ಒಂದು ವರ್ಷದ ಹಿಂದ ಗಂಧದ ಗುಡಿ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದ ಅಪ್ಪು. ಒಂದು ವರ್ಷದ ಬಳಿಕ ನನಸಾಗುತ್ತಿದೆ ಕನಸು.... 

ಕನ್ನಡ ಚಿತ್ರರಂಗದ ಓನ್ ಆಂಡ್ ಓನ್ಲಿ ಪವರ್ ಸ್ಟಾರ್ ಡಾ ಪುನೀತ್ ರಾಜ್‌ಕುಮಾರ್ (Dr Puneeth Rajkumar) ಅಭಿನಯಿಸಿರುವ ಗಂಧದ ಗುಡಿ ಸಿನಿಮಾ ರಾಜ್ಯಾದ್ಯಂತ ಅದ್ಧೂರಿಯಾಗಿ ಅಕ್ಟೋಬರ್ 28ರಂದು ಬಿಡುಗಡೆಯಾಗುತ್ತಿದೆ. ಅಕ್ಟೋಬರ್ 27ರಂದು ಪ್ರೀಮಿಯರ್ ಶೋ ನಡೆಯಲಿದ್ದು ಟಿಕೆಟ್‌ಗಳು ಫುಲ್ ಸೋಲ್ಡ್‌ ಔಟ್ ಆಗಿದೆ. ಅಪ್ಪು ಕನಸಿನ ಕೂಸು ಗಂಧದ ಗುಡಿಯನ್ನು ನನಸು ಮಾಡಲು ಮಡದಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಮುಂದಾಗಿದ್ದಾರೆ. ಇದಕ್ಕೆ ಇಡೀ ಕರುನಾಡು ಸಾಥ್ ಕೊಡುತ್ತಿದೆ.

ಕಳೆದ ವರ್ಷ ಅಂದ್ರೆ ಅಕ್ಟೋಬರ್ 27, 2021ರಂದು ಅಪ್ಪು ಮಾಡಿದ ಕೊನೆಯ ಟ್ವೀಟ್ ಈಗ ಮತ್ತೆ ವೈರಲ್ ಆಗುತ್ತಿದೆ. ಈ ಟ್ವೀಟ್‌ನಲ್ಲಿ ನವೆಂಬರ್ 1ರಂದು ವಿಶೇಷ ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಅಮೋಘವರ್ಷ (Amoghavarsha) ಜೊತೆಗಿರುವ ಸ್ಕೂಬಾ ಟೈವಿಂಗ್ ಫೋಟೋ ಹಾಕಿರುವ ಕಾರಣ ಅಭಿಮಾನಿಗಳ ಕ್ಯೂರಿಯಾಸಿಟಿ ಹೆಚ್ಚಿತ್ತು ಆದರೆ ವಿಧಿಯ ಆಟವೇ ಬೇರೆ ಇತ್ತು ಅಕ್ಟೋಬರ್ 29ರಂದು ಅಪ್ಪು ನಮ್ಮನ್ನು ಅಗಲಿದ್ದರು. 

GANDHADA GUDI ಸಿನಿಮಾ ಬಗ್ಗೆ ಪುನೀತ್ ಪತ್ನಿ ಮಾತು: ಮೊದಲ ಬಾರಿಗೆ ಅಪ್ಪು ಬಗ್ಗೆ ಸಂದರ್ಶನ ನೀಡಿದ ಅಶ್ವಿನಿ

ಅಪ್ಪು ಟ್ವೀಟ್: 

'ದಶಕಗಳ ಹಿಂದೆ ಕಥೆಯೊಂದು ಹುಟ್ಟಿತ್ತು. ನಮ್ಮ ಜನ, ನಮ್ಮ ನೆಲದ ಹಿರಿಮೆಯನ್ನು ಮೆರೆದಿತ್ತು. ನಮ್ಮ ಅಡವಿಯ ಹಸಿರನ್ನು ಜಗತ್ತಿಗೇ ಹರಡಿತ್ತು. ಪೀಳಿಗೆಗೆ ಸ್ಫೂರ್ತಿ ನೀಡಿ ಅಜರಾಮರವಾಗಿತ್ತು.ಆ ಚರಿತ್ರೆ ಮರುಕಳಿಸುವ ಸಮಯವೀಗ ಬಂದಿದೆ.' ಎಂದು ಅಪ್ಪು ಟ್ವೀಟ್ ಮಾಡಿದ್ದರು. 

Scroll to load tweet…

ಗಂಧದ ಗುಡಿ ಬಗ್ಗೆ ಅಶ್ವಿನಿ ಮಾತು:

ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲಿ ಸುಮ್ಮನೆ ಕುಳಿತು ಸಮಯ ವ್ಯರ್ಥ ಮಾಡುವುದು ಬೇಡ ನಮ್ಮ ಕರುನಾಡನ್ನು ಸಂಭ್ರಮಿಸೋಣ ಇದನ್ನು ನಮ್ಮ ಜನರಿಗೆ ತೋರಿಸೋಣ ಎಂದು ಅಪ್ಪು ಕಂಡ ಕನಸಿಗೆ ಮೊದಲು ಸಾಥ್ ಕೊಟ್ಟಿದ್ದು ಮಡದಿ ಅಶ್ವಿನಿ. ಪಿಆರ್‌ಕೆ ಪ್ರೊಡಕ್ಷನ್‌ (PRK Productions) ಮತ್ತು ಪಿಆರ್‌ಕೆ ಆಡಿಯೋ ಅಡಿಯಲ್ಲಿ ಅಶ್ವಿನಿ ನಿರ್ಮಾಣ ಮಾಡಿರುವ ಸಿನಿಮಾ ಇದಾಗಿದ್ದು ಬ್ಯಾಕೆಂಡ್‌ನಲ್ಲಿ ಚಿತ್ರೀಕರಣದ ದಿನಗಳು ಹೇಗಿತ್ತು ಎಂದು ಸಂತೋಷ್ ಆನಂದ್‌ರಾಮ್‌ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

'ಗಂಧದಗುಡಿ (Gandhada Gudi) ಅಪ್ಪಾಜಿ ಮತ್ತು ಶಿವಣ್ಣ ಮಾಡಿದ್ರು ಅದರಲ್ಲಿ ಒಂದು ಕತೆ ಇತ್ತು. ಈ ಗಂಧದಗುಡಿ ಅಪ್ಪು ನೋಡಿದ ಜಗತ್ತು ಹಾಗೂ ಜರ್ನಿಯಾಗಿದೆ. ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ನನ್ನ ಮೂಲಕ ಈ ಸಿನಿಮಾವನ್ನು ಕನ್ನಡ ಜನತೆಗೆ ತೋರಿಸ್ಬೇಕು ಎಂದು ಅಪ್ಪು ಅವರೇ ನಿರ್ಧರಿಸಿದ್ದರು. ಚಿತ್ರದಲ್ಲಿ ಅವರಿಗೆ ಮೇಕಪ್​ ಇಲ್ಲ, ಹೆಚ್ಚು ಜನ ಇಲ್ಲ. ಇದರಲ್ಲಿ ಪುನೀತ್​ ಅವರನ್ನು ಅವರನ್ನಾಗಿಯೇ ನೋಡಬಹುದಾಗಿದೆ, ಪ್ರತಿ ಶೆಡ್ಯೂಲ್‌ಗೆ ಹೋಗುವಾಗಲೂ ಖುಷಿಯಾಗಿ ಹೋಗುತ್ತಿದ್ದೆ.ನಾನು ಕಾಳಿ ರಿವರ್‌ನಲ್ಲಿ ನಡೆದ ಶೂಟಿಂಗ್​ಗೆ ಹೋಗಿದ್ದೆ. ಅಲ್ಲಿ ಶೂಟಿಂಗ್ ಇದ್ದಾಗ ಇಡೀ ದಿನ ಮಾತನಾಡಿರಲಿಲ್ಲ. ಒಂದು ಬೆಟ್ಟ ಹತ್ತಿ ನನಗೆ ಕಾಲ್ ಮಾಡಿದ್ದರು. ನಿನಗೆ ಕಾಲ್ ಮಾಡೊಕೆ ಬೆಟ್ಟ ಹತ್ತಿದ್ದೀನಿ ಎಂದು ಹೇಳಿದ್ದರು. ನೀನು ಇಲ್ಲಿಗೆ ಬರಲೇಬೇಕು ಅಂತ ಹೇಳಿದ್ದರು. ನಾನು ಎರಡು ದಿನ ಬಿಟ್ಟು ಅಲ್ಲಿಗೆ ಹೋದೆ. ಟ್ರಕ್ಕಿಂಗ್ ಮಾಡಿದ್ದು ನನಗೆ ಖುಷಿಯಾಯ್ತು. ಈ ಗಂಧದ ಗುಡಿ ಚಿತ್ರ ನನಗೆ ಹೆಮ್ಮೆ ತಂದಿದೆ. ಒಂದು ಕಡೆ ಅವರಿಲ್ಲದ ಬೇಸರ ಕೂಡ ಇದೆ. ಇನ್ನು ಇದೇ 28ನೇ ತಾರೀಖು ಎಲ್ಲರೂ ಗಂಧದಗುಡಿ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿ ನಮಗೆ ಆಶೀರ್ವಾದ ಮಾಡಿ' ಎಂದು ಅಶ್ವಿನಿ ಮಾತನಾಡಿದ್ದಾರೆ.