ಬೆಂಗಳೂರು (ಡಿ. 12): ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಲವ್ವಲ್ಲಿ ಬಿದ್ದಿದ್ದಾರೆ ಎಂದು ಬಹಳ ಸಮಯದಿಂದ ಗುಸುಗುಸು ಪಿಸುಪಿಸು ಸುದ್ದಿ ಸುಳಿದಾಡುತ್ತಲೇ ಇತ್ತು. ಇದಕ್ಕೆ ಸಾಕಷ್ಟು ಸಾಕ್ಷಿಗಳೂ ಆಗಾಗ ದೊರೆಯುತ್ತಿದ್ದವು.

ಗರ್ಲ್‌ಫ್ರೆಂಡ್‌ಗಿಂತ ಮೊಬೈಲೇ ಹೆಚ್ಚಾಯ್ತಾ ? ಅಲಿಯಾ ಅತ್ತರೂ ಕೇರ್ ಮಾಡದ ರಣವೀರ್!

ಕೆಲ ತಿಂಗಳ ಹಿಂದಷ್ಟೇ ಆಲಿಯಾ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿ ಬಂದಿದ್ದರು. ಏನೇ ಆದರೂ ಇವರಿಬ್ಬರ ನಡುವೆ ಏನೋ ಕೆಮಿಸ್ಟ್ರಿ ಇದೆ ಎನ್ನುವುದು ಅಭಿಮಾನಿಗಳ ಗುಮಾನಿಯಾಗಿತ್ತು. ಈಗ ಇದಕ್ಕೆಲ್ಲಾ ತೆರೆ ಎಳೆದಿದ್ದಾರೆ ಆಲಿಯಾ ತಂದೆ ಮಹೇಶ್ ಭಟ್. ದಿ ಟೆಲಿಗ್ರಾಫ್‌ಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ತುಸು ಕೋಪಗೊಂಡವರಂತೆಯೇ ಮಾತನಾಡಿದ ಮಹೇಶ್ ‘ಅಫ್‌ಕೋರ್ಸ್ ಬೋತ್ ಆರ್ ಇನ್ ಲವ್’ ಎಂದು ಹೇಳುವ ಮೂಲಕ ಆಲಿಯಾ ಮತ್ತು ರಣಬೀರ್ ನಡುವೆ ಪ್ರೀತಿಯ ಸೇತುವೆ ಇದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

ಮೀಟೂ ವಿವಾದದ ನಂತರ ಆಫರ್ ಬರ್ತಾಯಿಲ್ಲ : ಶೃತಿ ಹರಿಹರನ್

ಜೊತೆಗೆ ರಣಬೀರ್ ಜಂಟಲ್ ಮ್ಯಾನ್ ಎನ್ನುವ ಬಿರುದನ್ನು ನೀಡಿ, ತನ್ನ ಮಗಳು ದೊಡ್ಡವಳು, ಅವಳಿಗೆ ಇಷ್ಟವಾದದ್ದನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಅವಳಿಗಿದೆ. ಅದಕ್ಕೆ ನಾನು ಎಂದೂ ಅಡ್ಡಿ ಬರುವುದಿಲ್ಲ ಎಂದು ಖಡಕ್ ಆಗಿ ಹೇಳಿ ಆಲಿಯಾ ಮತ್ತು ರಣಬೀರ್ ನಡುವಿನ ಗುಸುಗುಸುವಿಗೆ ತೆರೆ ಎಳೆದಿದ್ದಾರೆ ಮಹೇಶ್ ಭಟ್.