ್ನು ನಿಜವಾಗಿಯೂ ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ. ಅಶ್ವಿನಿ ಮೇಡಮ್‌ ಥ್ಯಾಂಕ್‌ ಯು' ಎಂದು ಇನ್ನೊಬ್ಬರು ಬರೆದಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಸುನೀಗಿದಾಗ ಅವರ ಹೆಸರಿನಲ್ಲಿದ್ದ ಟ್ವಿಟರ್‌ ಹ್ಯಾಂಡಲ್‌ಅನ್ನು ಅವರ ಕುಟುಂಬ ನಿರ್ವಹಣೆ ಮಾಡುತ್ತದೆ. ಪುನೀತ್‌ ವಿಚಾರದಲ್ಲಿ ಟೀಮ್‌ ಪಿಆರ್‌ಕೆ (Team PRK) ನಿರ್ವಹಣೆ ಮಾಡುತ್ತಿದೆ. ಹಿಂದಿಯಲ್ಲಿ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಟ್ವಿಟರ್‌ ಖಾತೆಯನ್ನೂ ಕೂಡ ಕುಟುಂಬ ನಿರ್ವಹಿಸುತ್ತಿದೆ.

Latest Videos
Follow Us:
Download App:
  • android
  • ios