KGF ಯಶಸ್ಸಿನ ಬಳಿಕ ಇದೀಗ KGF 2 ಚಿತ್ರ ಬಿಡುಗಡೆಗೆ  ಸಜ್ಜಾಗಿದೆ. ಆದರೆ ಇನ್ನೂ ಕೂಡ KGF ಚಿತ್ರ ಸದ್ದು ಮಾಡುತ್ತಲೇ ಇದೆ. ಇದೀಗ KGF ಚಿತ್ರದ ಡೈಲಾಗ್ ಮೂಲಕ ಟೀಂ ಇಂಡಿಯಾ ಕ್ರಿಕೆಟಿಗ ಮಿಂಚಿದ್ದಾರೆ. 

ಮುಂಬೈ(ಆ.14): ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF ಭರ್ಜರಿ ಯಶಸ್ಸಿನ ಬಳಿಕ ಇದೀಗ KGF ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಆದರೆ KGF ಚಿತ್ರ ಇನ್ನೂ ಸದ್ದು ಮಾಡುತ್ತಿದೆ. ಕನ್ನಡ, ಹಿಂದಿ, ಸೇರಿದಂತೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲೂ ಚಿತ್ರ ರಿಲೀಸ್ ಆಗೋ ಮೂಲಕ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಟೀಂ ಇಂಡಿಯಾ ಕ್ರಿಕೆಟಿಗ ಇರ್ಫಾನ್ ಪಠಾಣ್ KGF ಚಿತ್ರದ ಫೇಮಸ್ ಡೈಲಾಗ್ ಹೇಳೋ ಮೂಲಕ ರಾಕಿಂಗ್ ಸ್ಟಾರ್ ಯಶ್ ಅಭಿನಯವನ್ನು ಇಮಿಟೇಟ್ ಮಾಡಿದ್ದಾರೆ.

ಟಿಕ್ ಟಾಕ್, ಡಬ್‌ಸ್ಮಾಶ್ ಮೂಲಕ ನಟ ನಟಿಯರ ಡೈಲಾಗ್ ಹೇಳೋದು ಈಗ ಕಾಮನ್ ಆಗಿದೆ. ಇದೀಗ ಇರ್ಫಾನ್ ಪಠಾಣ್ ಕೂಡ ಮೂವಿ ಡೈಲಾಗ್ ಹೇಳಿದ್ದಾರೆ. ಇರ್ಫಾನ್ ಆಯ್ಕೆ ಮಾಡಿದ್ದು ಯಶ್ ಅಭಿನಯದ KGF ಚಿತ್ರದ ಡೈಲಾಗ್. ಸದ್ಯ ಇರ್ಫಾನ್ ಡೈಲಾಗ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

View post on Instagram

ಇರ್ಫಾನ್ ಡೈಲಾಗ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇರ್ಫಾನ್ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಡೈಲಾಗ್ ಅದ್ಭುತ ಬಿಗ್ ಸ್ಕ್ರೀನ್‌ನಲ್ಲಿ ನೋಡಲು ಕಾತರರಾಗಿದ್ದೇವೆ ಎಂದು ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.