ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ ಬಾಸ್‌’ ವಿನ್ನರ್‌ ಗಿಲ್ಲಿ ಗೆದ್ದ 50 ಲಕ್ಷ ರು. ಬಹುಮಾನ ಕುರಿತು ವಿಧಾನಸಭೆಯಲ್ಲಿ ಕೆಲ ಕಾಲ ಕುತೂಹಲಕರ ಚರ್ಚೆ ನಡೆಯಿತು.   ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌  ಪ್ರಸ್ತಾಪಿಸಿದರು

ವಿಧಾನಸಭೆ : ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‌ ಬಾಸ್‌’ ವಿನ್ನರ್‌ ಗಿಲ್ಲಿ ಗೆದ್ದ 50 ಲಕ್ಷ ರು. ಬಹುಮಾನ ಕುರಿತು ವಿಧಾನಸಭೆಯಲ್ಲಿ ಕೆಲ ಕಾಲ ಕುತೂಹಲಕರ ಚರ್ಚೆ ನಡೆಯಿತು.

ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಪ್ರಸ್ತಾಪಿಸಿದರು

ಸೋಮವಾರ ವಿಧಾನಸಭೆ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾವವನ್ನು ಅನುಮೋದಿಸಿ ಮಾತನಾಡಿದ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ತಮ್ಮ ಭಾಷಣದ ಮಧ್ಯೆ ಈ ವಿಚಾರ ಪ್ರಸ್ತಾಪಿಸಿದರು. ಬಿಗ್‌ ಬಾಸ್‌ ರಿಯಾಲಿಟಿ ಶೋ ನಿಜವಾದ ವಿನ್ನರ್‌ ಗಿಲ್ಲಿ ಅಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನಿಜವಾದ ವಿನ್ನರ್‌ ಎಂದು ಹೇಳುವ ಮೂಲಕ ಕುತೂಹಲ ಹುಟ್ಟುಹಾಕಿದರು.

ಈ 50 ಲಕ್ಷ ರು. ಪೈಕಿ ತೆರಿಗೆ ಹೋಗುತ್ತದೆ

ಅದು ಹೇಗೆ ಎಂದು ವಿವರಿಸಿದ ಪ್ರದೀಪ್‌ ಈಶ್ವರ್‌, ಬಿಗ್‌ ಬಾಸ್‌ ವಿನ್ನರ್‌ಗೆ 50 ಲಕ್ಷ ರು. ಬಹುಮಾನ ನೀಡಲಾಗಿದೆ. ಈ 50 ಲಕ್ಷ ರು. ಪೈಕಿ ಶೇ.18ರಷ್ಟು ಜಿಎಸ್‌ಟಿ, ಶೇ.13ರಷ್ಟು ಆದಾಯ ತೆರಿಗೆ ಮತ್ತು ಶೇ.4ರಷ್ಟು ಸೆಸ್‌ ಒಟ್ಟು ಶೇ.52ರಷ್ಟು ಹಣ ತೆರಿಗೆ ರೂಪದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಹೋಗುತ್ತದೆ. ಮಂಡ್ಯದ ಹುಡುಗ ಗಿಲ್ಲಿಗೆ ಶೇ.48ರಷ್ಟು ಮಾತ್ರ ಹಣ ಸಿಗುತ್ತದೆ ಎಂದು ಗಮನ ಸೆಳೆದರು. ಕೇಂದ್ರದ ತೆರಿಗೆ ವ್ಯವಸ್ಥೆಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಬಗ್ಗೆ ತಿಳಿಸುವ ಉದ್ದೇಶದಿಂದ ಇದನ್ನು ಇಲ್ಲಿ ಪ್ರಸ್ತಾಪಿಸಿದೆ ಎಂದು ಹೇಳಿದರು.