200 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರು ಸೇರಿದಂತೆ ದೇಶಾದ್ಯಂತ ಇರುವ ಸಿನಿಮಾಪ್ರೇಮಿಗಳಿಗೆ ಮನರಂಜನೆ ನೀಡಿದ್ದಾರೆ ನಟ ವಿಷ್ಣುವರ್ಧನ್. ಅವರಿಗೆ ಸಿಕ್ಕ ಪ್ರಶಸ್ತಿ-ಪುರಸ್ಕಾರಗಳು ಅನೇಕ. ಅಷ್ಟೇ ಅಲ್ಲ, ನಟ ವಿಷ್ಣುವರ್ಧನ್ ಅವರು ಸಮಾಜಕ್ಕೆ ಹಾಗೂ ವೈಯಕ್ತಿಕವಾಗಿ ಬಹಳಷ್ಟು ಜನರಿಗೆ
ಕನ್ನಡದ ಸಾಹಸಸಿಂಹ ನಟ ವಿಷ್ಣುವರ್ಧನ್ (Dr Vishnuvardhn) ಅವರನ್ನು 'ನತದೃಷ್ಟ' ನಟ ಎನ್ನಬಹುದೇನೋ! ಕನ್ನಡ ಸಿನಿಮಾಲೋಕದಲ್ಲಿ ಮೇರುನಟ ಎಂಬ ಬಿರುದು ಪಡೆದವರು, ಬರೋಬ್ಬರಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದವರು. ಈ ಸ್ಟಾರ್ ಪಡೆದ ಪ್ರಶಸ್ತಿ, ಗಳಿಸಿದ ಹಣ ಯಾವುದೂ ಕಡಿಮೆಯೇನೂ ಅಲ್ಲ. ಆದರೆ, ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನದಲ್ಲಿ ಅವರು ಅನುಭವಿಸಿದ ಹಿಂಸೆ, ಅವಮಾನಗಳು ಅಪಾರ ಎನ್ನಬಹುದು.
ನಟ ವಿಷ್ಣುವರ್ಧನ್ ಅವರು ಬದುಕಿದ್ದಾಗ ಬಹಳಷ್ಟು ಬಹುಮಾನ ಹಾಗೂ ಅವಮಾನ ಅನುಭವಿಸಿದ್ದು ಬಹಳಷ್ಟು ಜನರಿಗೆ ಗೊತ್ತು. ಆದರೆ, ಅವರು ನಿಧನರಾಗಿ ಇಷ್ಟು ವರ್ಷ ಕಳೆದರೂ ಅವರಿಗೆ ಈಗಲೂ ಮತ್ತೆಮತ್ತೆ ಅವಮಾನಗಳು ಆಗುತ್ತಲೇ ಇವೆ. ಅಭಿಮಾನ್ ಸ್ಟೂಡಿಯೋದಲ್ಲಿ ಇದ್ದ ಡಾ ವಿಷ್ಣುವರ್ಧನ್ ಸಮಾಧಿಯನ್ನು ಇತ್ತೀಚೆಗೆ ನೆಲಸಮ ಮಾಡಲಾಯ್ತು. ಆ ಮೂಲಕ ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ ನಟ ವಿಷ್ಣುವರ್ಧನ್ ಸಮಾಧಿ ಇಲ್ಲದಂತಾಗಿದೆ.
ಮೈಸೂರಿನಲ್ಲಿ ನಟ ಡಾ ವಿಷ್ಣುವರ್ಧನ್ ಸಮಾಧಿಯನ್ನು 5 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲಾಗಿದೆ. ಆದರೆ, ನಟ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನಡೆದ ಜಾಗ ಅಭಿಮಾನ್ ಸ್ಟುಡಿಯೋದಲ್ಲಿ ಈಗ ಸಮಾಧಿಯೇ ಇಲ್ಲ. ಬೆಂಗಳೂರಿನಲ್ಲಿ ನಟ ವಿಷ್ಣು ಅಭಿಮಾನಿಗಳು ಅವರ ಹುಟ್ಟುಹಬ್ಬದಂದು ಅಥವಾ ಪುಣ್ಯಸ್ಮರಣೆ ದಿನದಂದು ಹೋಗಲು ಒಂದು ಜಾಗವೂ ಗತಿಯಿಲ್ಲ ಎಂಬಂತಾಗಿದೆ. ಆದರೆ, ಇದೀಗ ನಟ ಸುದೀಪ್, ನಿರ್ಮಾಪಕ ಕೆ. ಮಂಜು ಹಾಗೂ ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರೆಲ್ಲರ ಆಶಯದಂತೆ ಮತ್ತೆ ವಿಷ್ಣು ಸಮಾಧಿ ಬೆಂಗಳೂರಿನಲ್ಲಿ ತಲೆ ಎತ್ತಲಿದೆ ಎನ್ನಲಾಗುತ್ತಿದೆ.
ನಟ ವಿಷ್ಣುವರ್ಧನ್ ಕನ್ನಡದ ಮೇರು ನಟ ಎಂಬುದಕ್ಕೆ ಹೊಸ ಸಾಕ್ಷಿಯೇನೂ ಬೇಕಾಗಿಲ್ಲ. 200 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರು ಸೇರಿದಂತೆ ದೇಶಾದ್ಯಂತ ಇರುವ ಸಿನಿಮಾಪ್ರೇಮಿಗಳಿಗೆ ಮನರಂಜನೆ ನೀಡಿದ್ದಾರೆ ನಟ ವಿಷ್ಣುವರ್ಧನ್. ಅವರಿಗೆ ಸಿಕ್ಕ ಪ್ರಶಸ್ತಿ-ಪುರಸ್ಕಾರಗಳು ಅನೇಕ. ಅಷ್ಟೇ ಅಲ್ಲ, ನಟ ವಿಷ್ಣುವರ್ಧನ್ ಅವರು ಸಮಾಜಕ್ಕೆ ಹಾಗೂ ವೈಯಕ್ತಿಕವಾಗಿ ಬಹಳಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಕೇವಲ ನಟರಾಗಿ ಮಾತ್ರವಲ್ಲ, ವ್ಯಕ್ತಿ ಹಾಗೂ ವ್ಯಕ್ತಿತ್ವದಲ್ಲೂ ವಿಷ್ಣುವರ್ಧನ್ ಜನಮಾನಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದಾರೆ. ಅವರ ಹಲವು ಸಿನಿಮಾಗಳು ಒಂದು ವರ್ಷಗಳಿಗೂ ಹೆಚ್ಚು ಪ್ರದರ್ಶನ ಕಂಡಿವೆ.
ಹಾಗಿದ್ದರೆ 365 ದಿನಗಳಿಗೂ ಮೀರಿ ಪ್ರದರ್ಶನ ಕಂಡ ನಟ ವಿಷ್ಣುವರ್ಧನ್ ಅವರು ಸಿನಿಮಾಗಳು ಯಾವವು? ಇಲ್ಲಿದೆ ಅದಕ್ಕೆ ಉತ್ತರ- ಬಂಧನ, ಯಜಮಾನ ಹಾಗೂ ಆಪ್ತಮಿತ್ರ ಸಿನಿಮಾಗಳು ಬರೋಬ್ಬರಿ 365 ದಿನಗಳಿಗೂ ಹೆಚ್ಚು ಪ್ರದರ್ಶನ ಕಂಡಿವೆ. ಅಷ್ಟೇ ಅಲ್ಲ, ಬಹಳಷ್ಟು ಸಿನಿಮಾಗಳು 6 ತಿಂಗಳು ಯಶಸ್ವೀ ಪ್ರದರ್ಶನ ಕಂಡಿವೆ. ಇನ್ನು, 200, 100 ಹಾಗೂ 50 ದಿನಗಳ ಪ್ರದರ್ಶನ ಕಂಡ ಸಿನಿಮಾಗಳಿಗೆ ಲೆಕ್ಕವೇ ಇಲ್ಲ. ಇಂಥ ನಟ ವಿಷ್ಣುವರ್ಧನ್ ಅವರಿಗೆ ಡಾಕ್ಟರೇಟ್ ಕೂಡ ಒಲಿದಿದೆ. ಇದೀಗ ಮರಣೋತ್ತರ 'ಕರ್ನಾಟಕ ರತ್ನ ಪ್ರಶಸ್ತಿ' ಕೂಡ ಲಭಿಸುವ ಕಾಲ ಸನ್ನಿಹಿತವಾಗಿದೆ.
