ಪಳಾರ್ ಸಿನಿಮಾ: ಗಿಲ್ಲಿಗೆ ಕಾವ್ಯಾ ಶೈವನೇ ನಾಯಕಿ? ಸಕತ್ ಸದ್ದು ಮಾಡ್ತಿದೆ ಚಿತ್ರದ ಈ ಪೋಸ್ಟರ್
ಬಿಗ್ ಬಾಸ್ ಸೀಸನ್ 12ರ ವಿಜೇತ ಗಿಲ್ಲಿ ನಟ, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ 'ಪಳಾರ್' ಚಿತ್ರದ ಮೂಲಕ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಕಾವ್ಯಾ ಶೈವ ನಾಯಕಿ ಎಂಬ ಸುದ್ದಿ ಹರಿದಾಡುತ್ತಿದ್ದು, ಅಭಿಮಾನಿಗಳು ಮಾಡಿದ ಪೋಸ್ಟರ್ ವೈರಲ್ ಆಗಿದೆ.

ಗಿಲ್ಲಿ ನಟನ ಕನಸು-ನನಸು
ಬಿಗ್ ಬಾಸ್ ಸೀಸನ್ 12ರ (Bigg Boss 12 Winner) ಗಿಲ್ಲಿ ನಟ ತಮ್ಮ ಆಸೆಯನ್ನು ಕೊನೆಗೂ ಈಡೇರಿಸಿಕೊಂಡಿದ್ದಾರೆ. ತಾವು ಬೆಂಗಳೂರಿಗೆ ಬಂದಿದ್ದ ಕನಸು ನಟನಾಗುವುದು ಎಂದು ಹೇಳಿದ್ದ ಗಿಲ್ಲಿ ನಟನ ಸಿನಿಮಾ ಮುಹೂರ್ತ ಇಂದು ಅರ್ಥಾತ್ ಜೂನ್ 21ರಂದು ಅವರ ಜನ್ಮದಿನದಂದು ಈಡೇರಿಸಲಾಗಿದೆ. ಅವರ ಸಿನಿಮಾಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗಿದೆ.
ಪಳಾರ್ ಸಿನಿಮಾ
ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಪ್ರೊಡಕ್ಷನ್ ಸಂಸ್ಥೆಯಾದ ಹಾಗೂ ವಿವಿಧ ಭಾಷೆಗಳಲ್ಲಿ ನೂರಾರು ಕೋಟಿ ಬಜೆಟ್ ಹಾಕಿ ಸಿನಿಮಾ ನಿರ್ಮಾಣ ಮಾಡುವ ಕೆವಿಎನ್ ಪ್ರೊಡಕ್ಷನ್ ಗಿಲ್ಲಿ ನಟನೆಯ ಸಿನಿಮಾ ಪಳಾರ್ ನಿರ್ಮಾಣ ಮಾಡುತ್ತಿದ್ದು, ಇದರಲ್ಲಿ ಗಿಲ್ಲಿ ನಾಯಕ ಆಗಿ ಆಯ್ಕೆಗೊಂಡಿದ್ದಾರೆ.
ಯಾರು ನಾಯಕಿ?
ಈ ಚಿತ್ರಕ್ಕೆ ನಾಯಕಿ ಯಾರು ಎನ್ನುವ ಬಗ್ಗೆ ಇದಾಗಲೇ ಸಾಕಷ್ಟು ಕುತೂಹಲ ಕೆರಳಿಸಲಾಗಿದೆ. ಬಿಗ್‌ಬಾಸ್‌ನಲ್ಲಿ ಎಲ್ಲರನ್ನೂ ಗೆದ್ದು ಬೀಗಿದ್ದ ಕಾವ್ಯಾ ಶೈವ ಅವರೇ ನಾಯಕಿ ಎಂದು ಎಲ್ಲೆಡೆ ಸದ್ದು ಮಾಡಿದೆ. ಈ ಬಗ್ಗೆ ಗಿಲ್ಲಿ ನಟನಿಗೆ ಕೇಳಿದಾಗಲೂ ಅವರು ಗಪ್‌ಚುಪ್ ಆಗಿದ್ದರಿಂದ ಕಾವ್ಯಾನೇ ನಾಯಕಿ ಎನ್ನಲಾಗುತ್ತಿದೆ.
ಕಾವ್ಯಾ ಶೈವ ನಾಯಕಿ?
ಇದರ ನಡುವೆಯೇ, ಕುತೂಹಲದ ಪೋಸ್ಟ್ ಒಂದು ಸಕತ್ ವೈರಲ್ ಆಗುತ್ತಿದೆ. ಅದರಲ್ಲಿ, ‘ಪಳಾರ್’ ಹೀರೋಯಿನ್ ಕಮಿಂಗ್ ಸೂನ್ ಎಂದು ಪೋಸ್ಟ್ ಹಾಕಲಾಗಿದ್ದು, ಕಾವ್ಯಾ ಅವರ ಹಿಂಬದಿ ಪೋಸ್ ಹಾಕಲಾಗಿದೆ. ಅದು ನೋಡಿದ್ರೆ ಕಾವ್ಯಾ ಶೈವ ಎನ್ನುವುದು ತಿಳಿಯುತ್ತದೆ.
ಶೇರ್ ಮಾಡಿದ್ದು ಯಾರು?
ಇದನ್ನು ಶೇರ್ ಮಾಡಿರುವವರು ಕಾವ್ಯಾ ಶೈವ ಅಲ್ಲ, ಬದಲಿಗೆ ಅವರ ಫ್ಯಾನ್ಸ್. ತಮ್ಮ ಫ್ಯಾನ್ ಪೇಜ್‌ನಲ್ಲಿ ಈ ಪೋಸ್ಟ್ ಎಐ ಮೂಲಕ ಶೇರ್ ಮಾಡಿದ್ದಾರೆ. ಆದರೆ ಅದು ಅಸಲಿ ಎಂದುಕೊಂಡು ಅಭಿಮಾನಿಗಳು ಸಿಕ್ಕಾಪಟ್ಟೆ ಕಮೆಂಟ್ಸ್ ಮಾಡುತ್ತಿದ್ದಾರೆ. ಇದನ್ನೇ ನಿಜ ಎಂದು ತಿಳಿದುಕೊಂಡು ಬಿಟ್ಟಿದ್ದಾರೆ.
ಫ್ಯಾನ್ಸ್ ಫುಲ್ ಖುಷ್
ಕೊನೆಗೂ ತಮ್ಮ ಆಸೆ ಈಡೇರಿತು ಎಂದು ಕಾವ್ಯಾ ಮತ್ತು ಗಿಲ್ಲಿ ಫ್ಯಾನ್ಸ್ ಹೇಳುತ್ತಿದ್ದಾರೆ. ಇದು ನಿಜ ಎಂದು ನಂಬಿ ಹಲವರು ಈ ಪೋಸ್ಟ್ ಅನ್ನು ರೀ ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಇದುವರೆಗೂ ಸಿನಿಮಾ ತಂಡ ನಾಯಕಿಯನ್ನು ಸರ್‌ಪ್ರೈಸ್ ಆಗಿಯೇ ಇಟ್ಟಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

