ನಟ ಪ್ರಥಮ್ ಅವರು ಅಂಬೇಡ್ಕರ್ ಬಗ್ಗೆ 'ಸ್ವರ್ಗಕ್ಕೆ ಹೋಗಿ ಅಂಬೇಡ್ಕರ್ ಅವರನ್ನ ಭೇಟಿ ಮಾಡ್ತಿನಿ, ಅವರು ಸಂವಿಧಾನದಲ್ಲಿ ಕೊಟ್ಟಿರುವ ಕೆಲವು ಲೂಫ್‌ಹೋಲ್ಸ್‌ಗಳಿಂದ ಈಗ ಸಮಸ್ಯೆ ಆಗ್ತಿದೆ ಎಂಬರ್ಥದಲ್ಲಿ ನಟ ಪ್ರಥಮ್ ಮಾತಾಡಿದ್ದಾನೆ' ಎಂದಿದ್ದಾರೆ.
ನಟ, ಒಳ್ಳೇ ಹುಡುಗ ಖ್ಯಾತಿಯ ಪ್ರಥಮ್ (Olle Huduga Pratham) ಮತ್ತೆ ಸಂಕಷ್ಟದಲ್ಲಿ ಸಿಲುಕಿದ್ದಾರಾ? ಸಿಕ್ಕ ಮಾಹಿತಿ ಪ್ರಕಾರ ಹೇಳಬೇಕು ಎಂದರೆ, ಹೌದು ಎನ್ನಬಹುದು. ಏಕೆಂದರೆ, ಇದೀಗ ನಟ, ಒಳ್ಳೇ ಹುಡುಗ ಖ್ಯಾತಿಯ ಪ್ರಥಮ್ ಬಗ್ಗೆ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅಭಿಮಾನಿಗಳು ಸಿಟ್ಟಾಗಿದ್ದಾರೆ. 'ಅಖಿಲ ಭಾರತ ಅಬ್ದುಲ್ ಕಲಾಂ ಅಸೋಶಿಯೇಶನ್' ಹಾಗೂ 'ದಲಿತ ಸಂಘರ್ಷ ಸಮಿತಿ, ಜಯನಗರ' ಅದರ ಸದಸ್ಯರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬಂದು, ನಟ ಪ್ರಥಮ್ ವಿರುದ್ಧ ಮಾತನ್ನಾಡಿದ್ದಾರೆ.
ಈ ಬಗ್ಗೆ ಮಾತನ್ನಾಡಿರುವ ಮೇಲ್ಕಂಡ ಸಮಿತಿಯವರು ನಟ, ಬಿಗ್ ಬಾಸ್ ವಿನ್ನರ್ ಪ್ರಥಮ್ ವಿರುದ್ದ ಫಿಲಂ ಚೇಂಬರ್‌ಗೆ ದೂರು ದಾಖಲು ಮಾಡಿದ್ದಾರೆ. ನಟ ಪ್ರಥಮ್ ಅವರನ್ನು ಬ್ಯಾನ್ ಮಾಡಬೇಕು... ಕಿರುತರೆಯಲ್ಲೂ ಪ್ರಥಮ್‌ಗೆ ಅವಕಾಶ ನೀಡಬಾದ್ರು. ಅವರು 'ಸಂವಿಧಾನ ಶಿಲ್ಪಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ದೂಷಿಸಿದ್ದಾರೆ. ಅಂಬೇಡ್ಕರ್ ಅವರನ್ನ ಅವಹೇಳನ ಮಾಡಿದ್ದಾರೆ ಎಂದು ಹೇಳಿ ಅವರ ವಿರುದ್ಧ ಈ ಸಂಘಟನೆಗಳು ದೂರು ದಾಖಲಿಸಿದ್ದಾರೆ.
ನಟ ಪ್ರಥಮ್ ಅವರು ಅಂಬೇಡ್ಕರ್ ಬಗ್ಗೆ 'ಸ್ವರ್ಗಕ್ಕೆ ಹೋಗಿ ಅಂಬೇಡ್ಕರ್ ಅವರನ್ನ ಭೇಟಿ ಮಾಡ್ತಿನಿ, ಅವರು ಸಂವಿಧಾನದಲ್ಲಿ ಕೊಟ್ಟಿರುವ ಕೆಲವು ಲೂಫ್‌ಹೋಲ್ಸ್‌ಗಳಿಂದ ಈಗ ಸಮಸ್ಯೆ ಆಗ್ತಿದೆ ಎಂಬರ್ಥದಲ್ಲಿ ನಟ ಪ್ರಥಮ್ ಮಾತಾಡಿದ್ದಾನೆ' ಎಂದಿದ್ದಾರೆ. ಅಂಬೇಡ್ಕರ್ ಅವರಿಗೆ ನಟ ಪ್ರಥಮ್ ಅವರನ್ನು ಯಾವುದೇ ದೃಷ್ಟಿಯಲ್ಲಿ ಹೋಲಿಸಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರು ನಟ ಪ್ರಥಮ್‌ಗಿಂತ ಸಾವಿರ ಪಟ್ಟು ಮೇಲ್ಮಟ್ಟದಲ್ಲಿ ಇರುವವರು. ಅಂಥವರ ಬಗ್ಗೆ ಮಾತನ್ನಾಡುತ್ತಾರೆ ಎಂದರೆ ಇವರಿಗೆ ಏನೆನ್ನಬೇಕು.
ನಟ ಪ್ರಥಮ್ ಅವರ ಬಗ್ಗೆ ನಾನು (ಬೀದಿಯಲ್ಲಿ ಹೋಗುವ **) ಏನೋ ಹೇಳಬಹುದು. ಆದರೆ ನಮಗೆ ಕೆಟ್ಟ ಪದ ಬಳಸಿ ಗೊತ್ತಿಲ್ಲ, ಹೀಗಾಗಿ ನಾನು ಅವೆಲ್ಲಾ ಮಾತನ್ನಾಡೋದಿಲ್ಲ. ಆದರೆ, ಈ ನಟನನ್ನು ಸಿನಿಮಾರಂಗದಿಂದ ಹಾಗೂ ಕಿರುತೆರೆಯಿಂದಲೂ ಬ್ಯಾನ್ ಮಾಡಬೇಕು' ಎಂದಿದ್ದಾರೆ. ಜೊತೆಗೆ, ನಟ ಪ್ರಥಮ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ದೂರು ದಾಖಲಿಸಿದ್ದಾರೆ.
