ಅಲಿಯಾ ಭಟ್- ರಣಬೀರ್ ನಡುವೆ ಹುಸಿ ಮುನಿಸು ನಡೆಯುತ್ತಿದೆಯಾ? ಅಲಿಯಾ ಬೇಸರದಲ್ಲಿದ್ದರೂ ಕ್ಯಾರೇ ಎನ್ನದ ರಣಬೀರ್ | 

ಬೆಂಗಳೂರು (ನ. 17): ಬಬ್ಲಿ ಗರ್ಲ್ ಅಲಿಯಾ ಭಟ್ ಯಾವಾಗಲೂ ನಗುತ್ತಲೇ ಇರುತ್ತಾರೆ. ತಾವು ಖುಷಿಯಾಗಿರುತ್ತಾ ಜೊಎಗಿರುವವರನ್ನು ಖುಷಿಯಾಗಿಡುತ್ತಾರೆ. ಆದರೆ ಅದ್ಯಾಕೋ ಏನೋ ಬೇಸರದಲ್ಲಿದ್ದಾರೆ ಅಲಿಯಾ. ರಣಬೀರ್ ಜೊತೆ ಏನಾದ್ರೂ ಮನಸ್ತಾಪ ನಡೆಯಿತಾ? ಅಲಿಯಾ ಬೇಸರಕ್ಕೆ ರಣಬೀರ್ ಕಾರಣಾನಾ? ಹೀಗೊಂದು ಅನುಮಾನ ಹುಟ್ಟು ಹಾಕಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಫೋಟೋ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲಿಯಾ- ರಣಬೀರ್ ಮುಂಬರುವ ಚಿತ್ರ ಬ್ರಹ್ಮಸೂತ್ರ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸೆಟ್ ನಲ್ಲಿ ರಣಬೀರ್ ಪಕ್ಕ ಅಲಿಯಾ ಬಹಳ ಬೇಸರದಲ್ಲಿ ಕುಳಿತಿದ್ದಾರೆ. ಆದರೂ ತನಗೂ ಇದಕ್ಕೂ ಸಂಬಂಧವಿಲ್ಲವೆಂದು ತಮ್ಮ ಪಾಡಿಗೆ ಮೊಬೈಲ್ ನಲ್ಲಿ ಮುಳುಗಿ ಹೋಗಿದ್ದಾರೆ ರಣಬೀರ್. 

ಪ್ರತಿ ಹುಡುಗಿಗೂ ತಾನೂ ಪ್ರೀತಿಸುವ ಹುಡುಗ ತನಗಾಗಿ ಒಂದಿಷ್ಟು ಸಮಯ ಕೊಡಬೇಕೆಂದು ಬಯಸುತ್ತಾಳೆ. ಇಲ್ಲಿ ಅಲಿಯಾ ಕೂಡಾ ತನ್ನ ಬಾಯ್ ಫ್ರೆಂಡ್ ರಣಬೀರ್ ನಿಂದ ಅದನ್ನೇ ಬಯಸಿದಂತಿದೆ. ಆದರೆ ಅವನು ಮಾತ್ರ ಇದ್ಯಾವುದಕ್ಕೂ ಕೇರ್ ಮಾಡದೇ ಮೊಬೈಲ್ ನಲ್ಲಿ ಕಳೆದು ಹೋಗಿದ್ದು ಅಲಿಯಾಬ ಬೇಸರಕ್ಕೆ ಕಾರಣಾನಾ?