ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಪೊಗರು ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ತೆರೆಗೆ ಬರಲು ಸಿದ್ಧವಾಗಿದೆ. ಧ್ರುವ ಸರ್ಜಾ ವರ್ಕೌಟ್ ಮಾಡಿರುವ ವಿಡಿಯೋ ಕೂಡಾ ವೈರಲ್ ಆಗಿತ್ತು. 

ಧೃವ ಸರ್ಜಾ ಅಡ್ಡದಲ್ಲಿ ಘಟೋದ್ಗಜ ಅವತಾರಿ!

ಪೊಗರು ಚಿತ್ರೀಕರಣ ಭರದಿಂದ ಸಾಗುತ್ತಿದ್ದು ಸಿನಿಮಾ ಸೆಟ್ ಗೆ ಬೆಂಕಿ ಬಿದ್ದಿದೆ. ಇಡೀ ಸೆಟ್ ಗೆ ಸೆಟ್ಟೇ ಉರಿದು ಹೋಗಿದೆ. ಆ್ಯಕ್ಷನ್ ಪ್ರಿನ್ಸ್ ಜಸ್ಟ್ ಎಸ್ಕೇಪ್ ಆಗಿದ್ದಾರೆ. ಯಾರಿಗೂ ಪ್ರಾಣಾಪಾಯವಾಗಿಲ್ಲ. ನಿರ್ಮಾಪಕ ಗಂಗಾಧರ್ ಒಂದೂವರೆ ಕೋಟಿ ವೆಚ್ಚ ಮಾಡಿದ್ದಾರೆ. 

ತೆರೆ ಮೇಲೆ ಪೊಗರು ‘ಖದರ್’; ಅಭಿಮಾನಿಗಳು ಸಖತ್ ಥ್ರಿಲ್!

ಆದರೆ ಇದು ರಿಯಲ್ ಅಲ್ಲ, ರೀಲ್! ಶೂಟಿಂಗ್ ನಲ್ಲಿ  ಬೆಂಕಿ ಹತ್ತಿ ಉರಿಯೋ ಮಾರ್ಕೆಟ್ ನಲ್ಲಿ ಫೈಟ್ ಮಾಡುವುದಿತ್ತು. ಅದಕ್ಕಾಗಿ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಸೆಟ್ ನಿರ್ಮಾಣ ಮಾಡಲಾಗಿತ್ತು. 

ಪೊಗರು ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಶೇಕಡ 80 ರಷ್ಟು ಚಿತ್ರೀಕರಣ ಆಗಿದೆ.ಸೆಟ್ ಬರ್ನಿಂಗ್ ಸೀನ್ ಮುಗಿಸಿಕೊಂಡು ಇಡೀ ತಂಡ ಬೆಂಗಳೂರಿಗೂ ವಾಪಾಸ್ ಆಗಿದೆ.  ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದು, ಶಾನ್ವಿ ಶ್ರೀವಾತ್ಸವ್ ಅಭಿನಯಿಸುತ್ತಿದ್ದಾರೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲೂ ಪೊಗರು ರಿಲೀಸ್ ಆಗಲಿದೆ.