ಕೆಜಿಎಫ್ 2 ನಲ್ಲಿ ಸಂಜಯ್ ದತ್ ‘ಅಧೀರ’ ಲುಕ್ ರಿವೀಲ್ ಆಗಿದ್ದು ಭಾರೀ ಕುತೂಹಲ ಮೂಡಿಸಿದೆ. 

ಕೆಜಿಎಫ್ 2 ಶೂಟಿಂಗ್ ಭರದಿಂದ ಸಾಗುತ್ತಿದ್ದು, ಶೂಟಿಂಗ್ ಗಾಗಿ ಸಂಜಯ್ ದತ್  ಮೈಸೂರಿಗೆ ಆಗಮಿಸಿದ್ದಾರೆ. ಮೈಸೂರಿನ ಲಲಿತ್ ಮಹಲ್ ಪ್ಯಾಲೇಸ್ ಹೊಟೇಲ್ ನಲ್ಲಿ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ಭದ್ರತಾ ದೃಷ್ಟಿಯಿಂದ ಎಲ್ಲವನ್ನು ಗೌಪ್ಯವಾಗಿಡಲಾಗಿದೆ. 

ಯಶ್ ಅಭಿನಯದ KGF ಡೈಲಾಗ್ ಹೇಳಿದ ಟೀಂ ಇಂಡಿಯಾ ಕ್ರಿಕೆಟಿಗ!

ಮೈಸೂರು ಭಾಗದಲ್ಲಿ ಸಂಜು ಬಾಬನಿಗೆ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದು ಭದ್ರತಾ ದೃಷ್ಟಿಯಿಂದ ಗೌಪ್ಯತೆ ಕಾಪಾಡಲಾಗಿದೆ.  ಯಶ್ - ಸಂಜಯ್ ನಡುವಿನ ಕದನವನ್ನು ನರಾಚಿಯಲ್ಲಿ  ಚಿತ್ರೀಕರಿಸಲಾಗುತ್ತಿದೆ. ರಾಕಿಭಾಯ್- ಅಧೀರ ನಡುವಿನ ಫೈಟ್ ಕುತೂಹಲ ಮೂಡಿಸಿದೆ. 

ಸಂಜಯ್ ದತ್ ಬರ್ತಡೇಗೆ ಕೆಜಿಎಫ್‌ನಿಂದ ಗಿಫ್ಟ್; ‘ಅಧೀರ’ ಫಸ್ಟ್‌ಲುಕ್ ರಿಲೀಸ್

ಸಂಜಯ್ ದತ್ ಬರ್ತಡೇ ಅಂದರೆ ಜುಲೈ 29 ರಂದು ಅಧೀರ ಫಸ್ಟ್ ಲುಕ್ ನ್ನು ರಿವೀಲ್ ಮಾಡಲಾಗಿತ್ತು.