ಇತ್ತೀಚಿಗೆ ನಿಧನ ಹೊಂದಿದ ಬಾಲಿವುಡ್ ತಾರೆಗಳಾದ ಶ್ರೀದೇವಿ ಹಾಗೂ ಶಶಿ ಕಪೂರ್’ರವರನ್ನು ಆಸ್ಕರ್ ಅಕಾಡೆಮಿ ಅವಾರ್ಡ್ ಸಮಾರಂಭದಲ್ಲಿ ಗೌರವಿಸಲಾಯಿತು
ಬೆಂಗಳೂರು (ಮಾ. ೦5): ಇತ್ತೀಚಿಗೆ ನಿಧನ ಹೊಂದಿದ ಬಾಲಿವುಡ್ ತಾರೆಗಳಾದ ಶ್ರೀದೇವಿ ಹಾಗೂ ಶಶಿ ಕಪೂರ್’ರವರನ್ನು ಆಸ್ಕರ್ ಅಕಾಡೆಮಿ ಅವಾರ್ಡ್ ಸಮಾರಂಭದಲ್ಲಿ ಗೌರವಿಸಲಾಯಿತು.
ದಿ ಹೌಸ್ ಹೋಲ್ಡರ್, ಶೇಕ್ಸ್’ಪಿಯರ್ ವಾಲಾ, ದಿ ಗುರು, ಬಾಂಬೆ ಟಾಕಿ, ಇನ್ ಕಸ್ಟಡಿ ಮುಂತಾದ ಸೂಪರ್ ಹಿಟ್ ಚಿತ್ರಗಳ ಮೂಲಕ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದರು. ಕೆಲ ದಿನಗಳ ಹಿಂದೆ ನಿಧನ ಹೊಂದಿದ ಶ್ರೀದೇವಿ ತಮ್ಮ ಅಭಿನಯ, ಸೌಂದರ್ಯದಿಂದ ಜನರ ಮನಸ್ಸನ್ನು ಗೆದ್ದಿದ್ದರು. ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಇವರಿಬ್ಬರನ್ನು ಗೌರವಿಸಲಾಯಿತು.
