Dharmendra: ಬಾಲಿವುಡ್‌ನ 'ಹಿ-ಮ್ಯಾನ್' ಎಂದೇ ಖ್ಯಾತರಾಗಿದ್ದ ಹಿರಿಯ ನಟ ಧರ್ಮೇಂದ್ರ (89) ವಯೋಸಹಜ ಕಾಯಿಲೆಗಳಿಂದ ಮುಂಬೈನಲ್ಲಿ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ 

ಮುಂಬೈ: ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಬಾಲಿವುಡ್ ನ ಹಿರಿಯ ನಟ ಧರ್ಮೇಂದ್ರ ನಿಧನರಾಗಿದ್ದಾರೆ. ಧರ್ಮೇಂದ್ರ ಅವರಿಗೆ 89 ವರ್ಷ ವಯಸ್ಸಾಗಿತ್ತು. ಧರ್ಮೇಂದ್ರ ಅವರು "ಹಿ-ಮ್ಯಾನ್" ಎಂದೇ ಖ್ಯಾತಿ ಪಡೆದಿದ್ದರು. ಧರ್ಮೇಂದ್ರ ಅವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ಕೆಲವು ದಿನಗಳಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅವರನ್ನು ಮನೆಗೆ ಕರೆದೊಯ್ಯಲಾಯಿತು ಮತ್ತು ಮನೆಯಿಂದಲೇ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಐಎಎನ್‌ಎಸ್ ವರದಿ ಪ್ರಕಾರ, ಧರ್ಮೇಂದ್ರ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಪವನ್ ಹನ್ಸ್ ಸ್ಮಶಾನದಲ್ಲಿ ನಡೆಸಲಾಗುವುದು. ಧರ್ಮೇಂದ್ರ ಅವರ ಪೂರ್ಣ ಹೆಸರು ಧರ್ಮೇಂದ್ರ ಕೇವಲ್ ಕೃಷ್ಣ ಡಿಯೋಲ್. ಅವರು ಡಿಸೆಂಬರ್ 8, 1935 ರಂದು ಪಂಜಾಬ್‌ನ ನಸ್ರಾನಿ ಗ್ರಾಮದಲ್ಲಿ ಜನಿಸಿದ್ದರು.

Scroll to load tweet…

Scroll to load tweet…

Scroll to load tweet…