ನಟ ವಿಷ್ಣುವರ್ಧನ್ ಹುಟ್ಟುಹಬ್ಬದ ಈ ವೇಳೆಯಲ್ಲಿ ಅವರ ನೆನಪುಗಳು ಅಭಿಮಾನಿಗಳನ್ನು ಸಹಜವಾಗಿಯೇ ಕಾಡುತ್ತಿದೆ. 1986ರಲ್ಲಿ ತೆರೆಗೆ ಬಂದ ‘ವಿಡುದಲೈ’ ಸಿನಿಮಾದಲ್ಲಿ ವಿಷ್ಣುವರ್ಧನ್ ಹಾಗೂ ರಜನಿಕಾಂತ್ ಒಟ್ಟಾಗಿ ನಟಿಸಿದ್ದರು. ಈ ಚಿತ್ರ ಭಾರೀ ಯಶಸ್ಸು ಕಂಡಿತ್ತು.

ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬದ ಸಂಭ್ರಮ!

ಕನ್ನಡದ ಮೇರು ನಟ, ಸಾಹಸಸಿಂಹ ಖ್ಯಾತಿಯ ಡಾ ವಿಷ್ಣುವರ್ಧನ್ (Vishnuvardhan) ಅವರೀಗ 'ಕರ್ನಾಟಕ ರತ್ನ' ಪಟ್ಟವನ್ನೂ ಗಿಟ್ಟಿಸಿಕೊಂಡ ಕನ್ನಡದ ಕುವರ. 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ನಟ ಡಾ ವಿಷ್ಣುವರ್ಧನ್ ಅವರು ನಮ್ಮನ್ನಗಲಿ ಸಾಕಷ್ಟು ಸಮಯ ಕಳೆದಿದೆ. ಆದರೆ, ಅವರ ಸವಿನೆನಪು ಅಜರಾಮರ. ಅಷ್ಟೇ ಅಲ್ಲ, ಇಂದು (18 September) ನಟ ವಿಷ್ಣುವರ್ಧನ್ ಅವರ 75ನೇ ಹುಟ್ಟುಹಬ್ಬದ ಸಂಭ್ರಮ. ಇಂದು ಅವರಂತೇ ಸೂಪರ್ ಸ್ಟಾರ್ ಆಗಿರುವ ಮತ್ತೊಬ್ಬ ನಟ ರಜನಿಕಾಂತ್ ಹಾಗೂ ವಿಷ್ಣುವರ್ಧನ್ ನಡುವಿನ ಸಂಬಂಧದ ಬಗ್ಗೆ ತಿಳಿಯೋಣ.

ನಟ ವಿಷ್ಣುವರ್ಧನ್ ಅವರ 75ನೇ ಜನ್ಮದಿನದ ಸಂದರ್ಭದಲ್ಲಿ, ಅವರ ಹಾಗೂ ರಜನಿಕಾಂತ್ (Rajinikanth) ಅವರ ನಡುವಿನ ಆತ್ಮೀಯ ಬಾಂಧವ್ಯವನ್ನು ತೋರಿಸುವ ಅಪರೂಪದ ವೀಡಿಯೊ ವೈರಲ್ ಆಗಿದೆ. 'ವಿಡುದಲೈ' ಚಿತ್ರದ ಈ ದೃಶ್ಯವು ಇಬ್ಬರ ಅದ್ಭುತ ಗೆಳೆತನವನ್ನು ಪ್ರತಿಬಿಂಬಿಸುತ್ತದೆ. ಇದರ ಜೊತೆಗೆ, ಈ ಇಬ್ಬರೂ ನಟರು ಕನ್ನಡದ ‘ಸಹೋದರರ ಸವಾಲ್’, ‘ಗಲಾಟೆ ಸಂಸಾರ’ ಮುಂತಾದ ಚಿತ್ರಗಳಲ್ಲೂ ಒಟ್ಟಿಗೇ ನಟಿಸಿದ್ದಾರೆ.

ಇಂದು, ಸೆಪ್ಟೆಂಬರ್ 18ರಂದು ನಟ ವಿಷ್ಣುವರ್ಧನ್ ಜನ್ಮದಿನ. ಈ ವೇಳೆ ಅವರ ಬಗೆಗಿನ ಅಪರೂಪದ ಮಾಹಿತಿಗಳು ಸಾಕಷ್ಟು ವೈರಲ್ ಆಗುತ್ತಿವೆ. ಇವುಗಳಲ್ಲಿ ವಿಷ್ಣುವರ್ಧನ್ ಹಾಗೂ ರಜನಿಕಾಂತ್ ನಡುವಿನ ಒಳ್ಳೆಯ ಸ್ನೇಹ ಸಂಬಂಧ ಕೂಡ ಒಂದು. ವಿಷ್ಣು ಹಾಗೂ ರಜನಿ ಇಬ್ಬರೂ ಬೆಸ್ಟ್ ಫ್ರೆಂಡ್ಸ್. ವಿಷ್ಣು ಕಂಡರೆ ರಜನಿಕಾಂತ್​ಗೆ ಎಲ್ಲಿಲ್ಲದ ಪ್ರೀತಿ, ರಜನಿ ಕಂಡರೆ ವಿಷ್ಣುಗೂ ಸೇಮ್. ಇವರಿಬ್ಬರ ಗೆಳೆತನ ವಿವರಿಸುವ ಅಪರೂಪದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ತಮಿಳಿನ ‘ವಿಡುದಲೈ’ ಸಿನಿಮಾದ ದೃಶ್ಯ.

ನಟ ವಿಷ್ಣುವರ್ಧನ್ ಹುಟ್ಟುಹಬ್ಬದ ಈ ವೇಳೆಯಲ್ಲಿ ಅವರ ನೆನಪುಗಳು!

ಈ ವಿಡಿಯೋನ ಅಭಿಮಾನಿಗಳು ರೀ-ಶೇರ್ ಮಾಡಿಕೊಳ್ಳುತ್ತಿದ್ದಾರೆ. ನಟ ವಿಷ್ಣುವರ್ಧನ್ ಹುಟ್ಟುಹಬ್ಬದ ಈ ವೇಳೆಯಲ್ಲಿ ಅವರ ನೆನಪುಗಳು ಅಭಿಮಾನಿಗಳನ್ನು ಸಹಜವಾಗಿಯೇ ಕಾಡುತ್ತಿದೆ. 1986ರಲ್ಲಿ ತೆರೆಗೆ ಬಂದ ‘ವಿಡುದಲೈ’ ಸಿನಿಮಾದಲ್ಲಿ ವಿಷ್ಣುವರ್ಧನ್ ಹಾಗೂ ರಜನಿಕಾಂತ್ ಒಟ್ಟಾಗಿ ನಟಿಸಿದ್ದರು. ಈ ಚಿತ್ರ ಭಾರೀ ಯಶಸ್ಸು ಕಂಡಿತ್ತು. ಶಿವಾಜಿ ಗಣೇಶನ್, ರಜನಿಕಾಂತ್ ಹಾಗೂ ವಿಷ್ಣುವರ್ಧನ್​ ಈ ಚಿತ್ರದಲ್ಲಿ ನಟಿಸಿದ್ದರು. ಕೆ. ವಿಜಯನ್ ನಿರ್ದೇಶನ ಈ ಸಿನಿಮಾದ ಒಂದು ದೃಶ್ಯ ಎಲ್ಲರ ಗಮನ ಸೆಳೆದಿತ್ತು, ಈಗಲೂ ಸಾಕಷ್ಟು ಜನಮೆಚ್ಚುಗೆ ಪಡೆಯುತ್ತಿದೆ.

ವಿಷ್ಣುನ ನೋಡಿಕೊಳ್ಳೋದು ನಟ ರಜನಿಕಾಂತ್!

ಸಿನಿಮಾದಲ್ಲಿ ಬಂದಿರೋ ಆ ದೃಶ್ಯ ಹೀಗಿದೆ. ನಟ ವಿಷ್ಣುವರ್ಧನ್ ಮೇಲೆ ಯಾರೋ ಗೂಂಡಾಗಳು ದಾಳಿ ಮಾಡಿರುತ್ತಾರೆ. ಅದರಿಂದ ಗಾಯಗೊಂಡು ವಿಷ್ಣು ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಾರೆ. ಆ ಸಮಯದಲ್ಲಿ ಅಲ್ಲಿ ವಿಷ್ಣುನ ನೋಡಿಕೊಳ್ಳೋದು ನಟ ರಜನಿಕಾಂತ್. ವಿಷ್ಣು ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ರಜನಿ ಸಿಗರೇಟ್ ಹಚ್ಚುತ್ತಾರೆ. ಒಂದು ಬಾರಿ ತಾವು ಸಿಗರೇಟ್ ಸೇದಿ ಬಳಿಕ ಅದನ್ನು ವಿಷ್ಣು ಬಾಯಿಗೆ ಇಡುತ್ತಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.