ವಿಚಿತ್ರ ಡಬ್ ಸ್ಮಾಶ್ ಗಳ ಮೂಲಕ ಬೇಡದ ರೀತಿಯ ಜನಪ್ರಿಯತೆ ಪಡೆದುಕೊಂಡಿದ್ದ ಡಬ್ ಸ್ಮಾಶ್ ಸ್ಟಾರ್ ತುಳಸಿ ಪ್ರಸಾದ್ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿಲ್ಲ. ಈ ಹಿಂದೆ ಹುಚ್ಚ ವೆಂಕಟ್ ಮತ್ತು ಪ್ರಥಮ್ ನಂಥವರನ್ನು ಸೇರಿಸಿಕೊಂಡಿದ್ದ ಮನೆಗೆ ಈ ಬಾರಿ ತುಳಸಿ ಪ್ರಸಾದ್ ಸೇರಿಲ್ಲ.

ಆದರೆ ಈ ಬಾರಿ ಬಿಗ್ ಬಾಸ್ ಹೊಸ ಸಾಹಸ ಮಾಡಿದ್ದು ಇದೇ ಮೊದಲ ಸಾರಿಗೆ ಗೇ ಒಬ್ಬರು ಪ್ರವೇಶ ಮಾಡಿದ್ದಾರೆ. 377 ನೇ ನಿಯಮಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಮಾನ ತೆಗೆದುಕೊಂಡ ಮೇಲೆ ಬಿಗ್ ಬಾಸ್ ಕನ್ನಡ ಸಹ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ.

ಆ್ಯಡಂ ಪಾಶಾ ಎನ್ನುವ 35 ವರ್ಷದ ಗೇ ಪ್ರವೇಶ ಮಾಡಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಹೊರದೇಶದಲ್ಲಿ ಬೆಳೆದ ಆದರೆ ನೃತ್ಯವನ್ನೇ ತಮ್ಮ ಉಸಿರಾಗಿರಿಸಿಕೊಂಡಿರುವ ಪಾಶಾ ಪ್ರವೇಶ ಮಾಡಿದ್ದಾರೆ.  ಇನ್ನುಳಿದಂತೆ ಸೆಮಿ ಸೆಲಬ್ರಿಟಿಗಳ ಸಂಖ್ಯೆ ಜಾಸ್ತಿ ಇದೆ.  ಹಾಗಾದರೆ ಯಾವ ಕಾರಣಕ್ಕೆ ತುಳಸಿ ಪ್ರಸಾದ್ ಗೆ ಅವರಕಾಶ ಸಿಕ್ಕಿಲ್ಲ...

ತುಳಸಿ ಪ್ರಸಾದ್ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂದಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಒಂದು ವೇಳೆ ಅವಕಾಶ ಕೊಟ್ಟರೆ ಅದು ಫ್ಯಾಮಿಲಿ ಶೋ ಆಗಿ ಉಳಿಯುವುದಿಲ್ಲ ಎಂಬ ಆತಂಕವನ್ನು ಜಾಲತಾಣಿಗರು ವ್ಯಕ್ತಪಡಿಸಿದ್ದರು. ಹಾಗಾಗಿ ಹೊಸ ರಿಸ್ಕ್ ತೆಗೆದುಕೊಳ್ಳದಿರಲು ಬಿಗ್ ಬಾಸ್ ಮುಂದಾಗಿದ್ದು ಕಂಟೆಸ್ಟೆಂಟ್ ಗಳ ಪಟ್ಟಿಯಲ್ಲಿ ತುಳಸಿ ಪ್ರಸಾದ್ ಹೆಸರು ಅಂತಿಮ ಆಗಿಲ್ಲ.

ಬಿಗ್ ಬಾಸ್ ಕನ್ನಡ ಮನೆ ಪ್ರವೇಶ ಮಾಡಿದವರು ಯಾರ್ಯಾರು?