ಸಂಜಯ್ ದತ್  ‘ಅಧೀರ’ ಪಾತ್ರದ ಕೈ ಚಿತ್ರವನ್ನಷ್ಟೇ ಬಿಡುಗಡೆ ಮಾಡಿ ಕುತೂಹಲ ಮೂಡಿಸಿದ್ದ ಕೆಜಿಎಫ್ ತಂಡ ಇಂದು ‘ಅಧೀರ’ ಫಸ್ಟ್ ಲುಕ್ ನ್ನು ರಿಲೀಸ್ ಮಾಡಿದೆ. 

ಹಾಟ್ ಲುಕ್‌ನಲ್ಲಿ ಕೆಜಿಎಫ್ ಕ್ವೀನ್

ಮುಖ ಕಾಣದ, ಬಿಗಿ ಮುಷ್ಠಿ ಹಿಡಿದು ನಿಂತ ಅಧೀರನ ಪಾತ್ರ ಹೇಗಿರಬಹುದು ಎನ್ನುವ ಕುತೂಹಲ ಜೋರಾಗಿಯೇ ಇದೆ.  ಇಂದು ಸಂಜಯ್ ಹುಟ್ಟುಹಬ್ಬವಿದ್ದು, ಗಿಫ್ಟ್ ಆಗಿ ಕೆಜಿಎಫ್ ಟೀಂ ಫಸ್ಟ್ ಲುಕ್ ರಿಲೀಸ್ ಮಾಡಿದೆ. 

 

ಇದಕ್ಕೆ ಸಂಜಯ್ ದತ್ ಪ್ರತಿಕ್ರಿಯಿಸಿದ್ದು, ನಿಜವಾಗಿಯೂ ಖುಷಿಯಾಗುತ್ತಿದೆ. ಕೆಜಿಎಫ್ ನಲ್ಲಿ ಅಧೀರನ ಪಾತ್ರ ಮಾಡಿರುವುದು ಎಕ್ಸೈಟ್ ಆಗಿದೆ ಎಂದು ಹೇಳಿದ್ದಾರೆ. 

ಕೆಜಿಎಫ್ 2 ಶೂಟಿಂಗ್ ಭರದಿಂದ ಸಾಗುತ್ತಿದ್ದು ಮಿನರ್ವಾ ಮಿಲ್ ನಲ್ಲಿ ಬೃಹತ್ ಸೆಟ್ ನಿರ್ಮಾಣ ಆಗಿದೆ. ಕೆಜಿಎಫ್-2 ಬಹುತೇಕ ಶೂಟಿಂಗ್ ನರಾಚಿಯಲ್ಲಿ ನಡೆದಿದೆ. ಬೆಂಗಳೂರಿನಲ್ಲಿಯೂ ನರಾಚಿ ಸೆಟ್ ಹಾಕಲಾಗಿದೆ. ಪ್ರಶಾಂತ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.