2018ನೇ ಇಸವಿಯು ಬಾಲಿವುಡ್’ಗೆ ಕರಾಳ ವರ್ಷವಾಗಿ ಕಾಡುತ್ತಿದೆಯಾ ಎನ್ನುವ ಮಾತುಗಳು ಇದೀಗ ಕೇಳಿ ಬಂದಿವೆ.

ಮುಂಬೈ : 2018ನೇ ಇಸವಿಯು ಬಾಲಿವುಡ್’ಗೆ ಕರಾಳ ವರ್ಷವಾಗಿ ಕಾಡುತ್ತಿದೆಯಾ ಎನ್ನುವ ಮಾತುಗಳು ಇದೀಗ ಕೇಳಿ ಬಂದಿವೆ.

ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ ನಟ ಇರ್ಫಾನ್ ಖಾನ್ ಅವರು ನ್ಯೂರೋ ಎಂಡೋಕ್ರೈನ್ ಸಮಸ್ಯೆಯಿಂದ ಬಳಲುತ್ತಿರುವ ಬಗ್ಗೆ ಸುದ್ದಿಯಾಗಿ ಅವರು ಮಾಡುತ್ತಿದ್ದ ಚಿತ್ರವನ್ನು ಅರ್ಧಕ್ಕೆ ಬಿಟ್ಟು ಚಿಕಿತ್ಸೆಗೆಂದು ವಿದೇಶಕ್ಕೆ ತೆರಳಿದರು.

ಅದಕ್ಕೂ ಮುನ್ನವೇ ಲೇಡಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದ ನಟಿ ಶ್ರೀ ದೇವಿ ಅವರು ಅತೀ ಚಿಕ್ಕವಯಸ್ಸಿಗೆ ಮೃತಪಟ್ಟರು. ದುಬೈಗೆ ಮದುವೆ ಕಾರ್ಯಕ್ರಮಕ್ಕೆಂದು ತೆರಳಿದ್ದ ವೇಳೆಯೇ ಅಲ್ಲಿಯ ಹೋಟೆಲ್’ನಲ್ಲಿಯೇ ಶ್ರೀ ದೇವಿ ಮೃತರಾದರು.

ಇದೀಗ ತಮ್ಮ ಚಿತ್ರಗಳಲ್ಲಿ ಕೋಟಿ ಕೋಟಿ ಆದಾಯವನ್ನು ತರುತ್ತಿದ್ದ ಸಲ್ಮಾನ್ ಖಾನ್’ಗೆ ಜೈಲು ಶಿಕ್ಷೆಯಾಗಿದೆ. ಇದರಿಂದ 2018ನೇ ಇಸವಿಯು ಇದರಿಂದ ಬಾಲಿವುಡ್’ಗೆ ಕರಾಳ ವರ್ಷವಾಗಿದೆಯಾ ಎನ್ನುವ ಮಾತು ಇದೀಗ ಕೇಳಿ ಬರುತ್ತಿದೆ.