ನಟ ವಿಷ್ಣುವರ್ಧನ್ ಅವರು ಅಪ್ಪಟ ಕನ್ನಡಾಭಿಮಾನಿ. ಅವರು ಕನ್ನಡಪರ ಹೋರಾಟಗಳಲ್ಲಿ ಸಹ ಭಾಗವಹಿಸಿದ್ದವರು. ಜೊತೆಗೆ, ಅವರ ಸಿನಿಮಾಗಳಲ್ಲಿ ಬಹಳಷ್ಟು ಕನ್ನಡಪರ, ಕನ್ನಡಾಭಿಮಾನದ ಹಾಡುಗಳನ್ನು ಮೆರೆಸಲಾಗಿದೆ. ಅವುಗಳಲ್ಲಿ ಥಟ್ಟನೆ ನೆನಪಾಗುವುದು 'ಕನ್ನಡವೇ ನಮ್ಮಮ್ಮ..
‘ಕರ್ನಾಟಕ ರತ್ನ’ ಕಿರೀಟ ಧರಿಸಿದ ನಟ ಡಾ ವಿಷ್ಣುವರ್ಧನ್ ನೆನಪು:
ಕನ್ನಡದ ಸಾಹಸಸಿಂಹ ಖ್ಯಾತಿಯ ನಟ ವಿಷ್ಣುವರ್ಧನ್ (Dr Vishnuvardhn) ಅವರಿಗೆ ಇದೀಗ ಕರ್ನಾಟಕ ಸರ್ಕಾರ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಘೊಷಿಸಿದೆ. ಈ ಹಿನ್ನೆಲೆಯಲ್ಲಿ ನಟ ವಿಷ್ಣುವರ್ಧನ್ ಅವರ ಕನ್ನಡಾಭಿಮಾನ ಕೆಲವು ಹಾಡುಗಳನ್ನು ಇಲ್ಲಿ ನೆನಪು ಮಾಡಿಕೊಳ್ಳಲಾಗಿದೆ. ಅಂದಹಾಗೆ, ಇದೇ ವೇಳೆ, ಕರ್ನಾಟಕ ಸರ್ಕಾರವು ಇತ್ತೀಚೆಗೆ ನಮ್ಮನ್ನಗಲಿದ ಬಿ ಸರೋಜಾದೇವಿ ಅವರಿಗೂ ಕೂಡ ಇದೇ ವೇಳೆ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ಘೋಷಿಸಲಾಗಿದೆ.
ನಟ ಡಾ ವಿಷ್ಣುವರ್ಧನ್ ಅವರು ಕನ್ನಡದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಸಿನಿಮಾದ ಮೂಲಕ ಕನ್ನಡದ ಸ್ಟಾರ್ ನಟರಾಗಿ ಬೆಳೆದರು. ಆಮೇಲೆ ಅವರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಡಾ ರಾಜ್‌ಕುಮಾರ್ ಬಳಿಕ ಕನ್ನಡದಲ್ಲಿ ಅತೀ ಹೆಚ್ಚು ಸಿನಿಮಾ ಮಾಡಿರುವ ದಾಖಲೆ ಹೊಂದಿದ್ದಾರೆ. ಅವುಗಳಲ್ಲಿ ಸಾಕಷ್ಟು ಸಿನಿಮಾಗಳು ಸೂಪರ್ ಹಿಟ್ ದಾಖಲಿಸಿ, ಅವರಿಗೆ ಜನಮಾನಸದಲ್ಲಿ ಹಾಗೂ ಸಿನಿಮಾಪ್ರಿಯರಲ್ಲಿ ಅಚ್ಚಳಿಯದ ಸ್ಥಾನವನ್ನು ಕಲ್ಪಿಸಿಕೊಟ್ಟಿವೆ.
ವಿಷ್ಣುವರ್ಧನ್ ನಟನೆಯ ಸೂಪರ್ ಹಿಟ್ ಸಿನಿಮಾಗಳ ಪಟ್ಟಿ ಬಹಳ ದೊಡ್ಡದಿದೆ. ಆದರೆ, ಅವುಗಳಲ್ಲಿ ಕೆಲವನ್ನು ಇಲ್ಲಿ ಹೇಳಲಾಗಿದೆ. ಅವುಗಳಲ್ಲಿ ಮುಖ್ಯವಾಗಿ 'ನಾಗರಹಾವು', 'ಆಪ್ತಮಿತ್ರ', 'ಬಂಧನ' ಹಾಗೂ 'ಯಜಮಾನ' ಸಿನಿಮಾಗಳು ಎದ್ದು ಕಾಣಿಸುತ್ತವೆ.
ಸುಪ್ರಭಾತ, ಲಾಲಿ, ಹೊಂಬಿಸಿಲು, ಲಯನ್ ಜಗಪತಿರಾವ್, ಹಾಲುಂಡ ತವರು, ಲಾಲಿ, ವೀರಪ್ಪ ನಾಯಕ, ಆಪ್ತ ರಕ್ಷಕ, ದಿಗ್ಗಜರು, ಸಿಂಹಾದ್ರಿಯ ಸಿಂಹ, ಕೋಟಿಗೊಬ್ಬ, ಜಮೀನ್ದಾರು, ಲಾಲಿ ಹೀಗೆ ಹೇಳಹೊರಟರೆ ಲೆಕ್ಕಕ್ಕೆ ಸಿಗದಷ್ಟು. ಅವುಗಳಲ್ಲಿ ಕೆಲವು ಬಾಕ್ಸ್ ಆಫೀಸ್ ಸೂಪರ್ ಹಿಟ್ ಸಿನಿಮಾಗಳಾಗಿದ್ದು, ಕೆಲವು ವಿಮರ್ಶಕರ ಹಾಗೂ ಪ್ರೇಕ್ಷಕರ ಮೆಚ್ಚುಗೆ ಗಳಿಸಿವೆ. ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಸಿನಿಮಾ ನಟ ಸಂಪತ್‌ಕುಮಾರ್ ಅವರನ್ನು ರಾತ್ರೋರಾತ್ರಿ 'ವಿಷ್ಣುವರ್ಧನ್' ಅನ್ನೋ ಹೆಸರಲ್ಲಿ ಸ್ಟಾರ್ ನಟರನ್ನಾಗಿ ಮಾಡಿತ್ತು.
ಕರ್ನಾಟಕ ರತ್ನ ಡಾ ವಿಷ್ಣುವರ್ಧನ್ ಸಿನಿಮಾಗಳಲ್ಲಿನ 'ಕನ್ನಡಾಭಿಮಾನ'ದ ಹಾಡುಗಳು::
ನಟ ವಿಷ್ಣುವರ್ಧನ್ ಅವರು ಅಪ್ಪಟ ಕನ್ನಡಾಭಿಮಾನಿ. ಅವರು ಕನ್ನಡಪರ ಹೋರಾಟಗಳಲ್ಲಿ ಸಹ ಭಾಗವಹಿಸಿದ್ದವರು. ಜೊತೆಗೆ, ಅವರ ಸಿನಿಮಾಗಳಲ್ಲಿ ಬಹಳಷ್ಟು ಕನ್ನಡಪರ, ಕನ್ನಡಾಭಿಮಾನದ ಹಾಡುಗಳನ್ನು ಮೆರೆಸಲಾಗಿದೆ. ಅವುಗಳಲ್ಲಿ ಥಟ್ಟನೆ ನೆನಪಾಗುವುದು 'ಕನ್ನಡವೇ ನಮ್ಮಮ್ಮ, ಕನ್ನಡ ನಾಡಿನ ಜೀವನದಿ ಕಾವೇರಿ, ಕರ್ನಾಟಕದಾ ಇತಿಹಾಸದಲೀ ಸೇರಿದಂತೆ ಹಲವು ಹಾಡುಗಳು ಭಾರೀ ಜನಪ್ರಿಯತೆ ಪಡೆದಿವೆ. ಅವರ ನಟನೆಯ ಸಿನಿಮಾಗಳಲ್ಲಿ ಕನ್ನಡ ಭಾಷೆಯ ಅಭಿಮಾನಕ್ಕೆ ಯಾವತ್ತಿಗೂ ಪ್ರಾಮುಖ್ಯತೆ ಇತ್ತು.
ಅಷ್ಟೇಅಲ್ಲ, ವಿಷ್ಣು ನಟನೆಯ ಹಲವು ಹಾಡುಗಳನ್ನು ಜನರು ಯಾವತ್ತಿಗೂ ಗುನುಗುತ್ತಲೇ ಇರುತ್ತಾರೆ. ಅವುಗಳಲ್ಲಿ ಮುಖ್ಯವಾಗಿ 'ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ಈ ಭೂಮಿ ಬಣ್ಣದ ಬುಗುರಿ, ಪ್ರೇಮ ಚಂದ್ರಮ, ಕನ್ನಡನಾಡಿನ ಜೀವನದಿ, ಮಲ್ನಾಡ್ ಅಡಿಕೆ ಮೈಸೂರ್ ವೀಳ್ಯದೆಲೆ, ಹೃದಯಗೀತೆ ಹಾಡುತಿರೆ, ಬಾ ನನ್ನ ಸಂಗೀತ, ನೂರೊಂದು ನೆನಪು ಎದೆಯಾಳದಿಂದ, ಗರನೆ ಗರಗರನೆ ತಿರುಗಿದೆ ಧರಣಿ ಸೇರದಂತೆ ಹಲವಾರು ಚಿತ್ರಗೀತೆಗಳು ಯಾವತ್ತಿಗೂ ಮೆರಯಲು ಅಸಾಧ್ಯ ಎನ್ನುವಂತಿವೆ.
