ಬಿಗ್ ಬಾಸ್ ವಿಜೇತ ಗಿಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ಗಿಲ್ಲಿಯ ಜನಪ್ರಿಯತೆಯನ್ನು ಶ್ಲಾಘಿಸಿದ ಸಿಎಂ, ಅವರಿಗೆ ಶುಭ ಹಾರೈಸಿದರು. ಈ ಭೇಟಿಯ ಜೊತೆಗೆ ಗಿಲ್ಲಿ, ಶಿವರಾಜ್ ಕುಮಾರ್ ಹಾಗೂ ಸುದೀಪ್ ಅವರನ್ನೂ ಭೇಟಿ ಮಾಡಿರುವ ಬಗ್ಗೆ ಲೇಖನದಲ್ಲಿ ವಿವರಿಸಲಾಗಿದೆ.

ಬಿಗ್‌ ಬಾಸ್​ ಸ್ಟಾರ್ ಗಿಲ್ಲಿ ಬರೀ ರಾಜ್ಯದ ಜನರ ಮನಸ್ಸು ಮಾತ್ರ ಗೆದ್ದಿಲ್ಲ. ರಾಜ್ಯವನ್ನಾಳೋ ಮುಖ್ಯಮಂತ್ರಿಯ ಮನದಲ್ಲೂ ಗಿಲ್ಲಿಯೇ ಗುನುಗಿದ್ದಾನೆ. ಹೀಗಾಗಿ ಗಿಲ್ಲಿ ನಟ ಗಿಲ್ಲಕ್ಕೋ ಶಿವಾ ಅಂತ ಕರ್ನಾಟದ ಟಗರು ಅಂತಲೇ ಫೇಮಸ್ ಆಗಿರೋ ಸಿಎಂ ಸಿದ್ಧರಾಮಯ್ಯರನ್ನ ಭೇಟಿ ಮಾಡಿದ್ದಾನೆ. ಹಾಗಾದ್ರೆ ಗಿಲ್ಲಿಗೆ ಸಿಎಂ ಏನು ಹೇಳಿದ್ರು? ನೋಡೋಣ ಬನ್ನಿ ಟಗರು ಅಡ್ಡಲ್ಲಿ ಗಿಲ್ಲಿ ಕಥೆಯನ್ನ.

ಬಿಗ್​ಬಾಸ್ ಸ್ಟಾರ್ ಗಿಲ್ಲಿ ನಟ ಈಗ ಬರೀ ರಾಜ್ಯದ ಜನರ ಫೇವರಿಟ್​ ಮಾತ್ರ ಅಲ್ಲ. ನಮ್ಮನ್ನಾಳೊ ಮುಖ್ಯಮಂತ್ರಿ ಸಿದ್ಧರಾಮಯ್ಯರಿಗೂ ಫೇವರಿಟ್ ಆಗಿದ್ದಾರೆ. ಹೀಗಾಗೆ ಗಿಲ್ಲಿ ನಟ ಬಿಗ್​ಬಾಸ್‌ನ ಗೆದ್ದ ತಕ್ಷಣ ತನ್ನ ಕಪ್​ ಎತ್ತಿಕೊಂಡು ರಾಜ್ಯದ ಬಿಗ್​ಬಾಸ್​​​​ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನ ಭೇಟಿ ಮಾಡಿದ್ದಾನೆ.

ಟಗರು ಅಡ್ಡದಲ್ಲಿ ಗಿಲ್ಲಿ, ಸಿಕ್ತು ಸಿಎಂ ಆಶೀರ್ವಾದ!

ಗಿಲ್ಲಿ ಈಗ ಸರ್ವಾಂತರ್ಯಾಮಿ. ಸತತ ಮೂರು ತಿಂಗಳು ಒಂದೇ ಮನೆಯೊಳಗೇ ಇದ್ದು, ಬಿಗ್​ಬಾಸ್​​ನ ಗೆದ್ದು ಬಂದಿರೋ ಗಿಲ್ಲಿ ಈಗ ಎಲ್ಲೆಲ್ಲೂ ಕಾಣಿಸುತ್ತಿದ್ದಾರೆ. ಗಿಲ್ಲಿ ಕ್ರೇಜ್ ಹೇಗಿದೆ ಅಂದ್ರೆ ರಾಜ್ಯದ ಮುಖ್ಯಮಂತ್ರಿಗಳು ಕೂಡ ಈ ನಲ್ಲಿ ಮೂಳೆ ಸ್ಟಾರ್​ ಬಗ್ಗೆ ಮಾತಾಡುತ್ತಿದ್ದಾರೆ. ಹೀಗಾಗಿ ಟಗರು ಸಿದ್ಧರಾಮಯ್ಯ ಅವರ ಅಡ್ಡದಲ್ಲಿ ಗಿಲ್ಲಿ ಕಾಣಿಸಿಕೊಂಡಿದ್ದು, ಗೆದ್ದು ಬಂದಿದ್ದಕ್ಕೆ ಗಿಲ್ಲಿಗೆ ಸಿಎಂ ಆಶೀರ್ವಾದ ಮಾಡಿದ್ದಾರೆ.

ನಿನ್ನ ಪಾಪ್ಯುಲಾರಿಟಿ ಹೆಚ್ಚಾಗಿದೆ ನಿನಗೆ ಒಳ್ಳೆಯದಾಗಲಿ ಎಂದ ಸಿಎಂ!

ರಾಜ್ಯದಲ್ಲಿ ಅತಿ ಹೆಚ್ಚು ಪಾಪ್ಯೂಲಾರಿಟಿ ಇರೋ ರಾಜಕಾರಣಿ ಅಂದ್ರೆ ಸಿಎಂ ಸಿದ್ಧರಾಮಯ್ಯ. ಆದ್ರೆ ಈಗ ರಾಜಕಾರಣಿಗಳನ್ನೇ ಮೀರಿಸೋ ಓಟ್​ ಪಡೆದು ಅತಿ ಹೆಚ್ಚು ಪಾಪ್ಯೂಲಾರಿಟಿ ಪಡೆದ ಹುಡುಗ ಆಗಿ ಗಿಲ್ಲಿ ಹೊರ ಹೊಮ್ಮಿದ್ದಾನೆ. ಇದನ್ನ ಗಮನಿಸಿರೋ ಸಿದ್ದರಾಮಯ್ಯ ಗಿಲ್ಲಿ ನಿನ್ನ ಪಾಪ್ಯುಲಾರಿಟಿ ಹೆಚ್ಚಾಗಿದೆ ನಿನಗೆ ಒಳ್ಳೆಯದಾಗಲಿ ಎಂದಿದ್ದಾರೆ.

ಜನರ ಪ್ರೀತಿಗೆ ಕಳೆದು ಹೋದ ಗಿಲ್ಲಿ ನಟ!

ಗಿಲ್ಲಿ ನಟನ ಕ್ರೇಜ್‌ಗೆ ಸ್ವತಃ ಗಿಲ್ಲಿಯೇ ಕಳೆದು ಹೋಗಿದ್ದಾನೆ. ಜನ ತೋರಿಸುತ್ತಿರೋ ಪ್ರೀತಿಗೆ ಖುಷಿಯಿಂದ ಮತನಾಡಿರೋ ಗಿಲ್ಲಿ. ಜನರು ತೋರಿರೋ ಪ್ರೀತಿಯನ್ನ ನಾನು ಎಂದೂ ಮರೆಯಲ್ಲ. ಅದ್ಯಾರೋ ನನಗೆ ಗೊತ್ತಿಲ್ಲ. ನನ್ನ ಹಚ್ಚೆ ಹಾಕಿಸಿದ್ದಾರೆ. ಅದು ನಿಜಕ್ಕೂ ಸಾಕಷ್ಟು ಖುಷಿಕೊಟ್ಟಿದೆ. ಯೋಧರು ನನಗೆ ಸಪೋರ್ಟ್ ಮಾಡಿದ್ದಾರೆ. ಮಾಧ್ಯಮದವರೂ ಬೆನ್ನಿಗೆ ನಿಂತಿದ್ದಾರೆ ಎಂದು ವಿಡಿಯೋ ಮಾಡಿ ಎಲ್ಲರಿಗೂ ಧನ್ಯವಾದ ಹೇಳಿದ್ದಾನೆ ಗಿಲ್ಲಿ.

ಸಿಎಂ ಸಿದ್ಧರಾಮಯ್ಯ ಕೂಡ ಅಪ್ಪಟ ಹಳ್ಳಿ ಪ್ರತಿಭೆ. ಕಾವೇರಿ ಕಾಲಂಚಿನ ರೈತ ಕುಟುಂಬದಿಂದ ಬಂದ ರಾಜಕಾರಣಿ. ಸಿಎಂ ಚಾಮರಾಜನಗರದಲ್ಲಿ ಡಾನ್ಸ್​ ಮಾಡಿದ್ದು ಇಂದಿಗೂ ಪಾಪ್ಯೂಲರ್​. ಅಷ್ಟೆ ಅಲ್ಲ ಗಿಲ್ಲಿ ಕೂಡ ಹಳ್ಳಿ ಹೈದ. ಅದರಲ್ಲೂ ಇಬ್ಬರೂ ಒಂದೇ ಸಮುದಾಯಕ್ಕೆ ಸೇರಿದ್ದರಿಂದ ಗಿಲ್ಲಿ ಮೇಲೆ ಸಿದ್ದರಾಮಯ್ಯಗೆ ವಿಶೇಷ ಪ್ರೀತಿ. ಹೀಗಾಗಿ ಈಗ ಈ ರೈತ ಮಕ್ಕಳಿಬ್ಬರು ಭೇಟಿ ಮಾಡಿದ್ದಾರೆ. ಅಷ್ಟೆ ಅಲ್ಲ ಗಿಲ್ಲಿ ಬಿಗ್​​ಬಾಸ್​​​ ಮನೆಯೊಳಗೆ ಇದ್ದಾಗ ಗಿಲ್ಲಿ ಗೆಲ್ಲಲಿ ಅನ್ನೋದಕ್ಕೆ ರಾಜಕೀಯದ ವಾಸನೆಯೂ ಬಡಿದಿತ್ತು. ಗಿಲ್ಲಿ ಗೆದ್ದ ತಕ್ಷಣ ಸಿಎಂರನ್ನ ಭೇಟಿ ಮಾಡುತ್ತಾನೆ ಅಂತ ಹೇಳಲಾಗಿತ್ತು. ಇದೀಗ ಗಿಲ್ಲಿ ಸಿದ್ಧರಾಮಯ್ಯರನ್ನ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾನೆ.

ಸರ್ವಾಂತರ್ಯಾಮಿ ಆಗಿರೋ ಗಿಲ್ಲಿ ನಟ ದೊಡ್ಮನೆ ಹಿರಿಯಣ್ಣ ಸ್ಯಾಂಡಲ್​ವುಡ್​​ ದೊರೆ ಶಿವರಾಜ್​​ ಕುಮಾರ್‌ರನ್ನು ಭೇಟಿ ಮಾಡಿ ಬಂದಿದ್ದ, ಅಷ್ಟೆ ಅಲ್ಲ ಕನ್ನಡ ಕಿರುತೆರೆಗೆ ಸ್ಯಾಂಡಲ್​ವುಡ್ ಗೆ ಬಿಗ್​ಬಾಸ್ ಆಗಿರೋ ಕಿಚ್ಚ ಸುದೀಪ್‌ರನ್ನ ಮನೆಗೆ ಹೋಗಿ ಮೀಟ್ ಮಾಡಿದ್ದ. ಗಿಲ್ಲಿ ಬಿಗ್​​ಬಾಸ್ ಟ್ರೋಫಿ ಹಿಡಿದು ಅಪ್ಪು ಸಮಾಧಿಗೂ ಹೋಗಿ ಬಂದಿದ್ದು, ಈಗ ಝಮೀರ್ ಪುತ್ರ ಝೈದ್​ ಖಾನ್‌ಗೂ ಗಿಲ್ಲಿ ಸಂಪರ್ಕ ಮಾಡಿದ್ದು, ಝೈದ್ ಗಿಲ್ಲಿ ಆಟಕ್ಕೆ ಭೇಷ್ ಎಂದಿದ್ದಾರೆ.