ಅಮೃತಧಾರೆ ಸೀರಿಯಲ್‌ನಲ್ಲಿ ಜೂನಿಯರ್ ಭೂಮಿ ಬರ್ತಾಳೋ ಇಲ್ಲ ಜೂನಿಯರ್ ಗುಂಡಪ್ಪ ಬರ್ತಾನೋ ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಜೂನಿಯರ್ ಗುಂಡು ಸರ್ ಬರೋ ಟೈಮ್‌ ಬಂದೇ ಬಿಟ್ಟಿದೆ. 

ಅಮೃತಧಾರೆ ಸೀರಿಯಲ್‌ ಈ ಬಾರಿ ಟಿಆರ್‌ಪಿಯಲ್ಲಿ ಉಕ್ಕೇರಿ ಹರಿಯೋ ಎಲ್ಲ ಸೂಚನೆ ಸಿಕ್ಕಿದೆ. ಅದಕ್ಕೆ ಕಾರಣ ಸುಮಾರಿದೆ. ಮೊದಲನೇ ಕಾರಣ ಈ ಸೀರಿಯಲ್‌ನ ಕಥೆ ಹುಟ್ಟಿಸಿರೋ ಕುತೂಹಲ. ಎರಡನೆಯದು ಕನ್ನಡ ಕಿರುತೆರೆಯ ಎರಡು ಸೀರಿಯಲ್‌ಗಳ ಜನಪ್ರಿಯ ನಾಯಕ, ನಾಯಕಿ ಈ ಸೀರಿಯಲ್‌ನಲ್ಲಿ ಕಾಣಿಸಿಕೊಳ್ತಾ ಇದ್ದಾರೆ. ಜೊತೆಗೆ ದೊಡ್ಡ ದೊಡ್ಡ ಇನ್ಸಿಡೆಂಟ್‌ಗಳು ಬೇರೆ ಕುತೂಹಲ ಜಾಸ್ತಿ ಮಾಡಿವೆ. ಈ ನಡುವೆ ಭೂಮಿಕಾ ಮತ್ತು ಗುಂಡು ಸರ್‌ಗೆ ಯಾವ ಮಗು ಹುಟ್ಟುತ್ತೆ ಅನ್ನೋದು ಈ ಸೀರಿಯಲ್‌ ನೋಡೋ ಅಭಿಮಾನಿಗಳ ಮಿಲಿಯನ್‌ ಡಾಲರ್‌ ಪ್ರಶ್ನೆ. ಅದಕ್ಕೂ ಉತ್ತರ ಸಿಗುತ್ತೆ. ಆ ಉತ್ತರ ಈಗಾಗಲೇ ಕೆಲವರಿಗೆ ಗೊತ್ತಾಗಿಯೂ ಆಗಿದೆ. ಸೋ ಈ ಎಲ್ಲ ಕಾರಣಕ್ಕೆ ಅಮೃತಧಾರೆ ಸೀರಿಯಲ್‌ ಈ ವಾರ ಟಿಆರ್‌ಪಿಯಲ್ಲಿ ಫಸ್ಟ್ ಪ್ಲೇಸ್‌ ಕೊಳ್ಳೆ ಹೊಡೆಯೋದು ಗ್ಯಾರಂಟಿ ಅನ್ನುತ್ತಿದ್ದಾರೆ ಈ ಸೀರಿಯಲ್‌ ನೋಡೋ ಅಭಿಮಾನಿಗಳು.

ಅಷ್ಟೇ ಅಲ್ಲ, ಈ ಸೀರಿಯಲ್‌ನ ಪ್ರೋಮೋದ ವೀಕ್ಷಣೆಯೇ ಸೋಷಲ್‌ ಮೀಡಿಯಾದಲ್ಲಿ ಅರವತ್ತು ಎಪ್ಪತ್ತು ಲಕ್ಷದಷ್ಟಿದೆ. ಇದೇ ಈ ಸೀರಿಯಲ್‌ನ ಈ ವಾರದ ಟಿಆರ್‌ಪಿ ಹೇಗಿರಬಹುದು ಅನ್ನೋ ಲೆಕ್ಕ ಕೊಡುತ್ತೆ. ಇದೆಲ್ಲ ಸೈಡಿಗಿಟ್ಟು ಕತೆಯ ವಿಚಾರಕ್ಕೆ ಬಂದರೆ ಈಗಾಗಲೇ ಈ ಸೀರಿಯಲ್‌ನಲ್ಲಿ ಶಕುಂತಳಾಳ ಹೊಸ ಆಟ ಶುರುವಾಗಿದೆ. ಹೇಳಿಕೇಳಿ ಈ ವಿಲನ್‌ ಭೂಮಿಕಾಗೆ ಹಾಲಿನಲ್ಲಿ ಜಾಂಡೀಸ್‌ ಔಷಧ ಹಾಕಿ ಕೊಟ್ಟಿದ್ದಾಳೆ. ಈ ಸ್ಲೋ ಪಾಯಿಸನ್‌ ಮಗು, ಭೂಮಿಕಾ ಇಬ್ಬರನ್ನೂ ದೇವರ ಪಾದ ಸೇರಿಸಲಿದೆ ಅನ್ನುವ ಲೆಕ್ಕಾಚಾರ ವಿಲನ್‌ಗಳದ್ದು. ಭೂಮಿಕಾಗೆ ತಿನ್ನೋದಕ್ಕೆ ಏನಾದರೂ ಕೊಡುವ ಮೊದಲು ಮಲ್ಲಿ ಟೇಸ್ಟ್ ಮಾಡೋದು ರೂಢಿ. ಇಲ್ಲಿ ಮಲ್ಲಿಯೂ ಆ ಹಾಲು ಕುಡಿದಿರೋ ಕಾರಣ ಅವಳೂ ಹುಷಾರು ತಪ್ಪಬಹುದೇನೋ. ಆದರೆ ಹೀಗೆ ಹುಷಾರು ತಪ್ಪಿದ ಭೂಮಿಕಾಳನ್ನು ಅರ್ಜೆಂಟಾಗಿ ಆಸ್ಪತ್ರೆ ಸೇರಿಸೋ ಬದಲು ದೇವಸ್ಥಾನಕ್ಕೆ ಕರೆದೊಯ್ಯಲಾಗಿದೆ. ಸೀರಿಯಲ್‌ನಲ್ಲಿ ಎಮೋಶನ್‌ ಹೈಪ್‌ ಆಗೋದಕ್ಕೆ ಇಂಥಾ ಸರ್ಕಸ್ಸೆಲ್ಲ ಕಾಮನ್‌. ಆ ಪ್ರಕಾರ ಭೂಮಿಕಾಳನ್ನ ಕಾಡಿನ ಮಧ್ಯೆ ಇರುವ ದೇವಸ್ಥಾನಕ್ಕೆ ಕರೆ ತರಲಾಗ್ತಿದೆ. ನಡುವೆಯೇ ಕಾರು ಕೆಟ್ಟೋಗಿದೆ.

ಇನ್ನೇನು ಎಮರ್ಜೆನ್ಸಿ ಘೋಷಣೆಯಾಗಿ ಸ್ವಲ್ಪ ಹೊತ್ತಲ್ಲೇ ಕರ್ಣ ಸೀರಿಯಲ್‌ನ ಹೀರೋ ಕರ್ಣ ಮತ್ತು ಅಣ್ಣಯ್ಯ ಸೀರಿಯಲ್‌ ನಾಯಕಿ ಪಾರು ಭೂಮಿಕಾಳನ್ನು ಕಾಪಾಡೋದಕ್ಕೆ ಎಂಟ್ರಿ ಕೊಡಲಿದ್ದಾರೆ.

ಲಕ್ಷ್ಮೀ ನಿವಾಸದಿಂದ ಹೊರ ಬಂದ ಮತ್ತೊಬ್ಬ ಸ್ಟಾರ್ ನಟ: ತಂಗಿ ಹಿಂದೆಯೇ ಹೋದ ಅಣ್ಣ!

ಅವರಿಬ್ಬರೂ ಬಂದಮೇಲೆ ಭೂಮಿಕಾ, ಮತ್ತವಳ ಮಗುವಿಗೆ ಏನೂ ಆಗಲ್ಲ ಅನ್ನೋದು ವೀಕ್ಷಕರ ಧೈರ್ಯ. ಈಗ ಬಂದಿರೋ ಪ್ರಶ್ನೆ ಅಂದರೆ ಇವರಿಗೆ ಹುಟ್ಟೋ ಮಗು ಯಾವುದಿರಬಹುದು ಅಂತ. ಇದಕ್ಕೆ ಸೀರಿಯಲ್‌ನಲ್ಲೇ ಒಂದು ಹಿಂಟ್‌ ಸಿಕ್ಕಿದೆ. ಭೂಮಿಕಾ ದೇವಸ್ಥಾನಕ್ಕೆ ಹೊರಡುವಾಗ ಅತ್ತೆ ಅಂದರೆ ಗಂಡು ಸರ್‌ ತಾಯಿ ಭೂಮಿಕಾ ಕೈಗೆ ಗಣೇಶನ ವಿಗ್ರಹ ಇಡುತ್ತಾರೆ. ಇದನ್ನು ನೋಡಿಯೇ ಜಾಣ ವೀಕ್ಷಕರು ಹುಟ್ಟೋ ಮಗು ಗಂಡೇ, ಬರೋದು ನಮ್ಮ ಗುಂಡು ಸಾರೇ ಅಂತ ಷರಾ ಬರೆಯುತ್ತಿದ್ದಾರೆ. ಯಾವ ಮಗು ಹುಟ್ಟಿದರೂ ಅದನ್ನು ಖುಷಿಯಿಂದಲೇ ಸ್ವೀಕರಿಸಲು ಭೂಮಿಕಾ ಮತ್ತು ಗೌತಮ್‌ ನಿರ್ಧರಿಸಿದ್ದಾರೆ. 

View post on Instagram

ಹೀಗಾಗಿ ಯಾವ ಮಗು ಆದರೂ ಗೌತಮ್‌, ಭೂಮಿಗೆ ಖುಷಿನೇ. ಅವರ ಖುಷಿ ಎದುರು ನೋಡುವ ವೀಕ್ಷಕರಿಗೂ ಖುಷಿಯೇ. ಆದರೆ ಕುತೂಹಲ ಅನ್ನೋದೊಂದು ಇದ್ದೇ ಇರುತ್ತಲ್ವಾ, ಸೋ ಅದು ಏನೇನೋ ಗೆಸ್‌ ಮಾಡೋ ಹಾಗೆ ಮಾಡುತ್ತೆ. ಸೋ ಸದ್ಯದ ಲೆಕ್ಕಾಚಾರದ ಪ್ರಕಾರ ಅಮೃತಧಾರೆಗೆ ಎಂಟ್ರಿಕೊಡೋದು ಗಂಡು ಮಗುನೆ ಅನ್ನೋ ಮಾತು ಕೇಳಿ ಬರ್ತಿದೆ. ಅದಕ್ಕೆ ಹಿಂಟ್‌ ಕೂಡ ನೀಡಿರುವುದು ಈ ಲೆಕ್ಕಾಚಾರಕ್ಕೆ ಮತ್ತಷ್ಟು ಬಲ ನೀಡಿದೆ.

ತುಂಡುಡುಗೆ ಬಿಟ್ಟು ಲಂಗ ದಾವಣಿ ತೊಟ್ಟು ರಾಮಾಚಾರಿಯ ಮಾಲಶ್ರಿಯಾದ ನಿವೇದಿತಾ ಗೌಡ