ಭಾಗ್ಯಲಕ್ಷ್ಮಿಯ ತಂಗಿ ಪೂಜಾಳ ಮದುವೆಯ ತಲ್ಲಣಗಳ ನಡುವೆಯೇ ಭಾಗ್ಯಳ ಮನೆಯಲ್ಲಿ ದೆವ್ವಗಳ ಕಾಟ ಶುರುವಾಗಿದೆ. ಇದೇನಿದು ಸೀರಿಯಲ್ ಟ್ವಿಸ್ಟ್? ಇಲ್ಲಿದೆ ನೋಡಿ ಇದರ ಡಿಟೇಲ್ಸ್...
ಭಾಗ್ಯಲಕ್ಷ್ಮಿಯ ತಂಗಿ ಪೂಜಾಳ ಮದುವೆಯ ಮಾತುಕತೆ, ಗೊಂದಲ ನಡೀತಿದೆ. ಪೂಜಾಳನ್ನು ನೋಡಲು ಬಂದ ಹುಡುಗನ ಕಡೆಯವರಿಗೆ ಇಲ್ಲಸಲ್ಲದ್ದನ್ನು ಹೇಳಿ ತಾಂಡವ್ ಮದುವೆ ತಪ್ಪಿಸಿದ್ದಾನೆ. ಇದೀಗ ಪೂಜಾಳನ್ನು ಲವ್ ಮಾಡ್ತಿದ್ದ ಕಿಶನ್ ಜೊತೆ ಮದುವೆಯ ಮಾತುಕತೆ ನಡೆಯುತ್ತಿದೆ. ಅದನ್ನೂ ತಪ್ಪಿಸಲು ತಾಂಡವ್ ನೋಡಿದ್ದ. ಆದರೆ ಅದು ಸಾಧ್ಯವಾಗಲಿಲ್ಲ. ಕಿಷನ್ ಬಗ್ಗೆ ಇಲ್ಲಸಲ್ಲದ ಕಥೆ ಕಟ್ಟಿದ್ದ. ಆದರೆ ಅದು ವರ್ಕ್ಔಟ್ ಆಗದೇ ಮದುವೆಯವರೆಗೂ ಬಂದಿದೆ. ಆದರೆ ಇಲ್ಲೊಂದು ಎಡವಟ್ಟು ಆಗಿದೆ. ಅದೇನೆಂದರೆ ಭಾಗ್ಯಳಿಗೆ ಸದಾ ಟಾರ್ಚರ್ ಕೊಡ್ತಿರೋ ಕನ್ನಿಕಾ ಅಣ್ಣನೇ ಕಿಶನ್. ಇದೀಗ ಅವಳು ಮದುವೆಗೆ ಅಡ್ಡಗಾಲು ಹಾಕಿ ಭಾಗ್ಯಳಿಗೆ ಬಾಯಿಗೆ ಬಂದ ರೀತಿಯಲ್ಲಿ ಬೈದಿದ್ದಾಳೆ. ಇದನ್ನು ಕೇಳಿಸಿಕೊಂಡ ಪೂಜಾ ಉರಿದು ಹೋಗಿ, ನಿಮ್ಮ ಮನೆಗೆ ನಾನು ಸೊಸೆಯಾಗಿ ಬರುವುದಿಲ್ಲ, ಈ ಮದುವೆ ಆಗುವುದಿಲ್ಲ ಎಂದು ಸವಾಲು ಹಾಕಿ ಬಂದಿದ್ದಾಳೆ.
ಇಲ್ಲಿಯವರೆಗೆ ಸದ್ಯ ಸೀರಿಯಲ್ ಬಂದು ನಿಂತಿದೆ. ಮುಂದೇನಾಗುತ್ತದೆ ಎನ್ನುವ ಕುತೂಹಲ ಸದ್ಯಕ್ಕಿದೆ. ಇದರ ನಡುವೆಯೇ ಭಾಗ್ಯಳ ಮನೆಯಲ್ಲಿ ದೆವ್ವಗಳ ಕಾಟ ಶುರುವಾಗಿದೆ. ಅಷ್ಟಕ್ಕೂ ಈಗ ಸೀರಿಯಲ್ಗಳಲ್ಲಿ ಪ್ರೇತಾತ್ಮ, ಮರುಜನ್ಮ ಎಲ್ಲವೂ ಮಾಮೂಲಾಗಿದೆ ಅನ್ನಿ. ವೀಕ್ಷಕರನ್ನು ಸೆಳೆದುಕೊಳ್ಳಲು ಇವುಗಳನ್ನು ತುರುಕುವುದು ಇಂದಿನ ಅನಿವಾರ್ಯಗೆ ಆಗಿದೆ. ಬೈಯುತ್ತಲೇ ಇಂಥದ್ದನ್ನು ನೋಡುವ ದೊಡ್ಡ ವರ್ಗವೇ ಇರುವ ಕಾರಣ, ಇದೇ ವಿಷಯ ಇಟ್ಟುಕೊಂಡು ಸೀರಿಯಲ್ ಮಾಡಲಾಗುತ್ತಿದೆ. ಆದರೆ ಭಾಗ್ಯಲಕ್ಷ್ಮಿ ಮನೆಯಲ್ಲಿ ಕಾಣಿಸಿಕೊಂಡಿರುವ ಈ ದೆವ್ವಗಳಿಗೂ ಭಾಗ್ಯಲಕ್ಷ್ಮಿ ಸೀರಿಯಲ್ಗೂ ಸಂಬಂಧ ಇಲ್ಲ!
ಈ ವಿಡಿಯೋ ಅನ್ನು ಭಾಗ್ಯ ಪಾತ್ರಧಾರಿ ಸುಷ್ಮಾ ಕೆ.ರಾವ್ ಶೇರ್ ಮಾಡಿಕೊಂಡಿದ್ದಾರೆ. ಶೂಟಿಂಗ್ನ ಬಿಡುವಿನ ವೇಳೆಯಲ್ಲಿ ಇದೇ ರೀತಿಯ ತರ್ಲೆ ವಿಡಿಯೋಗಳನ್ನು ಮಾಡಿ ಸುಷ್ಮಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಾಕುತ್ತಲೇ ಇರುತ್ತಾರೆ. ಇದೀಗ ನಾಲ್ಕು ದೆವ್ವಗಳ ವಿಡಿಯೋ ಮಾಡಿ ತಂಗಾಳಿಯಾಗಿ ತೇಲಿಬಂದೆ ಹಾಡಿನ ಹಿನ್ನೆಲೆ ಕೊಟ್ಟಿದ್ದಾರೆ. ಮುಸುಕಿನ ದೆವ್ವಗಳ ಒಳಗೆ ಇರುವುದು ಭಾಗ್ಯ, ತಾಂಡವ್, ಗುಂಡ ಮತ್ತು ತನ್ವಿ ಎನ್ನುವುದು ನೆಟ್ಟಿಗರ ಅಭಿಪ್ರಾಯ. ಒಟ್ಟಿನಲ್ಲಿ ಈ ರೀಲ್ಸ್ ಭಾಗ್ಯಲಕ್ಷ್ಮಿ ಅಭಿಮಾನಿಗಳಿಗೆ ರಸದೌತಣ ಉಣಬಡಿಸುತ್ತಿದೆ. ಈಚೆಗಷ್ಟೇ ಹಿಮಾಲಯ ದರ್ಶನ, ಟ್ರೆಕ್ಕಿಂಗ್ ಮುಗಿಸಿ ಬಂದಿದ್ದಾರೆ ನಟಿ ಸುಷ್ಮಾ ಕೆ. ರಾವ್. ಅದರ ವಿಡಿಯೋಗಳನ್ನೂ ಕಂತುಕಂತಿನಲ್ಲಿ ಶೇರ್ ಮಾಡುತ್ತಿದ್ದಾರೆ. ಅದರ ಜೊತೆಗೆ ಇಂಥ ವಿಡಿಯೋಗಳನ್ನೂ ಶೇರ್ ಮಾಡುತ್ತಾರೆ.
ಇನ್ನು ಸುಷ್ಮಾ ಕೆ.ರಾವ್ ಕುರಿತು ಹೇಳುವುದಾದರೆ, ಇನ್ನು ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ. ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ 1997ರಲ್ಲಿ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದರು.
