ತಮಿಳಿನ 'ಟೂರಿಸ್ಟ್ ಫ್ಯಾಮಿಲಿ' ಸಿನಿಮಾ ಒಟಿಟಿಯಲ್ಲಿ ಸದ್ದು ಮಾಡುತ್ತಿದ್ದು, ಚಿತ್ರದಲ್ಲಿನ ನಿರಾಶ್ರಿತರ ಕುರಿತಾದ ಸಂದೇಶ ಚರ್ಚೆಗೆ ಗ್ರಾಸವಾಗಿದೆ. ಭಾವನಾತ್ಮಕವಾಗಿ ಸಿನಿಮಾ ನೋಡುವುದರ ಜೊತೆಗೆ, ಚಿತ್ರದ ಸಂದೇಶದ ಬಗ್ಗೆಯೂ ಚಿಂತಿಸಬೇಕಿದೆ.

ಸೋಶಿಯಲ್ ಮೀಡಿಯಾದಲ್ಲಿ ತಮಿಳಿನ ಟೂರಿಸ್ಟ್‌ ಫ್ಯಾಮಿಲಿ ಸಿನಿಮಾ ಭಾರೀ ಸದ್ದು ಮಾಡುತ್ತಿದೆ. ಅತೀ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಸಿನಿಮಾ ಥಿಯೇಟರ್‌ಗಳಲ್ಲಿ ಮಾತ್ರವಲ್ಲ, ಒಟಿಟಿ ವೇದಿಕೆಗಳನ್ನೂ ಅಪಾರ ಜನಮನ್ನಣೆ ಪಡೆದಿದೆ. ಟೂರಿಸ್ಟ್‌ ಫ್ಯಾಮಿಲಿ ಸಿನಿಮಾದಲ್ಲಿನ ಭಾವನಾತ್ಮಕ ವಿಚಾರಗಳು ಮನಸ್ಸಿಗೆ ನಾಟುವುದು ನಿಜ. ಆದರೆ, ಈ ಸಿನಿಮಾ ನೀಡುವ ಸಂದೇಶ ಮಾತ್ರ ನಿಜಕ್ಕೂ ಭಾರತದಂಥ ದೇಶಕ್ಕೆ ಬೇಕಾಗಿಲ್ಲ. 2005ರಲ್ಲಿ ಬಂದ ಪ್ರಭಾಸ್‌ ಹೀರೋ ಆಗಿದ್ದ ಛತ್ರಪತಿ ಸಿನಿಮಾದಲ್ಲೂ ಕೂಡ ಇಂಥದ್ದೇ ಅಂಶಗಳಿದ್ದವು. ಎರಡೂ ಸಿನಿಮಾಗಳಲ್ಲಿ ಇರೋದು ನುಸುಳುಕೋರರ ಕಥೆ.

ಶಶಿಕುಮಾರ್ ಮತ್ತು ಸಿಮ್ರಾನ್ ಅಭಿನಯದ ಟೂರಿಸ್ಟ್ ಫ್ಯಾಮಿಲಿ ಈ ವರ್ಷ ತಮಿಳು ಚಲನಚಿತ್ರೋದ್ಯಮದಲ್ಲಿ ಭರ್ಜರಿ ಹಿಟ್ ಆಗಿದೆ. ಇದೇ ಮೊದಲ ಬಾರಿಗೆ ನಿರ್ದೇಶನದ ಫೀಲ್ಡ್‌ಗೆ ಇಳಿದಿದ್ದ 25 ವರ್ಷದ ಅಭಿಷನ್ ಜೀವಿಂತ್ ತೆರೆಯ ಮೇಲೆ ತಂದ ಸಿನಿಮಾ ಇದು. ಈ ಚಿತ್ ಈ ವರ್ಷ ತಮಿಳು ಚಿತ್ರರಂಗದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಯಿತು. ರಜನಿಕಾಂತ್‌, ಧನುಷ್‌, ನಾನಿ ಸೇರಿದಂತೆ ತಮಿಳಿನ ಖ್ಯಾತ ನಟ, ನಟಿಯರು ಈ ಸಿನಿಮಾಗೆ ಮೆಚ್ಚುಗೆಯ ಮಳೆಯನ್ನೇ ಸುರಿಸಿದ್ದಾರೆ.

ಪ್ರಸ್ತುತ, ಈ ಚಿತ್ರ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಆದರೆ, ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾದ ಬಳಿಕ ಚಿತ್ರ ನೀಡುವ ಸಂದೇಶಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಕೇವಲ ಭಾವುಕವಾಗಿ ಈ ಸಿನಿಮಾ ನೋಡುವುದರ ಬದಲಾಗಿ, ಚಿತ್ರ ಯಾವ ಸಂದೇಶ ನೀಡಲು ಬಯಸುತ್ತದೆ ಅನ್ನೋದೇ ಇದರಲ್ಲಿ ಮುಖ್ಯವಾಗಿದೆ.

ಬಂಗಾಳ, ಅಸ್ಸಾಂನಂಥ ಪ್ರದೇಶದಲ್ಲಿ ಅಕ್ರಮ ಬಾಂಗ್ಲಾದೇಶಿಗರು, ರೋಹಿಂಗ್ಯಗಳ ಸಮಸ್ಯೆ ಎಷ್ಟು ತೀವ್ರವಾಗಿದೆಯೋ, ತಮಿಳುನಾಡಿನೊಂದಿಗೆ ಇರುವ ಸಮಸ್ಯೆ ಏನೆಂದರೆ, ಶ್ರೀಲಂಕಾದ ತಮಿಳಿಯನ್ನರು. ಆದರೆ, ಟೂರಿಸ್ಟ್‌ ಫ್ಯಾಮಿಲಿ ಸಿನಿಮಾ ನಿರಾಶ್ರಿತರ ಅಕ್ರಮ ಪ್ರವೇಶವನ್ನು ಅಪರಾಧ ಎನ್ನುವ ಬದಲಿಗೆ ಸಹಾನುಭೂತಿಯಿಂದ ನೋಡುತ್ತದೆ. ಧಾರ್ಮಿಕ ದ್ವೇಷವನ್ನು ಹರಡುತ್ತದೆ, ದೇಶದ ವಿಚಾರದಲ್ಲಿ ಮೊದಲು ಖಂಡಿಸಬೇಕಾದ ಕೆಲವು ಅಂಶಗಳನ್ನು ಸಿನಿಮಾ ಲೀಲಾಜಾಲವಾಗಿ ವೈಭವೀಕರಿಸಿದ್ದು ಕಾಣುತ್ತದೆ.

ಸಿನಿಮಾದಲ್ಲಿ ಹಿಂದಿ ಮಾತನಾಡುವ ಪೊಲೀಸ್‌ ಅಧಿಕಾರಿಯನ್ನು ವಿಲನ್‌ ರೀತಿಯಲ್ಲಿ ಚಿತ್ರಿಸಲಾಗಿದ್ದರೆ, ಶ್ರೀಲಂಕಾದ ಒಳನುಸುಳುಕೋರರನ್ನು ದೇಶದ ಒಳಗೆ ಬಿಟ್ಟ ತಮಿಳು ಮಾತನಾಡುವ ಪೊಲೀಸ್‌ ಅಧಿಕಾರಿಯನ್ನು ಉತ್ತಮ ವ್ಯಕ್ತಿಯನ್ನಾಗಿ ಚಿತತ್ರಣ ಮಾಡಲಾಗಿದೆ. ಅಕ್ರಮ ವಲಸಿಗರನ್ನು ಬೆಂಬಲಿಸುವ ಎಲ್ಲಾ ತಮಿಳು ಕಾಲೋನಿಯ ಜನರ ನಿರ್ಧಾರವೇ ತಪ್ಪು. ಇದು ಎಲ್ಲರೂ ತಮಿಳಿಗರು ದೇಶದ ಕಾನೂನು ಪಾಲಿಸುವ ನಾಗರಿಕರಲ್ಲ ಎನ್ನೂವುದನ್ನೂ ತೋರಿಸಿದಂತಾಗುತ್ತದೆ.

ಗೋಮಾಂಸ ಸೇವನೆಯ ಕುರಿತಾದ ಸಂಭಾಷಣೆಯಂತಹ ಉದಾಹರಣೆಗಳನ್ನು ಬಹಳ ತಮಾಷೆ ಮಾಡಲಾಗಿದ್ದರೆ, ಇತರ ಅಂಶಗಳನ್ನು ಸೂಕ್ಷ್ಮವಾಗಿ ಪದರಗಳಲ್ಲಿ ತುಂಬಿಸಲಾಗಿದೆ. ಥಿಯೇಟರ್‌ನಲ್ಲಿ ಸಿನಿಮಾ ಬಿಡುಗಡೆಯಾದಾಗ ಎಲ್ಲರೂ ಯಾವುದೇ ಅಭಿಪ್ರಾಯಗಳಿಲ್ಲದೆ ಸಿನಿಮಾ ವೀಕ್ಷಣೆ ಮಾಡಿದರೆ, ಒಟಿಟಿಯಲ್ಲಿ ಬಿಡುಗಡೆ ಆದ ಬಳಿಕ ಇಂಥ ಚರ್ಚೆಗಳು ತೀವ್ರವಾಗಿದೆ.

ಈ ಸಿನಿಮಾ ಅಂದಾಜು 20 ವರ್ಷಗಳ ಹಿಂದೆ ಪ್ರಭಾಸ್‌ ಸ್ಟಾರ್‌ ಆಗಿ ಬಂದ ಛತ್ರಪತಿ ಸಿನಿಮಾವನ್ನು ಹೋಲುತ್ತದೆ. ಛತ್ರಪತಿ ಸಿನಿಮಾದಲ್ಲಿ ಪ್ರಭಾಸ್‌ ಹಾಗೂ ಆತನ ಸ್ನೇಹಿತರು ಶ್ರೀಲಂಕಾದ ಭಾರತಕ್ಕೆ ನಿರಾಶ್ರಿತರಾಗಿ ಆಗಮಿಸಿ ವೈಜಾಗ್‌ ತಲುಪಿರುತ್ತಾರೆ. ಆದರೆ, ಪ್ರಭಾಸ್‌ ಸಿನಿಮಾದಲ್ಲಿ ಡೈಲಾಗ್‌ಗಳು ಹಾಗೂ ಫೈಟಿಂಗ್‌ನ ಅಬ್ಬರದ ನಡುವೆ ಅಕ್ರಮ ವಲಸಿಗರ ವಿಚಾರ ಅಷ್ಟಾಗಿ ಗಮನಕ್ಕೆ ಬಂದಿರಲಿಲ್ಲ. ಆದರೆ, ಟೂರಿಸ್ಟ್‌ ಫ್ಯಾಮಿಲಿಯ ಈ ವಿಚಾರ ಗಮನಕ್ಕೆ ಬಂದಿರುವ ಹೊತ್ತಿನಲ್ಲಿ, ಛತ್ರಪತಿ ಸಿನಿಮಾದ ಕಥೆಯೂ ಕೂಡ ಚರ್ಚೆಗೆ ಕಾರಣವಾಗಿದೆ.

ಕೆಲವು ಪ್ರಭಾಸ್‌ ಅಭಿಮಾನಿಗಳು ಛತ್ರಪತಿ ಸಿನಿಮಾದಲ್ಲಿ ಪ್ರಬಾಸ್‌ ಅಧಿಕೃತ ನಿರಾಶ್ರಿತನಾಗಿ ಭಾರತಕ್ಕೆ ಬಂದಿರುತ್ತಾರೆ. ಸರ್ಕಾರದಲ್ಲೂ ಆತಕ ಬಗ್ಗೆ ದಾಖಲೆಗಳು ಇದ್ದವು ಅನ್ನೋದನ್ನೂ ಸಿನಿಮಾದಲ್ಲಿ ತೋರಿಸಿದ್ದಾರೆ ಎನ್ನುವ ಮೂಲಕ ಸಿನಿಮಾದ ಕಥೆಯನ್ನು ಡಿಫೆಂಡ್‌ ಮಾಡಿಕೊಂಡಿದ್ದಾರೆ. ಆದರೆ, ಟೂರಿಸ್ಟ್ ಫ್ಯಾಮಿಲಿ ಸಿನಿಮಾದಲ್ಲಿ ಅಂಥವು ಯಾವುದೇ ಕಾಣುವುದಿಲ್ಲ. ಶ್ರೀಲಂಕಾದಿಂದ ಅಕ್ರಮವಾಗಿ ವಲಸಿಗರಾಗಿ ಬಂದಿದ್ದವರನ್ನು ನಮ್ಮವರೇ ಪೊಲೀಸರಿಂದ ಬಚಾವ್‌ ಮಾಡುವ ಕಥೆಯನ್ನು ನಾವು ಧಾರಾಳವಾಗಿ ಎಂಜಾಯ್‌ ಮಾಡುತ್ತಿದ್ದೇವೆ. ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸುವವರು ಹೆಚ್ಚಾಗಿರುವಾಗ, ನಿರಾಶ್ರಿತರ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈಗ, ಟೂರಿಸ್ಟ್ ಫ್ಯಾಮಿಲಿ ಚಿತ್ರದ ತಿರುಳು ಹಾಗೂ ನೀಡುತ್ತಿರುವ ಸಂದೇಶ ವಿವಾದಕ್ಕೆ ಕಾರಣವಾಗಿದೆ.

ಒಂದು ಚಿತ್ರ ಹಿಟ್‌ ಅಥವಾ ಫ್ಲಾಪ್‌ ಎನ್ನುವುದು ಸಂಪೂರ್ಣ ಭಿನ್ನ ಪರಿಕಲ್ಪನೆ. ಕೆಲವು ಕೆಟ್ಟ ಚಿತ್ರಗಳು, ಕೆಟ್ಟ ಸಂದೇಶ ನೀಡುವಂಥ ಹಿಟ್‌ ಆದರೆ, ಇನ್ನೂ ಕೆಲವು ಒಳ್ಳೆಯ ಚಿತ್ರಗಳು, ಒಳ್ಳೆಯ ಸಂದೇಶ ನೀಡುವ ಸಿನಿಮಾಗಳು ಸೋಲುತ್ತವೆ.