Asianet Suvarna News Asianet Suvarna News

ಕೇರಳ ಸ್ಟೋರಿಗೆ ಗಾಯಕ ಎ. ಆರ್‌. ರೆಹಮಾನ್‌ ಪರೋಕ್ಷ ವಿರೋಧ

ಕೇರಳ ಸ್ಟೋರಿ ಸಿನಿಮಾ ವಿವಾದದ ಬೆನ್ನಲ್ಲೇ, ಹಿಂದೂ ಜೋಡಿಯೊಂದು ಮಸೀದಿಯಲ್ಲಿ ವಿವಾಹವಾಗುತ್ತಿರುವ ವಿಡಿಯೋವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌, ಇದು ಮತ್ತೊಂದು ಕೇರಳ ಸ್ಟೋರಿ ಎಂದು ಹೇಳಿದ್ದಾರೆ. ಈ ಮೂಲಕ ಚಿತ್ರದ ಅಂಶಗಳ ಬಗ್ಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

Singer AR Rahman indirectly opposed The Kerala Story movie He shares Hindu couple marriage in masjid and said this is the real story of Kerala akb
Author
First Published May 5, 2023, 11:38 AM IST

ನವದೆಹಲಿ: ಕೇರಳ ಸ್ಟೋರಿ ಸಿನಿಮಾ ವಿವಾದದ ಬೆನ್ನಲ್ಲೇ, ಹಿಂದೂ ಜೋಡಿಯೊಂದು ಮಸೀದಿಯಲ್ಲಿ ವಿವಾಹವಾಗುತ್ತಿರುವ ವಿಡಿಯೋವನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌, ಇದು ಮತ್ತೊಂದು ಕೇರಳ ಸ್ಟೋರಿ ಎಂದು ಹೇಳಿದ್ದಾರೆ. ಈ ಮೂಲಕ ಚಿತ್ರದ ಅಂಶಗಳ ಬಗ್ಗೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಮಾನವೀಯತೆಯ ಮೇಲಿನ ಪ್ರೀತಿ ಷರತ್ತಿಲ್ಲದ್ದು ಮತ್ತು ಗುಣಪಡಿಸುವಂತದ್ದು ಎಂದು ರೆಹಮಾನ್‌ (A.R Rahaman)ಈ ವಿಡಿಯೋಗೆ ಕ್ಯಾಪ್ಷನ್‌ ಬರೆದಿದ್ದಾರೆ. 2 ನಿಮಿಷದ ಈ ವಿಡಿಯೋದ ಕುರಿತಾಗಿ ಹಲವು ಮಾಧ್ಯಮಗಳು ವರದಿ ಮಾಡಿದ್ದು, ಮದುಮಗಳು ತಾಯಿ ಮದುವೆ ಮಾಡಲು ಕಷ್ಟವಿದೆ ಎಂದು ಸಹಾಯಕ್ಕಾಗಿ ಮಸೀದಿಯ (Masjid) ಸಮಿತಿಗೆ ಮನವಿ ಮಾಡಿದ್ದರಿಂದ ಈ ಮದುವೆಯನ್ನು ಮಾಡಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

The Kerala Story: 32 ಸಾವಿರ ಹುಡುಗಿಯರ ನಾಪತ್ತೆ: ಬೆಚ್ಚಿ ಬೀಳಿಸಿದ ಟ್ರೇಲರ್​!

ಕೇರಳದ ಯುವತಿಯರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ (Islam Religion) ಮತಾಂತರಿಸಿ ಉಗ್ರ ಕೃತ್ಯಗಳಲ್ಲಿ ತೊಡಗಿಸಲಾಗುತ್ತಿದೆ ಎಂಬ ಕಥೆಯನ್ನು ಹೊಂದಿರುವ ಚಿತ್ರ ‘ಕೇರಳ ಸ್ಟೋರಿ’ ಈಗಾಗಲೇ ರಾಜ್ಯದಲ್ಲಿ ಸಾಕಷ್ಟುವಿವಾದ ಸೃಷ್ಟಿಸಿದೆ.

ಕೇರಳ ಸ್ಟೋರಿ ನಿಷೇಧ ಕೋರಿದ್ದ 3ನೇ ಅರ್ಜಿಯೂ ತಿರಸ್ಕೃತ

ಕೇರಳ ಸ್ಟೋರಿ ಚಿತ್ರ ನಿಷೇಧಿಸುವಂತೆ ಕೋರಿದ್ದ ಅರ್ಜಿಯನ್ನು ಸತತ ಮೂರನೇ ಬಾರಿ ಸುಪ್ರೀಂ (Supreme court) ತಿರಸ್ಕರಿಸಿದೆ. ಈ ಅರ್ಜಿ ವಿಚಾರಣೆ ಮಾಡಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ (D Y Chandracud) ಅವರನ್ನೊಳಗೊಂಡ ನ್ಯಾಯಪೀಠ, ಚಿತ್ರ ನಿಷೇಧದ ನಿರ್ಧಾರ ತೆಗೆದುಕೊಳ್ಳುವ ಮೊದಲು ನಾವು ಚಿತ್ರ ತಂಡದ ದೃಷ್ಟಿಕೋನದಿಂದ ನೋಡಬೇಕು. ಅದರಲ್ಲಿ ಒಬ್ಬ ನಿರ್ಮಾಪಕ ಹಣ ಹಾಕಿದ್ದು, ನಟರ ಕೂಲಿ ಇರುತ್ತದೆ, ಅಲ್ಲದೇ ಹಲವಾರು ಜನ ಕೆಲಸ ಮಾಡಿರುತ್ತಾರೆ. ಹೀಗೆ ನಿಷೇಧ ಮಾಡಿ ಎಂದರೆ ಅವರ ಕಷ್ಟಗಳನ್ನು ನೋಡಬೇಕು. ಏಕಾಏಕಿ ಚಿತ್ರವನ್ನು ನಿಷೇಧಿಸಲಾಗದು’ ಎಂದು ಹೇಳಿ ಅರ್ಜಿ ತಿರಸ್ಕರಿಸಿತು.

'ದಿ ಕೇರಳ ಸ್ಟೋರಿ' ಸಿನಿಮಾ ವಿರುದ್ಧ ಆಕ್ರೋಶ, ಬ್ಯಾನ್‌ಗೆ ಹೆಚ್ಚಿದ ಒತ್ತಾಯ; ಅಂತದ್ದೇನಿದೆ ಈ ಚಿತ್ರದಲ್ಲಿ?

 

Follow Us:
Download App:
  • android
  • ios