- Home
- Entertainment
- TV Talk
- Niveditha Gowda: ತುಂಡುಡುಗೆ ಬಿಟ್ಟು ಲಂಗ ದಾವಣಿ ತೊಟ್ಟು ರಾಮಾಚಾರಿಯ ಮಾಲಾಶ್ರೀಯಾದ ನಿವೇದಿತಾ ಗೌಡ
Niveditha Gowda: ತುಂಡುಡುಗೆ ಬಿಟ್ಟು ಲಂಗ ದಾವಣಿ ತೊಟ್ಟು ರಾಮಾಚಾರಿಯ ಮಾಲಾಶ್ರೀಯಾದ ನಿವೇದಿತಾ ಗೌಡ
ನಿವೇದಿತಾ ಗೌಡ, ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಆಕೆಯ ಈ ಅವತಾರ ನೋಡಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ಅಷ್ಟಕ್ಕೂ ನಟಿಯ ಈ ಅವತಾರ ಯಾಕೆ?

ನಿವೇದಿತಾ ಗೌಡ (Niveditha Gowda) ರಿಯಾಲಿಟಿ ಶೋಗಳ ಮುಖ್ಯ ಆಕರ್ಷಣೆ. ಬಿಗ್ ಬಾಸ್ ನಿಂದ ಹಿಡಿದು, ಇಲ್ಲಿವರೆಗೂ ಪ್ರತಿವರ್ಷ ಒಂದಲ್ಲ ಒಂದು ರಿಯಾಲಿಟಿ ಶೋಗಳಲ್ಲಿ ನಿವೇದಿತಾ ಕಾಣಿಸಿಕೊಳ್ಳುತ್ತಲೇ ಇದ್ದಾರೆ. ಈ ಬಾರಿ ಕ್ವಾಟ್ಲೆ ಕಿಚನ್ ನಲ್ಲಿ ಕ್ವಾಟ್ಲೆ ಕಂಟೆಸ್ಟಂಟ್ ಆಗಿ ನಿವೇದಿತಾ ಕಾಣಿಸಿಕೊಂಡಿದ್ದಾರೆ.
ಇನ್ನು ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ (social media) ಎಷ್ಟೊಂದು ಆಕ್ಟಿವ್ ಅನ್ನೋದನ್ನು ನೀವೇ ನೋಡಿದ್ದೀರಿ. ದಿನಕ್ಕೊಂದು ಫೋಟೊದಂತೆ ತಮ್ಮ ಬೋಲ್ಡ್, ಬ್ಯೂಟಿ ಫುಲ್ ಎನ್ನುವಂತಹ ಫೋಟೊಗಳಿಂದಲೇ ಅವರ ಇನ್’ಸ್ಟಾಗ್ರಾಂ ತುಂಬಿದೆ. ಆದರೆ ಈ ಬಾರಿ ಡಿಫರೆಂಟ್ ಲುಕ್ ನಲ್ಲಿ ನಿವೇದಿತಾ ಪೋಸ್ ಕೊಟ್ಟಿದ್ದಾರೆ.
ತುಂಡುಡುಗೆ, ಸೀರೆ, ಶಾರ್ಟ್ಸ್ ಎಲ್ಲವನ್ನೂ ಬಿಟ್ಟು ನಿವೇದಿತಾ ಗೌಡ ರಾಮಾಚಾರಿಯ ಮಾಲಾಶ್ರೀ ಥರ ಡ್ರೆಸ್ ಮಾಡಿಕೊಂಡು, ಅಂದ್ರೆ ಲಂಗ ದಾವಣಿ ಹಾಕಿ ಎರಡು ಜಡೆ ಹಾಕಿ, ಥೇಟ್ ಯಾರಿವಳು ಯಾರಿವಳು ಹಾಡಿನ ಸುಂದರಿ ಮಾಲಾಶ್ರೀ (Malashree) ಥರ ಕಾಣಿಸಿಕೊಂಡಿದ್ದಾರೆ. ಇದೇನಪ್ಪಾ ನಿವೇದಿತಾ ಗೌಡ, ಈ ಲುಕ್ ಅಲ್ಲಿ ಅಂದ್ರೆ, ಅದೆಲ್ಲವೂ ಕ್ವಾಟ್ಲೆ ಕಿಚನ್ ಗಾಗಿ.
ಸೋಶಿಯಲ್ ಮೀಡಿಯಾದಲ್ಲಿ ಮಾಲಾಶ್ರೀಯವರ ರಾಮಾಚಾರಿ ಸಿನಿಮಾದ ಫೋಟೊಗಳ ಜೊತೆಗೆ ತಮ್ಮ ಫೋಟೊಗಳನ್ನು ಶೇರ್ ಮಾಡಿರುವ ನಿವೇದಿತಾ. ನಾನು ಮಾಲಾಶ್ರೀ ಮೇಡಂ ಅವರನ್ನು ಯಾವಾಗಲೂ ಪ್ರೀತಿಸುತ್ತೇನೆ ಮತ್ತು ಆರಾಧಿಸುತ್ತೇನೆ ... ಅವರು ಅದ್ಭುತ ಪ್ರತಿಭಾನ್ವಿತರು, ಅಪ್ಪಟ ಸುಂದರಿ ಮತ್ತು ನಿಜವಾಗಿಯೂ ನನ್ನ ಸಾರ್ವಕಾಲಿಕ ನೆಚ್ಚಿನ ನಟಿಯರಲ್ಲಿ ಒಬ್ಬರು. ಈ ವಾರ ಕ್ವಾಟ್ಲೆ ಕಿಚನ್‌ನಲ್ಲಿ ರಾಮಾಚಾರಿ ಚಿತ್ರದ (Ramachari Film) ಅವರ ಐಕಾನಿಕ್ 'ನಂದಿನಿ' ಪಾತ್ರದಲ್ಲಿ ನಟಿಸುತ್ತಿರುವುದಾಗಿ ತಿಳಿಸಿದ್ದಾರೆ.
ಕ್ವಾಟ್ಲೆ ಕಿಚನ್ ರಿಯಾಲಿಟಿ ಶೋ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು, ಇದೊಂದು ಕಾಮಿಡಿ ಕುಕ್ಕಿಂಗ್ ಶೋ ಆಗಿದೆ. ಈ ಶೋನಲ್ಲಿ ನಟಿ ಶ್ರುತಿ, ಶೆಫ್ ಕೌಶಿಕ್ ತೀರ್ಪುಗಾರರಾಗಿದ್ದರೆ, ಅನುಪಮಾ ಗೌಡ (Anupama Gowda), ಕುರಿ ಪ್ರತಾಪ್ ನಿರೂಪಕರಾಗಿದ್ದಾರೆ. ನಿವೇದಿತಾ ಗೌಡ, ದಿಲೀಪ್ ಶೆಟ್ಟಿ, ಧನರಾಜ್ ಆಚಾರ್, ಶಿಲ್ಪಾ ಕಾಮತ್, ಸೋನಿ, ಪ್ರೇರಣಾ ಕಂಬಂ ಸೇರಿ ಹಲವು ತಾರೆಯರು ಸ್ಪರ್ಧಿಗಳಾಗಿ ಭಾಗವಹಿಸುತ್ತಿದ್ದಾರೆ.