ಭಾಗ್ಯಲಕ್ಷ್ಮಿ ಸೀರಿಯಲ್ ನಟಿ ಶೂಟಿಂಗ್ ಮುಗಿದ ಬಳಿಕ ಮಕ್ಕಳ ಜೊತೆ ಕುಡಿದು ಹೀಗೆ ಕಿರಿಕ್ ಮಾಡೋದಾ? ಅಮ್ಮನ ಮೇಲೆ ಮಕ್ಕಳೂ ಕೈ ಮಾಡಿದ್ದಾರೆ ನೋಡಿ. ಅಸಲಿಗೆ ಏನಾಯ್ತು ಎನ್ನೋದು ಇಲ್ಲಿದೆ!
ಭಾಗ್ಯಲಕ್ಷ್ಮಿ ಭಾಗ್ಯ ಮತ್ತು ಸೀರಿಯಲ್ನಲ್ಲಿ ಆಕೆಯ ಮಕ್ಕಳಾದ ತನ್ವಿ ಮತ್ತು ಗುಂಡ ಸೀರಿಯಲ್ ಶೂಟಿಂಗ್ ಬಳಿಕ ಭಾರಿ ಫೈಟಿಂಗ್ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಭಾಗ್ಯಳನ್ನು ಮಕ್ಕಳು ನೂಕಿದ್ದೂ ಅಲ್ಲದೇ, ಅಮ್ಮನ ಮೇಲೆಯೇ ಕೈಮಾಡಿದ್ದಾರೆ. ಅಷ್ಟಕ್ಕೂ ಇದರಲ್ಲಿ ಭಾಗ್ಯ ಮಾತ್ರವಲ್ಲದೇ ಮಕ್ಕಳೂ ಕಂಠಪೂರ್ತಿ ಕುಡಿದಿರುವುದನ್ನು ನೋಡಬಹುದು. ಇಷ್ಟು ಹೇಳುತ್ತಿದ್ದಂತೆಯೇ ಇದೇನಿದು ಎಂದು ಕೆಲವರು ಗಾಬರಿಯಾಗಬಹುದು. ಆದರೆ ಈ ಕೆಳಗೆ ಶೇರ್ ಮಾಡಿರುವ ವಿಡಿಯೋ ನೋಡಿದರೆ ಅದು ರೀಲ್ಸ್ ಎನ್ನುವುದು ತಿಳಿಯುತ್ತದೆ. ಅಮ್ಮ- ಮಕ್ಕಳ ಫೈಟಿಂಗ್ ವಿಡಿಯೋ ಅನ್ನು ಖುದ್ದು ಭಾಗ್ಯ ಅರ್ಥಾತ್ ಸುಷ್ಮಾ ಕೆ.ರಾವ್ ಅವರೇ ಶೇರ್ ಮಾಡಿಕೊಂಡಿದ್ದಾರೆ. ಶೂಟಿಂಗ್ ಮುಗಿದ ಬಳಿಕ ಸುಷ್ಮಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿರುತ್ತಾರೆ. ಈಗಲೂ ಅದನ್ನೇ ಅವರು ಮಾಡಿದ್ದು, ಕುಡುಕರ ರೀತಿಯ ರೀಲ್ಸ್ ಮಾಡಿದ್ದಾರೆ.
ಇನ್ನು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಸದ್ಯ ಭಾಗ್ಯಳ ತಂಗಿ ಪೂಜಾಳ ಮದುವೆಯಲ್ಲಿ ನೂರೆಂಟು ವಿಘ್ನಗಳು ಬಂದಿವೆ. ಕಿಶನ್ ಜೊತೆ ಎಂಗೇಜ್ಮೆಂಟ್ ಆಗಿದ್ದರೂ, ಭಾಗ್ಯಳ ಲೈಫ್ನಲ್ಲಿ ಎಲ್ಲವೂ ಅಂದುಕೊಂಡಂಗೆ ಆಗುತ್ತಿಲ್ಲ. ಕಿಶನ್ ಅಣ್ಣ ಒಂದುಕಡೆ ಈ ಮದುವೆಗೆ ವಿರೊಧ ವ್ಯಕ್ತಪಡಿಸುತ್ತಿದ್ರೆ, ಅದೇ ಇನ್ನೊಂದೆಡೆ ಅತ್ತೆ ಕೂಡ ಸೇರಿಕೊಂಡಿದ್ದಾಳೆ. ಬಡವರ ಮನೆಯ ಹೆಣ್ಣಾಗಿರುವ ಕಾರಣ, ಇಂಥ ಸಂಬಂಧ ನಮಗೆ ಬೇಡ ಎನ್ನುತ್ತಿದ್ದಾರೆ. ಅದರಲ್ಲಿಯೂ ಭಾಗ್ಯ ಮತ್ತು ಆಕೆಯ ಅತ್ತೆ ಕುಸುಮಾ ಮಾಡಿರುವ ಎಡವಟ್ಟಿನಿಂದ ಕಿಶನ್ ಅಣ್ಣ ಆದಿಗೂ ಅವರ ಮೇಲೆ ಕೋಪ ಇದೆ. ಆದರೆ ಪೂಜಾ ಮಾತ್ರ ನನಗೆ ಅವರು ಎಷ್ಟೇ ಟಾರ್ಚರ್ ಕೊಟ್ಟರೂ ಪರವಾಗಿಲ್ಲ, ಕಿಶನ್ನನ್ನೇ ಮದುವೆಯಾಗೋದು ಅಂತಿದ್ದಾಳೆ. ಅದೇ ಇನ್ನೊಂದೆಡೆ ಅವರ ಅಂತಸ್ತಿಗೆ ತಕ್ಕಂತೆ ಮದುವೆಯ ಖರ್ಚು ಮಾಡುವ ಜವಾಬ್ದಾರಿ ಕೂಡ ಭಾಗ್ಯಳ ಮೇಲೆ ಇದು.
ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.
ಇನ್ನು ತನ್ವಿಯ ಬಗ್ಗೆ ಹೇಳುವುದಾದರೆ ಈಕೆಯ ರಿಯಲ್ ಹೆಸರು ಅಮೃತಾ ಗೌಡ. ಅಮೃತಾ ಗೌಡ ನಿಜ ಜೀವನದಲ್ಲೂ ಶಾಲಾ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಜುಕೇಶನ್ ಜೊತೆಗೆ ಶೂಟಿಂಗ್ ಎರಡನ್ನೂ ಜೊತೆಯಾಗಿ ಮ್ಯಾನೇಜ್ ಮಾಡುವ ಈ ಬಾಲನಟಿ, ಸೋಶಿಯಲ್ ಮೀಡಿಯಾದಲ್ಲೂ (social media) ಆಕ್ಟೀವ್ ಆಗಿದ್ದಾರೆ. ಅಮೃತಾ ಹೆಚ್ಚಾಗಿ ತನ್ನ ತಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಿಹಾರ್ ಗೌಡ ಜೊತೆ, ಭಾಗ್ಯಲಕ್ಷ್ಮಿ ತಂಡದ ಜೊತೆ ರೀಲ್ಸ್ ಮಾಡುತ್ತಾ, ಡ್ಯಾನ್ಸ್ ಗೆ ಹೆಜ್ಜೆ ಹಾಕುತ್ತಾ ಎಂಜಾಯ್ ಮಾಡುವ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಗಳನ್ನು ಪಡೆದಿರುವ ಈ ಬಾಲಕಲಾವಿದೆ ನೆಗೆಟಿವ್ ಪಾತ್ರದಲ್ಲಿ ನಟಿಸಿದ್ರೂ ಈಕೆಯ ನಟನೆಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
