ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದರಾ ಶ್ರೀದೇವಿ..? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಅಂಕಲ್..!

First Published 11, Mar 2018, 6:14 PM IST
Sridevi was in pain due to Boney Kapoor financial instability claims late screen legend uncle
Highlights

ಚಿತ್ರ ನಿರ್ಮಾಪಕರು ಶ್ರೀದೇವಿ ಸಿನಿಮಾಗೆ ಹಣಹೂಡಿ ಸಾಕಷ್ಟು ಬಾರಿ ಕೈಸುಟ್ಟುಕೊಂಡಿದ್ದರು. ಈ ನಷ್ಟವನ್ನು ತುಂಬಿಕೊಡಲು ಶ್ರೀದೇವಿ ಕೆಲ ಆಸ್ತಿಗಳನ್ನು ಮಾರಾಟ ಮಾಡಿದ್ದರು. ಚಿತ್ರರಂಗಕ್ಕೆ ಗುಡ್'ಬೈ ಹೇಳಿದ್ದ ಶ್ರೀದೇವಿ, ಹಣಕಾಸಿನ ತೊಂದರೆಯಿಂದಾಗಿಯೇ  1997ರಲ್ಲಿ ಮತ್ತೆ 'ಜುದಾಯಿ' ಮೂಲಕ ಬೆಳ್ಳಿತೆರೆಗೆ ಮರಳಿದ್ದರು.

ಸಿನಿಮಾ ರಂಗದ ಮೋಹಕ ತಾರೆ ಶ್ರೀದೇವಿ ದಿಢೀರ್ ಸಾವಿನ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಲೇ ಇದ್ದು, ಇದೀಗ ಮತ್ತೋದು ಅನಿರೀಕ್ಷಿತ ಮಾಹಿತಿ ಹೊರಬಿದ್ದಿದೆ. ಕಳೆದ ತಿಂಗಳ 24ರಂದು ದುಬೈನಲ್ಲಿ ಶ್ರೀದೇವಿ ಅನಿರೀಕ್ಷಿತ ಸಾವಿಗೀಡಗಿದ್ದರು. ಆದರೆ ಇದೀಗ ಶ್ರೀದೇವಿ ಚಿಕ್ಕಪ್ಪ ವೇಣುಗೋಪಾಲ್ ರೆಡ್ಡಿ ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದು, ಶ್ರೀದೇವಿ ಸಾಕಷ್ಟು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ.

ಚಿತ್ರ ನಿರ್ಮಾಪಕರು ಶ್ರೀದೇವಿ ಸಿನಿಮಾಗೆ ಹಣಹೂಡಿ ಸಾಕಷ್ಟು ಬಾರಿ ಕೈಸುಟ್ಟುಕೊಂಡಿದ್ದರು. ಈ ನಷ್ಟವನ್ನು ತುಂಬಿಕೊಡಲು ಶ್ರೀದೇವಿ ಕೆಲ ಆಸ್ತಿಗಳನ್ನು ಮಾರಾಟ ಮಾಡಿದ್ದರು. ಚಿತ್ರರಂಗಕ್ಕೆ ಗುಡ್'ಬೈ ಹೇಳಿದ್ದ ಶ್ರೀದೇವಿ, ಹಣಕಾಸಿನ ತೊಂದರೆಯಿಂದಾಗಿಯೇ  1997ರಲ್ಲಿ ಮತ್ತೆ 'ಜುದಾಯಿ' ಮೂಲಕ ಬೆಳ್ಳಿತೆರೆಗೆ ಮರಳಿದ್ದರು.

ಕೆಲ ವರದಿಗಳನ್ನು ಉದಾಹರಣೆಯಾಗಿ ನೀಡಿ ಮಾತನಾಡಿದ ರೆಡ್ಡಿ, ಬೋನಿ ಕಪೂರ್ ನಿರ್ಮಾಣ ಮಾಡಲು ಹೊರಟಿದ್ದ ಚಿತ್ರ ಆರ್ಥಿಕ ಸಂಕಷ್ಟದಿಂದ ತೆರೆಕಾಣಲಿಲ್ಲ. ಆಗ ಕಪೂರ್ ಕುಟುಂಬ ತುಂಬಾ ಆರ್ಥಿಕ ಸಂಕಷ್ಟದಲ್ಲಿತ್ತು. ಆಗ ಶ್ರೀದೇವಿ ಆಸ್ತಿಗಳನ್ನು ಮಾರಾಟ ಮಾಡಿ ಸಾಲ ತೀರಿಸಿದ್ದರು. ಆ ಬಳಿಕವೇ ಅವರ ಬದುಕು ಹಳಿಗೆ ಬಂದಿತ್ತು ಎಂದು ಖಾಸಗಿ ವಾಹಿನಿಯೊಂದಿಗೆ ಮಾಹಿತಿ ಹೊರಹಾಕಿದ್ದಾರೆ.

loader