ಮೈಸೂರು (ಅ. 21): ಯುವ ದಸರಾದಲ್ಲಿ ಪ್ರಪೋಸ್ ಮಾಡಿ ಸುದ್ದಿಯಾಗಿದ್ದ ನಿವೇದಿತಾ ಗೌಡ- ಚಂದನ್ ಶೆಟ್ಟಿ ಪ್ರೀತಿಗೆ ಇಂದು ನಿಶ್ಛಿತಾರ್ಥದ ಮುದ್ರೆ ಬೀಳಲಿದೆ. ಇಂದು ಮೈಸೂರಿನ ಖಾಸಗಿ ಹೊಟೇಲ್ ವೊಂದರಲ್ಲಿ ಚಂದನ್ - ನಿವೇದಿತಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. 

ನಿಶ್ಚಿತಾರ್ಥ ಸಮಾರಂಭಕ್ಕೆ ಆಪ್ತರು, ಸ್ನೇಹಿತರು, ಬಂದುಗಳಿಗೆ ಮಾತ್ರ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ. 

ನಾವು ಅಸಹ್ಯ ಎನಿಸುವಂತೆ ನಡೆದುಕೊಂಡಿಲ್ಲ: ಚಂದನ್ ಶೆಟ್ಟಿ

ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡಗೆ ಪ್ರಪೋಸ್ ಮಾಡಿದ್ದರು. ನಿವೇದಿತಾ ಗ್ರೀನ್ ಸಿಗ್ನಲ್ ಕಟ್ಟಿದ್ದರು. ಯುವ ದಸರಾದಂತ ಸಾರ್ವಜನಿಕ ವೇದಿಕೆಯಲ್ಲಿ ಈ ರೀತಿ ಪ್ರಪೋಸ್ ಮಾಡಿದ್ದು ತಪ್ಪು ಎಂದು ಚರ್ಚೆಯೂ ಆಯಿತು. ಕೊನೆಗೆ ಚಂದನ್ ಕ್ಷಮೆಯಾಚಿಸುವುದರ ಮೂಲಕ ವಿವಾದ ತಣ್ಣಗಾಗಿತ್ತು. 

ದಸರಾ ವೇದಿಕೆಯಲ್ಲಿ ಚಂದನ್ ಪ್ರಪೋಸ್; ಟೀಕಿಸಿದವರಿಗೆ ಉತ್ತರ ಕೊಟ್ಟ ನಿವೇದಿತಾ ಗೌಡ!

ಬಿಗ್ ಬಾಸ್ ಮನೆಗೆ ಇವರಿಬ್ಬರೂ ಸ್ಪರ್ಧಿಯಾಗಿ ಹೋಗಿದ್ದರು. ಅಲ್ಲಿಂದ ಪರಿಚಯವಾಗಿ, ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಪ್ರೀತಿಯಾಗಿ ತಿರುಗಲು ಹೆಚ್ಚು ದಿನ ಹಿಡಿಯಲಿಲ್ಲ. ಬಿಗ್ ಬಾಸ್ ನಿಂದ ಹೊರಬಂದ ಬಳಿಕ ಒಟ್ಟಾಗಿ ಕಾಣಿಸಿಕೊಳ್ಳ ತೊಡಗಿದ್ದರು. ಯುವ ದಸರಾ ವೇದಿಕೆಯಲ್ಲಿ ಅಧಿಕೃತವಾಗಿ ತಾವು ಪ್ರೀತಿಸುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ. 

"