ಶ್ರೀದೇವಿಯದ್ದು ಆಕಸ್ಮಿಕ ಸಾವಲ್ಲ, ಕೊಲೆ: ಮಾಜಿ ಪೊಲೀಸ್

Ex cop doubts Sridevis death could be a murder
Highlights

ಬಾಲಿವುಡ್ ಸೂಪರ್‌ಸ್ಟಾರ್ ಶ್ರೀದೇವಿ ಅಗಲಿ ತಿಂಗಳು ಮೂರಾದರೂ ಅವರ ಅಭಿಮಾನಿಗಿಳಿಗಿನ್ನೂ ಈ ನೋವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಸಾವಿನ ಬಗ್ಗೆ ನೂರಾರು ಊಹಾಪೋಹಗಳಿದ್ದು, ಸಾವಿನ ಕಾರಣವಿನ್ನು ನಿಗೂಢವಾಗಿಯೇ ಇದೆ. 'ಶ್ರಿದೇವಿಯದ್ದು ಸಹಜ ಸಾವಲ್ಲ, ಕೊಲೆ,' ಎಂದು ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಇದೀಗ ಹೇಳಿರುವುದು ಮತ್ತೆ ಸುದ್ದಿಯಾಗಿದೆ.

ಬೆಂಗಳೂರು: ಬಾಲಿವುಡ್ ಸೂಪರ್‌ಸ್ಟಾರ್ ಶ್ರೀದೇವಿ ಅಗಲಿ ತಿಂಗಳು ಮೂರಾದರೂ ಅವರ ಅಭಿಮಾನಿಗಿಳಿಗಿನ್ನೂ ಈ ನೋವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಸಾವಿನ ಬಗ್ಗೆ ನೂರಾರು ಊಹಾಪೋಹಗಳಿದ್ದು, ಸಾವಿನ ಕಾರಣವಿನ್ನು ನಿಗೂಢವಾಗಿಯೇ ಇದೆ. 'ಶ್ರಿದೇವಿಯದ್ದು ಸಹಜ ಸಾವಲ್ಲ, ಕೊಲೆ,' ಎಂದು ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಇದೀಗ ಹೇಳಿರುವುದು ಮತ್ತೆ ಸುದ್ದಿಯಾಗಿದೆ.

ವೇದ್ ಭೂಷಣ್ ಎಂಬ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಶ್ರೀದೇವಿ ಸಾವನ್ನು ಅನುಮಾನದಿಂದ ನೋಡುತ್ತಿದ್ದು, 'ಕೊಲೆ' ಎಂದೇ ಆರೋಪಿಸುತ್ತಿದ್ದಾರೆ. 'ಶ್ರೀದೇವಿ ಮೃತಪಟ್ಟ ಹೊಟೇಲ್ ಕೊಠಡಿಯೊಳಗೆ ಹೋಗಲು ಅನುವು ಮಾಡಿಕೊಟ್ಟಿರಲಿಲ್ಲ. ಆದರೆ, ಪಕ್ಕದ ಕೊಠಡಿಯಿಂದ ಸಾವಿನ ಸನ್ನಿವೇಶಗಳನ್ನುಪರಿಶೀಲಿಸಿದ್ದು, ಬಾತ್ ಟಬ್‌ನೊಳಗೆ ಬಿದ್ದು ಮೃತಪಟ್ಟಿರುವುದು ಅನುಮಾನ. ಯಾವುದೇ ಕುರುಹುಗಳಿಲ್ಲದಂತೆ, ಸಾಯೋವರೆಗೂ ಒಬ್ಬರನ್ನು ಬಾತ್‌ಟಬ್‌ನಲ್ಲಿ ಮುಳುಗಿಸಿ, ಸಾಯಿಸುವುದು ಸುಲಭ. ಶ್ರೀದೇವಿಯದ್ದು ಕೊಲೆಯಾಗಿರಬಹುದು,' ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಮೊರೆ ಹೋಗಿದ್ದು ಫಿಲ್ಮ್ ಮೇಕರ್‌:

ಶ್ರೀದೇವಿಯದ್ದು ಅಸಹಜ ಸಾವು. ಈ ಬಗ್ಗೆ ಮತ್ತೊಮ್ಮೆ ತನಿಖೆಯಾಗಬೇಕೆಂದು ಆಗ್ರಹಿಸಿ ಮೊದಲು ದಿಲ್ಲಿ ಹೈ ಕೋರ್ಟ್ ಮೊರೆ ಹೋಗಿದ್ದರು. ಅವರ ಅರ್ಜಿಯನ್ನು ಕೋರ್ಟ್ ತಿರ್ಸಕರಿಸಿದ್ದರಿಂದ ನಂತರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, 'ಸಾವಿನ ಕುರಿತು ಭಾರತ ಹಾಗೂ ದುಬೈ ರಾಯಭಾರಿ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿದ್ದು, ಈ ಬಗ್ಗೆ ಮತ್ತೆ ಮತ್ತೊಮ್ಮೆ ತನಿಖೆ ನಡೆಸುವ ಅಗತ್ಯವಿಲ್ಲ,' ಎಂದು ಕೋರ್ಟ್ ಹೇಳಿ, ಅರ್ಜಿಯನ್ನು ತಿರಸ್ಕರಿಸಿತ್ತು.

ಬಾಲಿವುಡ್‌ ಅನ್ನು ಸುಮಾರು ನಾಲ್ಕು ದಶಕಗಳ ಕಾಲವನ್ನಾಳಿದ ಶ್ರೀದೇವಿ ತಮ್ಮ ಆಪ್ತರ ಮದುವೆಗೆಂದು ದುಬೈಗೆ ತೆರಳಿದ್ದಾಗ, ಹೊಟೇಲ್‌ ಕೊಠಡಿಯೊಂದರಲ್ಲಿ ಅನುಮಾನಸ್ಪದವಾಗಿ ಮೃತಪಟ್ಟಿದ್ದು, ಆಕಸ್ಮಿಕ ಸಾವೆಂದು ಪ್ರಕರಣವನ್ನು ಮುಚ್ಚಲಾಯಿತು. ಹೃದಯಾಘಾತ, ಅಪಘಾತ.. ಹೀಗೆ ಎರಡು ದಿನಗಳ ಊಹಾಪೋಹಗಳ ನಂತರ ಶ್ರೀದೇವಿ ಆಕಸ್ಮಿಕವಾಗಿ ಬಾತ್‌ಟಬ್‌ನಲ್ಲಿ ಬಿದ್ದು ಮೃತಪಟ್ಟಿದ್ದಾರೆಂದು ವರದಿ ನೀಡಲಾಯಿತ್ತು.

loader