Asianet Suvarna News Asianet Suvarna News

ಬಿಗ್ ಬಾಸ್ ಮನೆ ಪ್ರವೇಶ ಮಾಡಿದ ಸ್ಪರ್ಧಿಗಳು ಯಾರ್ಯಾರು?

ಬಿಗ್ ಬಾಸ್ ಮನೆ ತೆರೆದುಕೊಂಡಿದೆ. ಸುಟ್ಟು ಕರಕಲಾಗಿದ್ದ ಮನೆಗೆ ಹೊಸ ಅತಿಥಿಗಳು ಪ್ರವೇಶ ಮಾಡಿದ್ದಾರೆ. ಕಿಚ್ಚ ಸುದೀಪ್ ಮನೆಯೊಳಗೆ ಅಭ್ಯರ್ಥಿಗಳನ್ನು ಕಳಿಸಿದ್ದು ಯಾರೆಲ್ಲ ಮನೆ ಸೇರಿದ್ದಾರೆ? ಇಲ್ಲಿದೆ ಪಟ್ಟಿ...

bigg boss kannada season 6 meet The contestants
Author
Bengaluru, First Published Oct 21, 2018, 10:39 PM IST
  • Facebook
  • Twitter
  • Whatsapp

ಕಿರುತೆರೆ ಲೋಕದ ಅತಿ ದೊಡ್ಡ ರಿಯಾಲಿಟಿ ಶೋ 'ಬಿಗ್ ಬಾಸ್' ಕಾರ್ಯಕ್ರಮದ ಆರನೇ ಆವೃತ್ತಿಗೆ ಅಧಿಕೃತ ಚಾಲನೆ ಸಿಕ್ಕಿದೆ. ಮೂರು ವಿಶೇಷ ಅತಿಥಿ 'ಬಿಗ್ ಬಾಸ್ ಕನ್ನಡ-6' ಗ್ರ್ಯಾಂಡ್ ಓಪನ್ನಿಂಗ್ ನಲ್ಲಿ 'ಬಿಗ್ ಬಾಸ್' ವಿನ್ನರ್ ನಟಿ ಶ್ರುತಿ, ಅರುಣ್ ಸಾಗರ್ ಹಾಗೂ ನಿವೇದಿತಾ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು.

1.ಸೋನು ಪಾಟೀಲ್: ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಪುಟ್ಟ ಗ್ರಾಮದ ರೈತನ ಮಗಳು ಸೋನು ಪಾಟೀಲ್ ಕಿರುತೆರೆಯಲ್ಲೂ ನೋಡಲು ಖಡಕ್ ಆಗಿ ಇರುವ ಸೋನು ಪಾಟೀಲ್ 'ಬಿಗ್ ಬಾಸ್' ಮನೆಗೆ ಕಾಲಿಟ್ಟಿದ್ದಾರೆ. ನೀರು ಕುಡಿದಷ್ಟೇ ಸಲೀಸಾಗಿ ಬುಲೆಟ್ ಓಡಿಸುವ ಸೋನು ಪಾಟೀಲ್ ಅಜ್ಜಿಯನ್ನು ರೌಂಡ್ಸ್ ಹೊರಡಿಸುತ್ತಾರೆ.

2. ಆಂಡ್ರ್ಯೂ : 140 ಕೆ.ಜಿ ತೂಗುವ ಆಂಡ್ರ್ಯೂ ಭಾಷಣಕಾರ. ತಮ್ಮ ದೇಹವನ್ನೇ ಬಂಡವಾಳ ಮಾಡಿಕೊಂಡು ಬಿಗ್ ಬಾಸ್‌ ಗೆ ಎಂಟ್ರಿ ಕೊಟ್ಟಿದ್ದಾರೆ.

3. ಜಯಶ್ರೀ : ಟಿ.ಎನ್.ಸೀತಾರಾಮ್ ಅವರ 'ಮಾಯಾಮೃಗ' ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ನಟಿ ಜಯಶ್ರೀ ಈ ಬಾರಿ 'ಬಿಗ್ ಬಾಸ್' ಮನೆ ಪ್ರವೇಶ ಮಾಡಿದ್ದಾರೆ. ಮಗುವಿನೊಂದಿಗೆ ಮಾತನಾಡುತ್ತಲೆ ನಿರೀಕ್ಷೆ ಹೊತ್ತು ಮನೆಯೊಳಕ್ಕೆ ಕಾಲಿಟ್ಟಿದ್ದಾರೆ.

4. ಎಂ.ಜೆ.ರಾಕೇಶ್: ರೇಡಿಯೋ ಜಾಕಿಯಾಗಿ ಗುರುತಿಸಿಕೊಂಡಿರುವ ರಾಕೇಶ್ ರಾಜಸ್ಥಾನದಲ್ಲಿ ಹುಟ್ಟಿದ್ದರೂ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಕನ್ನಡವನ್ನು ಸುಂದರವಾಗಿ ಮಾತನಾಡುತ್ತಾರೆ.

5.  'ಒಗ್ಗರಣೆ ಡಬ್ಬಿ' ಮುರಳಿ: ಅಡುಗೆ ಕಾರ್ಯಕ್ರಮದ ಮುಖೇನ ಮನ್ನಣೆ ಗಳಿಸಿರುವ ಮುರುಳಿ ಮನೆ ಪ್ರವೇಶ ಮಾಡಿದ್ದಾರೆ.

6.  ಅಕ್ಷತಾ ಪಾಂಡವಪುರ:  ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ 'ಬಿಗ್ ಬಾಸ್ ಮನೆ ಸೇರಿದ್ದು ರಂಗಮಂದಿರ ಕಟ್ಟಬೇಕು ಎಂಬ ದೊಡ್ಡ ಕನಸು ಹೊಂದಿದ್ದಾರೆ.

7. ರಕ್ಷಿತಾ ರೈ : ಮಹೇಂದ್ರ ಸಿಂಗ್ ಧೋನಿ ಅಭಿಮಾನಿಯಾಗಿರುವ ರಕ್ಷಿತಾ ಹೆಲಿಕಾಪ್ಟರ್ ಶಾಟ್ ಸಿಡಿಸಬಲ್ಲರು.

8.Rapid ರಶ್ಮಿ: ತಮ್ಮ ಮನಾತಿನಿಂದ, ವಿಶೇಷ ಶೋಗಳ ಮೂಲಕ ಖ್ಯಾತಿ ಪಡೆದುಕೊಂಡಿರುವ Rapid ರಶ್ಮಿಮನೆ ಸೇರಿದ್ದಾರೆ.

9. ಆಡಂ ಪಾಶಾ:  377 ನೇ ನಿಯಮಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಮಾನ ತೆಗೆದುಕೊಂಡ ಮೇಲೆ ಬಿಗ್ ಬಾಸ್ ಕನ್ನಡ ಸಹ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದೆ. ಬಿಗ್ ಬಾಸ್ ಮನೆಯೊಳಗೆ ಇದೇ ಮೊದಲ ಸಾರಿಗೆ ಗೇ ಒಬ್ಬರಿಗೆ ಪ್ರವೇಶ ಸಿಕ್ಕಿದೆ. ಆ್ಯಡಂ ಪಾಶಾ ಎನ್ನುವ 35 ವರ್ಷದ ಗೇ ಪ್ರವೇಶ ಮಾಡಿದ್ದಾರೆ. ಬೆಂಗಳೂರಿನಲ್ಲಿ ಹುಟ್ಟಿ ಹೊರದೇಶದಲ್ಲಿ ಬೆಳೆದ ಆದರೆ ನೃತ್ಯವನ್ನೇ ತಮ್ಮ ಉಸಿರಾಗಿರಿಸಿಕೊಂಡಿರುವ ಪಾಶಾ ಪ್ರವೇಶ ಮಾಡಿದ್ದಾರೆ.

ಕನ್ನಡ ಬಿಗ್‌ಬಾಸ್‌ ದಿಟ್ಟ ನಿರ್ಧಾರ, ಮನೆ ಪ್ರವೇಶ ಮಾಡಿದ ಗೇ!

10: ಕವಿತಾ ಗೌಡ: ಧಾರಾವಾಹಿಗಳ ಮೂಲಕ ಹೆಂಗಳೆಯರ ಮನಸ್ಸು ಗೆದ್ದಿರುವ ಕವಿತಾ ಗೌಡ ಮನೆ ಪ್ರವೇಶ ಮಾಡಿದ್ದಾರೆ.

11. ಬಾಡಿ ಬಿಲ್ಡರ್ ರವಿ: ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಬಾಡಿ ಬಿಲ್ಡರ್ ರವಿ ಅವರು ಮನೆ ಸೇರಿದ್ದಾರೆ.

12. ಶಶಿಕುಮಾರ್: ವಿವಿಧ ಟ್ಯಾಲೆಂಟ್ ಒಳಗೊಂಡಿರುವ ಆಧುನಿಕ ರೈತ ಶಶಿಕುಮಾರ್ ಬಿಗ್ ಬಾಸ್ 6 ಸೇರಿದ್ದಾರೆ.

13. ರೀಮಾ: ಮಂಗಳೂರಿನ ಹುಡುಗಿ, ಸಾಫ್ಟ್ ವೇರ್ ಉದ್ಯೋಗಿ ರೀಮಾ ಬಿಗ್ ಬಾಸ್ ಮನೆ ಸೇರಿದ್ದಾರೆ.

14. ನವೀನ್ ಸಜ್ಜು: ನಿರೀಕ್ಷೆಯಂತೆ ಸಂಗೀತ ನಿರ್ದೇಶಕ ನವೀನ್ ಸಜ್ಜು ಬಿಗ್ ಬಾಸ್ ಮನೆಯೊಳಗೆ ಕಾಲಿಟ್ಟಿದ್ದಾರೆ.

15. ಸ್ನೇಹ ಆಚಾರ್ಯ: ಮದುವೆಗೆ ಸಿದ್ಧವಾಗಿರುವ ಸ್ನೇಹ ಆಚಾರ್ಯ ಕೋರಿಯೋಗ್ರಾಫರ್ ಬಿಗ್ ಬಾಸ್ ಮನೆ ಸೇರಿದ್ದಾರೆ.

 

 

 

 

Follow Us:
Download App:
  • android
  • ios