'ಮೊಮ್ಮಗನಿಗೆ ಒಂದು ವರ್ಷ ತುಂಬಿದೆ.. ಅವನ ಮೊದಲ ತೊದಲ ನುಡಿ ತಾತಾ.. ಅಂಬಿ ಫೋಟೋ ನೋಡಿ ಗುರುತು ಹಿಡಿಯುತ್ತಾನೆ, ತಾತಾ ಅಂತಾನೆ.. ಎಂದಿದ್ದಾರೆ ಅಂಬರೀಷ್ 7ನೇ ವರ್ಷದ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಿದ್ದ ನಟಿ, ಮಾಜಿ ಸಂಸದೆ ಹಾಗೂ 'ಮಂಡ್ಯದ ಗಂಡು' ರೆಬೆಲ್ ಸ್ಟಾರ್ ಅಂಬರೀಷ್ ಪತ್ನಿ ಸುಮಲತಾ. 

ಅಂಬರೀಷ್ 7ನೇ ಪುಣ್ಯ ಸ್ಮರಣೆ

ಇಂದು (24 Noveber) ದಿವಗಂತ ರೆಬೆಲ್ ಸ್ಟಾರ್ ಅಂಬರೀಷ್ (Rebel Star Ambareesh) ಅವರ 7ನೇ ಪುಣ್ಯ ಸ್ಮರಣೆ. ಈ ನಿಮಿತ್ತ, ಅಂಬರೀಷ್ ಅವರ ಪತ್ನಿ, ನಟಿ ಹಾಗೂ ಮಾಜಿ ಸಂಸದೆ ಸುಮಲತಾ ಅಂಬರೀಷ್ (Sumalatha Amabreesh) ಅವರು ಕಂಠೀರವ ಸ್ಟುಡಿಯೋಗೆ ಬಂದು ಅಲ್ಲಿ ಸಂಪ್ರದಾಯ ಹಾಗೂ ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ, ಅಂಬರೀಷ್ ಹಾಗೂ ಸುಮಲತಾ ಅಭಿಮಾನಿಗಳು ಸಹ ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಅಂಬಿ ಪುಣ್ಯಸ್ಮರಣೆ ಸ್ಮರಣೆ ಬಳಿಕ ಸುಮಲತಾ ಅವರಿಗೆ ಕೇಳಲಾದ ಪ್ರಶ್ನೆಗಳಿಗೆ ಹಾಗೂ ತಮ್ಮ ಸ್ವಂತ ಅನಿಸಿಎಕಯನ್ನು ಸಹ ಹಂಚಿಕೊಂಡಿದ್ದಾರೆ. ಅದೇನು ಅಂತ ನೋಡಿ..

'ಅಂಬರೀಷ್ ನನಗೆ ಎಲ್ಲದಕ್ಕೂ ಸ್ಫೂರ್ತಿ. ಅವರಿಗೆ ಹತ್ತಿರವಾದ ಕ್ಷೇತ್ರದಲ್ಲಿ ನಾನು ಇರೋದು ಅವರಿಗೆ ಶಾಂತಿ ಸಿಗುತ್ತೆ. ಅಭಿಮಾನಿಗಳ ಪ್ರೀತಿ ಆಶೀರ್ವಾದ ಪ್ರತಿದಿನ ನಮಗೆ ಕಾಣ್ತಿದೆ. ಅಂಬರೀಷ್ ವಾಪಾಸ್ ಬಂದಿದ್ದಾರೆ ಮೊಮ್ಮಗನ ಮೂಲಕ ಅನ್ಸಿದೆ. ಜೊತೆಯಲ್ಲೇ ಇದೀನಿ ಎಲ್ಲೂ ಹೋಗಿಲ್ಲ ಅಂತ ಹೇಳ್ತಿರೋ ಹಾಗಿದೆ. ಅಂಬರೀಷ್ ಇದ್ದಾಗ ನಾನು ರಾಜಕೀಯದಿಂದ ದೂರ ಇದ್ದೆ . ರಾಜಕೀಯ ಬಗ್ಗೆ ಆಳವಾದ ಅನುಭವ ಆಗಿರ್ಲಿಲ್ಲ. ಒಂಟಿ ಹೆಣ್ಣಾಗಿ ಏನೆಲ್ಲ ಫೇಸ್ ಮಾಡ್ಬಾರ್ದು ಎಲ್ಲಾ ಅನುಭವಿಸಿದೀನಿ. ರಾಜಕಾರಣ ಅನ್ನೋದನ್ನ ಎದುರಿಸಬೇಕು, ಆ ಬಗ್ಗೆ ಬೇಸರವಿಲ್ಲ. ನನ್ನ ಪತಿ ಅಂಬರೀಷ್ ಗ್ರೇಟ್ ಮ್ಯಾನ್.. ನನಗೆ ಪಶ್ಚಾತಾಪಗಳು ಇಲ್ಲ ಲೈಫ್ ಅಲ್ಲಿ.. ಎಂದಿದ್ದಾರೆ ಸುಮಲತಾ ಅಂಬರೀಷ್.

ಅಭಿಷೇಕ್ ಎಸ್ಟಾಬ್ಲಿಷ್ ಆಗೋ ಸ್ಕ್ರಿಪ್ಟ್ ಸಿಗಬೇಕು

ಇದೇ ವೇಳೆ ಪುತ್ರ ಅಭಿಷೇಕ್ ಬಗ್ಗೆ ಸುಮಲತಾ ಅವರು ಹೀಗೆ ಹೇಳಿದ್ದಾರೆ.. 'ಅಭಿಷೇಕ್ ಎಸ್ಟಾಬ್ಲಿಷ್ ಆಗೋ ಸ್ಕ್ರಿಪ್ಟ್ ಸಿಗಬೇಕು. 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಅಭಿಷೇಕ್ ಗೆ ಹಿನ್ನಡೆ ಆಗಿತ್ತು. ಮುಂದೆ ಸಿನಿಮಾ ಮಾಡೋದಾದ್ರೆ ಸ್ಕ್ರಿಪ್ಟ್ ಚೆನ್ನಾಗಿ ಇದ್ರೆ ಮಾತ್ರ ಮಾಡ್ತಾನೆ. ಈ ಕಾಲದ ಜನರೇಶನ್ ಏನು ಬೇಕು ಅನ್ನೋದು ಅವ್ರಿಗೆ ಗೊತ್ತಿರುತ್ತೆ' ಎಂದಿದ್ದಾರೆ.

ಇನ್ನು ರಾಜಕೀಯದ ಬಗ್ಗೆ ಸುಮಲತಾ ಹೀಗೆ ಹೇಳಿದ್ದಾರೆ:- ಸಕ್ರಿಯೆ ರಾಜಕಾರಣ ಅಂದ್ರೆ ಏನು..? ಫಂಕ್ಷನ್, ಈವೆಂಟ್‌ಗಳಲ್ಲಿ ಕಾಣಿಸಿಕೊಳ್ಳೋದು ಸಕ್ರಿಯ ರಾಜಕಾರಣ ಅಲ್ಲಾ.. ಈ ಏಜ್ ಅಲ್ಲಿ ಮೊಮ್ಮಗನ ಜೊತೆ ಆಟಡಬೇಕು.. ಈ ಸಮಯ ಬಿಟ್ರೆ ಮೊಮ್ಮಗನ ಜೊತೆ ಟೈಮ್ ಸಿಗಲ್ಲ. ರಾಜಕೀಯದಿಂದ ಬ್ರೇಕ್ ತಗೊಂಡಿಲ್ಲ.. ಜನರ ಜೊತೆ ಸಂಪರ್ಕದಲ್ಲಿದೀನಿ.. ಯಾವಾಗ್ಲೂ ಇರ್ತೀನಿ' ಎಂದಿದ್ದಾರೆ.

ಜೊತೆಗೆ, ಅಂಬರೀಷ್ ಅವರ ಪುಣ್ಯ ಕ್ಷೇತ್ರ ಮಂಡ್ಯ ಹಾಗೂ ಸದ್ಯದ ರಾಜಕಾರಣದ ಬಗ್ಗೆ ಕೂಡ ಸುಮಲತಾ ಅವರು ಮಾತನ್ನಾಡಿದ್ದಾರೆ. ಅದು ಅವರ ಪಕ್ಷ ಅವರಿಗೆ ಬಿಟ್ಟಿದ್ದು..' ಎಂದಿದ್ದಾರೆ. ಇನ್ನು '2028ರಲ್ಲಿ ರಾಜಕೀಯವಾಗಿ ಸುಮಲತಾ ಸ್ಪರ್ಧೆ ಮಾಡ್ತಾರಾ..?' ಎಂಬ ಪ್ರಶ್ನೆಗೆ 'ಅದರ ಮಾತುಕತೆ ನಡೆದಿಲ್ಲ' ಎಂದಿರೋ ಸುಮಲತಾ ಅವರು ಆ ಬಗ್ಗೆ ಯಾವುದೇ ಸ್ಪಷ್ಟ ಚಿತ್ರಣವನ್ನು ಕೊಟ್ಟಿಲ್ಲ.

ನಟ ದರ್ಶನ್ 'ಡೆವಿಲ್' ಸಿನಿಮಾ ಬಗ್ಗೆ ಮಾತು

ಇನ್ನು ನಟ ದರ್ಶನ್ 'ಡೆವಿಲ್' ಸಿನಿಮಾ ಬಗ್ಗೆ ಈ ವೇಳೆ ಕೇಳಿದ ಪ್ರಶ್ನೆಗೆ ಸುಮಲತಾ ಅವರು ಉತ್ತರಿಸಿ 'ದರ್ಶನ್‌ಗೆ (Darshan Thoogudeepa) ಒಳ್ಳೇದು ಆಗ್ಬೇಕು.. ಚಾಲೆಂಜಿಂಗ್ ಸಿಚುವೇಷನ್ ಇದು.. ಸತ್ಯ ಪರ್ಮನೆಂಟ್ ಆಗಿ ಮುಚ್ಚಿಡೋದಕ್ಕೆ ಆಗೋದಿಲ್ಲ.. ಇದೆಲ್ಲ ಆಗ್ಬಾರ್ದಿತ್ತು ಆಗೋಗಿದೆ.. ಮಾತಾಡಿ ಪ್ರಯೋಜನ ಇಲ್ಲ.

ಡೆವಿಲ್ ಪ್ರಚಾರ ಸರಿಯಾಗಿ ಮಾಡ್ತಿದ್ದಾರೆ.. ಸಿನಿಮಾ ಪ್ರಚಾರಕ್ಕೆ ನಾನು ಡೈರೆಕ್ಟ್ ಆಗಿ ಇನ್‌ವಾಲ್ವ್‌ ಆಗಿಲ್ಲ. ವೆಲ್ ವಿಶರ್ ಆಗಿ ಡೆವಿಲ್ ಸಿನಿಮಾಗೆ ಒಳ್ಳೇದು ಆಗ್ಲಿ ಅಂತೀನಿ.. ಚಿತ್ರರಂಗದಲ್ಲಿ ಲೀಡರ್‌ಶಿಪ್ ಬೇಕು.. ಇಂಡಸ್ಟ್ರಿ ಹಿರಿಯರು ಕೂತು ಚರ್ಚೆ ಮಾಡ್ತಿದ್ದಾರೆ..' ಎಂದಿದ್ದಾರೆ ಸುಮಲತಾ ಅಂಬರೀಷ್.

ಜೊತೆಗೆ, 'ಮೊಮ್ಮಗನಿಗೆ ಒಂದು ವರ್ಷ ತುಂಬಿದೆ.. ಅವನ ಮೊದಲ ತೊದಲ ನುಡಿ ತಾತಾ.. ಅಂಬಿ ಫೋಟೋ ನೋಡಿ ಗುರುತು ಹಿಡಿಯುತ್ತಾನೆ, ತಾತಾ ಅಂತಾನೆ.. ಮೋಹನ್ ಬಾಬು ಹಾಗು ಅಂಬಿ ಅವರದ್ದು 50 ವರ್ಷಗಳ ಜರ್ನಿ' ಎಂದಿದ್ದಾರೆ ನಟಿ, ಮಾಜಿ ಸಂಸದೆ ಹಾಗೂ 'ಮಂಡ್ಯದ ಗಂಡು' ರೆಬೆಲ್ ಸ್ಟಾರ್ ಅಂಬರೀಷ್ ಪತ್ನಿ ಸುಮಲತಾ.