ಬಾಲಿವುಡ್‌ನಲ್ಲಿ ಹಣ, ಪ್ರಖ್ಯಾತಿ ಸಿಕ್ಕರೂ ಮುಂಬೈಗೆ ಯಾಕೆ ಶಿಫ್ಟ್‌ ಆಗಲಿಲ್ಲ? ಎಆರ್‌ ರೆಹಮಾನ್‌ ಹೇಳಿದ್ದಿಷ್ಟು..

ಬಾಲಿವುಡ್‌ನಲ್ಲಿ ಹಣ, ಪ್ರಖ್ಯಾತಿ ಎಲ್ಲವೂ ಸಿಕ್ಕರೂ, ಎಆರ್‌ ರೆಹಮಾನ್‌ ಮಾತ್ರ ಮುಂಬೈಗೆ ಶಿಫ್ಟ್‌ ಆಗುವ ಮನಸ್ಸು ಮಾಡಲಿಲ್ಲ. ಇಂದಿಗೂ ಚೆನ್ನೈ ಅವರ ಮನೆ. ಬಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ಸುಭಾಷ್‌ ಘಾಯ್‌, ಮುಂಬೈಗೆ ಶಿಫ್ಟ್‌ ಆಗುವಂತೆ ಹೇಳಿದ್ದರೂ, ರೆಹಮಾನ್ ಅದನ್ನು ತಿರಸ್ಕರಿಸಿದ್ದರು..
 

AR Rahman says underworld mafia culture is the resason dissuaded him from moving to Mumbai san

ನವದೆಹಲಿ (ಆ.12): ದಕ್ಷಿಣದಲ್ಲಿ ಎಎಆರ್‌ ರೆಹಮಾನ್‌ ಎಷ್ಟು ಪ್ರಖ್ಯಾತರೋ, ಬಾಲಿವುಡ್‌ನಲ್ಲೂ ಎಆರ್‌ ರೆಹಮಾನ್‌ ಮ್ಯೂಸಿಕ್‌ ಎಂದರೆ ಹುಚ್ಚು. ದಿಲ್‌ ಸೇ, ತಾಲ್‌, ರೋಜಾ.. ಲೆಕ್ಕವಿಲ್ಲದಷ್ಟು ಚಿತ್ರಗಳಿಗೆ ಎಆರ್‌ ರೆಹಮಾನ್‌ ಸಂಗೀತ ನೀಡಿದ್ದಾರೆ. ಒಂದಕ್ಕಿಂತ ಒಂದು ಅದ್ಭುತ ಗೀತೆಗಳು ಬಾಲಿವುಡ್‌ನಲ್ಲಿ ನೀಡಿದ್ದ ಎಎಆರ್‌ ರೆಹಮಾನ್‌ಗೆ ಮುಂಬೈನಲ್ಲಿಯೇ ಶಾಶ್ವತವಾಗಿ ನೆಲೆಸುವ ಎಲ್ಲಾ ಅವಕಾಶಗಳೂ ಇದ್ದವು. ಆದರೆ, ರೆಹಮಾನ್‌ ಮಾತ್ರ ಇಂದಿಗೂ ತಮ್ಮ ಊರು ಚೆನ್ನೈನಲ್ಲಿಯೇ ವಾಸವಾಗಿದ್ದಾರೆ. ಸ್ವತಃ ಬಾಲಿವುಡ್‌ನ ದಿಗ್ಗಜ ನಿರ್ದೇಶಕ ಸುಭಾಷ್‌ ಘಾಯ್‌, ಎಆರ್‌ ರೆಹಮಾನ್‌ ಅವರಿಗೆ ನೀವು ಮುಂಬೈನಲ್ಲಿಯೇ ನೆಲೆಸುವುದು ಒಳ್ಳೆಯದು ಎಂದಿದ್ದರಂತೆ.  ಇನ್ನು ಎಎಆರ್‌ ರೆಹಮಾನ್‌ಗೂ ಕೂಡ ಅದು ಒಳ್ಳೆಯದು ಎಂದು ಅನಿಸಿದರೂ, ಒಂದೇ ಒಂದು ಕಾರಣಕ್ಕೆ ಮುಂಬೈನಲ್ಲಿ ನೆಲೆಸದೇ ಇರುವ ತೀರ್ಮಾನ ಮಾಡಿದ್ದರು. ಅಮೆರಿಕಾದಲ್ಲಿಯೂ ಸ್ವಂತ ಮನೆಯನ್ನು ಹೊಂದಿರುವ ಎಆರ್‌ ರೆಹಮಾನ್, ಅಲ್ಲಿಯೂ ಕೂಡ ಇರೋದಿಲ್ಲ. ನನಗೇನಿದ್ದರೂ ನನ್ನೂರು ಚೆನ್ನೈನಲ್ಲಿಯೇ ಸಮಾಧಾನ ಸಿಗುತ್ತಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಎರಡು ಬಾರಿಯ ಆಸ್ಕರ್‌ ಪ್ರಶಸ್ತಿ ವಿಜೇತ ಎಎಆರ್‌ ರೆಹಮಾನ್‌ ಸಾಕಷ್ಟು ಹಾಲಿವುಡ್‌ ಪ್ರೊಡಕ್ಷನ್‌ ಹೌಸ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಇನ್ನು ಭಾರತದಲ್ಲಿ ವಿವಿಧ ಭಾಷೆಗಳಲ್ಲಿ ಸಂಗೀತ ನಿರ್ದೇಶದ ಮಾಡಿದ ಹಿರಿಮೆ ಹೊಂದಿದ್ದಾರೆ.

'ನನಗಿನ್ನೂ ನೆನಪಿದೆ 1994ರಲ್ಲಿ ಆಂಧ್ರ ಪ್ರದೇಶದ ದೊಡ್ಡ ನಿರ್ಮಾಪಕರೊಬ್ಬರು ಭೇಟಿಯಾಗಿದ್ದರು. ಚೆನ್ನೈನಿಂದ ಹೊರಬಂದಲ್ಲಿ ಆಂಧ್ರದ ಅತ್ಯಂತ ದುಬಾರಿ ಸ್ಥಳವಾದ ಬಂಜಾರ ಹಿಲ್ಸ್‌ನಲ್ಲಿ ದೊಡ್ಡ ಸ್ಥಳ ನೀಡುತ್ತೇನೆ ಎಂದಿದ್ದರು. ನಾನು ಅವರಿಗೆ ಒಂದು ಸ್ಮೈಲ್‌ ಮಾತ್ರ ಕೊಟ್ಟಿದ್ದೆ. ಅದಾದ ಬಳಿಕ ಉತ್ತರ ಭಾರತದಲ್ಲೂ ಸಾಕಷ್ಟು ಅವಕಾಶಗಳು ಬಂದವು. ಬಾಲಿವುಡ್‌ನಲ್ಲಿ ಸಾಕಷ್ಟು ಕೆಲಸ ಸಿಕ್ಕಿತ್ತು. ನಿರ್ದೇಶಕ ಸುಭಾಷ್‌ ಘಾಯ್‌ ನನ್ನ ಬಳಿ ಬಂದು ನೀವು ಮುಂಬೈಗೆ ಶಿಫ್ಟ್‌ ಆದರೆ ಒಳ್ಳೆಯದಾಗುತ್ತದೆ. ಬಾಲಿವುಡ್‌ನ ಜನ ನಿಮ್ಮನ್ನು ಬಹಳ ಇಷ್ಟಪಡುತ್ತಾರೆ. ಯಾಕೆ ನೀವು ಹಿಂದಿ ಕಲಿಯಬಾರದು ಎಂದು ಪ್ರಶ್ನೆ ಮಾಡಿದ್ದರು. ಹಿಂದಿ ಭಾಷೆ ಗೊತ್ತಿದ್ದರೆ ಸುಲಭ ಎಂದಿದ್ದರು. ಆದರೆ, ಮುಂಬೈನಲ್ಲಿ ಆಗ ಅಂಡರ್‌ವರ್ಲ್ಡ್‌ ಮಾಫಿಯಾ ಸಂಸ್ಕೃತಿ ಜೋರಾಗಿದ್ದ ಕಾಲ. ಹಾಗಾಗಿ ಅವರ ಸಲಹೆಯ ಬಗ್ಗೆ ನಾನು ಯೋಚನೆಯನ್ನೇ ಮಾಡಿರಲಿಲ್ಲ' ಎಂದು ರೆಹಮಾನ್‌ ಹೇಳಿದ್ದಾರೆ.

ಕೇರಳ ಸ್ಟೋರಿಗೆ ಗಾಯಕ ಎ. ಆರ್‌. ರೆಹಮಾನ್‌ ಪರೋಕ್ಷ ವಿರೋಧ

ಕೆಲ ವರ್ಷಗಳ ಬಳಿಕ ನಾನು ಇಂಗ್ಲೆಂಡ್‌ನಲ್ಲಿ ಕೆಲಸ ಮಾಡಲು ಆರಂಭಿಸಿದೆ. ಆದರೆ, ನನ್ನೊಂದಿಗೆ ಪತ್ನಿ ಕೇವಲ ಮೂರು ತಿಂಗಳು ಇದ್ದಳು. ಆಕೆಗೆ ಭಾರತಕ್ಕೆ ವಾಪಾಸ್‌ ಹೋಗಬೇಕು ಎನ್ನುವ ಮನಸ್ಸಾಗಿತ್ತು. ಆ ಬಳಿಕ ಅಮೆರಿಕದಲ್ಲಿ. ಅಲ್ಲಿ ಸ್ವಂತ ಮನೆ ಕೂಡ ಖರೀದಿ ಮಾಡಿದ್ದೆ. ಇಡೀ ಕುಟುಂಬದವರು ಅದನ್ನು ಇಷ್ಟಪಟ್ಟಿದ್ದರು. ಇನ್ನೇನು ಆ ಮನೆಗೆ ಕಾಲಿಟ್ಟೆವು ಎಂದಾಗಲೇ, ನಮ್ಮ ಇಡೀ ಕುಟುಂಬ ಚೆನ್ನೈಗೆ ವಾಪಾಸಾಗಿದ್ದರು ಎಂದು ಹೇಳಿದ್ದಾರೆ.

The Kerala Story: ಮಸೀದಿಯಲ್ಲಿ ಹಿಂದೂ ವಿವಾಹ ವಿಡಿಯೋ ಶೇರ್​ ಮಾಡಿದ A.R. Rahman

ಇದೇ ಸಂದರ್ಶನದಲ್ಲಿ ಮಾತನಾಡಿದದ ಅವರು, ನನ್ನ ಮೂವರು ಮಕ್ಕಳು ಎಲ್ಲವನ್ನೂ ಜಾಣ್ಮೆಯಿಂದ ನಿರ್ವಹಣೆ ಮಾಡದೇ ಇದ್ದಲ್ಲಿ, ನನ್ನ ವೃತ್ತಿಜೀವನದಲ್ಲಿ ನಿರ್ಮಿಸಿದ ಹಣ, ಖ್ಯಾತಿ ಗೌರವ ಎಲ್ಲವೂ ಕಣ್ಮರೆಯಾಗಬಹುದು.ಅದಕ್ಕಾಗಿಯೇ ನಾನು ನನ್ನ ಕಷ್ಟಗಳು ಹಾಗೂ ನನ್ನ ಜೀವನದಲ್ಲಿ ಎದುರಿಸಿದ ಹಣಕಾಸಿ ಪರಿಸ್ಥಿತಿಗಳ ಬಗ್ಗೆ ಅವರೊಂದಿಗೆ ಮಾತನಾಡುವುದಕ್ಕೆ ಎಂದಿಗೂ ಹಿಂಜರಿಯುವುದಿಲ್ಲ ಎಂದಿದ್ದಾರೆ.

Latest Videos
Follow Us:
Download App:
  • android
  • ios