ಬಾಲಿವುಡ್‌ನಲ್ಲಿ ಭರ್ಜರಿಯಾಗಿ ಹಸೆಮಣೆ ಏರಿದ ದೀಪಿಕಾ-ರಣವೀರ್ ಹಾಗೂ ಪ್ರಿಯಾಂಕ- ನಿಕ್ ನಂತರ ಎಲ್ಲರ ನೋಟ ಹರಿದಿದ್ದು ರಣಬೀರ್ ಹಾಗೂ ಅಲಿಯಾ ಭಟ್ ಮೇಲೆ.

ಈ ಹಿಂದೆ ರಣಬೀರ್ ಮುಂಬರುವ ಚಿತ್ರ ’ಬ್ರಹ್ಮಸೂತ್ರ’ದ ಶೂಟಿಂಗ್ ಸೆಟ್‌ಗೆ ಅಲಿಯಾ ಭೇಟಿ ನೀಡಿದ್ದರು. ಸೆಟ್‌ನಲ್ಲಿ ರಣಬೀರ್ ಪಕ್ಕ ಆಲಿಯಾ ಬಹಳ ಬೇಸರದಲ್ಲಿ ಕುಳಿತಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು ಇದು ಕೆಲವರಲ್ಲಿ ಸಂಬಂಧಕ್ಕಿಂತ ಮೊಬೈಲ್‌ ಮುಖ್ಯ ಆಯ್ತಾ ಅನ್ನೋ ರೀತಿ ಎಲ್ಲರಲ್ಲಿ ಅನುಮಾನ ಉಂಟು ಮಾಡಿತ್ತು.

ಗರ್ಲ್‌ಫ್ರೆಂಡ್‌ಗಿಂತ ಮೊಬೈಲೇ ಹೆಚ್ಚಾಯ್ತಾ ? ಅಲಿಯಾ ಅತ್ತರೂ ಕೇರ್ ಮಾಡದ ರಣವೀರ್!

ಕೆಲ ತಿಂಗಳ ಹಿಂದೆ ಬಾಲಿವುಡ್ ಸೆಲೆಬ್ರಿಟಿಗಳು ಪ್ರಧಾನ ಮಂತ್ರಿಯನ್ನು ಭೇಟಿ ಮಾಡಲು ತೆರಳಿದಾಗ ಕೆಲವೊಂದು ವೈರಲ್ ಆದ ವಿಡಿಯೋ ಹಾಗೂ ಫೋಟೋಗಳಲ್ಲಿ ಅಲಿಯಾ ಬೇರೆ ನಟರೊಂದಿಗೆ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಇನ್ನು ರಣಬೀರ್ ಕಪೂರ್ ಎಲ್ಲೋ ಹಿಂದೆ ಒಬ್ಬರೇ ಬರುತ್ತಿದ್ದರು.

ಇನ್ನು ಈಗ ಬ್ರೇಕ್‌ ಅಪ್‌ ಕಾರಣ ಏನಪ್ಪಾ ಅಂದ್ರೆ ರಣಬೀರ್ ಹೆಚ್ಚಾಗಿ ಫೋನ್‌ನಲ್ಲೇ ಮುಳುಗಿರುತ್ತಾರೆ ಆಲಿಯಾ ಬಗ್ಗೆ ಕೊಂಚವೂ ಕೇರ್ ಮಾಡಲ್ಲ ಎಂಬುವುದು ಆಲಿಯಾಗೆ ಕಾಡುತ್ತಿದೆಯಂತೆ. ಈ ಹಿಂದೆ ಮಾಜಿ ಗರ್ಲ್ ಫ್ರೆಂಡ್‌ಗಳಾದ ದೀಪಿಕಾ ಹಾಗೂ ಕತ್ರಿನಾ ಕೈಫ್ ಸಂಬಂಧ ಮುರಿದು ಬೀಳಲು ಇದೆ ಕಾರಣಾನಾ? ಎಲ್ಲೋ ಒಂದು ಕಡೆ ರಣಬೀರ್ ಫೇಲ್ ಆಗ್ತಿದ್ದಾರೆ ಎನಿಸುತ್ತಿದೆ.

ಆಲಿಯಾ ಭಟ್ ಪ್ರೀತಿಗೆ ತಂದೆಯಿಂದ ಸಿಕ್ತು ಗ್ರೀನ್ ಸಿಗ್ನಲ್