ಅನಿಲ್ ಕಪೂರ್ 'ಬೇಟಾ' ಚಿತ್ರದಲ್ಲಿ ಶ್ರೀದೇವಿ ಜೊತೆ ನಟಿಸಲು ಬಯಸಿದ್ದರು. ಆದರೆ, ಶ್ರೀದೇವಿ ಈ ಆಫರ್ ಅನ್ನು ಸ್ಪಷ್ಟವಾಗಿ ನಿರಾಕರಿಸಿದರು. ನಂತರ, ನಿರ್ಮಾಪಕರು ಮಾಧುರಿ ದೀಕ್ಷಿತ್ ಅವರನ್ನು ಆಯ್ಕೆ ಮಾಡಿದರು.
ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಅಭಿನಯದ 'ಬೇಟಾ' ಸಿನಿಮಾ ಬಿಡುಗಡೆಯಾಗಿ 34 ವರ್ಷಗಳಾಗಿವೆ. ಈ ಚಿತ್ರ 1992ರ ಏಪ್ರಿಲ್ 3 ರಂದು ತೆರೆಕಂಡಿತ್ತು. 172 ನಿಮಿಷಗಳ ಈ ಸಿನಿಮಾ, ಇಂದರ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿದ್ದು, ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ತನ್ನ ಬಜೆಟ್‌ಗಿಂತ 5 ಪಟ್ಟು ಹೆಚ್ಚು ಹಣ ಗಳಿಸಿತ್ತು. ಬೇಟಾ ಸಿನಿಮಾ ರಿಲೀಸ್ ಆಗಿ 34 ವರ್ಷಗಳು ಕಳೆದಿವೆ. 1992ರಲ್ಲಿ ತೆರೆಕಂಡ ಈ ಚಿತ್ರವನ್ನು ಇಂದರ್ ಕುಮಾರ್ ನಿರ್ದೇಶಿಸಿದ್ದರು.
ಅನಿಲ್ ಕಪೂರ್ ಮತ್ತು ಮಾಧುರಿ ದೀಕ್ಷಿತ್ ಮುಖ್ಯಭೂಮಿಕೆಯಲ್ಲಿದ್ದರು. ಆದರೆ, ಈ ಪಾತ್ರಕ್ಕೆ ಮೊದಲ ಆಯ್ಕೆ ಶ್ರೀದೇವಿ ಆಗಿದ್ದರು, ಆದರೆ ಅವರು ನಟಿಸಲು ನಿರಾಕರಿಸಿದ್ದರು. ವರದಿಗಳ ಪ್ರಕಾರ, ಅನಿಲ್ ಕಪೂರ್ 'ಬೇಟಾ' ಚಿತ್ರದಲ್ಲಿ ಶ್ರೀದೇವಿ ಜೊತೆ ನಟಿಸಲು ಬಯಸಿದ್ದರು. ಆದರೆ, ಶ್ರೀದೇವಿ ಈ ಆಫರ್ ಅನ್ನು ಸ್ಪಷ್ಟವಾಗಿ ನಿರಾಕರಿಸಿದರು. ನಂತರ, ನಿರ್ಮಾಪಕರು ಮಾಧುರಿ ದೀಕ್ಷಿತ್ ಅವರನ್ನು ಆಯ್ಕೆ ಮಾಡಿದರು. ಮಾಧುರಿ ಅವರ ಹೆಸರು ಕೇಳಿದ ತಕ್ಷಣ ಅನಿಲ್ ಕಪೂರ್ ಸಿಕ್ಕಾಪಟ್ಟೆ ಕೋಪಗೊಂಡಿದ್ದರು ಎನ್ನಲಾಗಿದೆ.
ಶ್ರೀದೇವಿ ನಿರಾಕರಿಸಿದರೆ ಬೇರೆ ದೊಡ್ಡ ನಟಿಯನ್ನು ಆಯ್ಕೆ ಮಾಡಿ, ಮಾಧುರಿ ದೀಕ್ಷಿತ್ ಅವರನ್ನು ಹಾಕಿಕೊಂಡರೆ ಸಿನಿಮಾ ಫ್ಲಾಪ್ ಆಗಬಹುದು ಎಂದು ಅನಿಲ್ ಕಪೂರ್ ನಿರ್ಮಾಪಕರಿಗೆ ಹೇಳಿದ್ದರಂತೆ. ಆದರೆ, ಅವರ ಮಾತು ಸುಳ್ಳಾಯಿತು. ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಯಿತು. 4 ಕೋಟಿ ಬಜೆಟ್‌ನ ಈ ಚಿತ್ರ ಬರೋಬ್ಬರಿ 23.5 ಕೋಟಿ ಗಳಿಸಿತ್ತು. 'ಬೇಟಾ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಅನಿಲ್ ಕಪೂರ್ ಅವರ ನಟನೆ ಎಲ್ಲರ ಮನಗೆದ್ದಿತ್ತು.
ಇದಕ್ಕಾಗಿ ಅವರಿಗೆ ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿ ಕೂಡ ಲಭಿಸಿತ್ತು. ಮಾಧುರಿ ದೀಕ್ಷಿತ್ ಅವರಿಗೂ ಪ್ರಶಸ್ತಿ ಸಿಕ್ಕಿತ್ತು. ಚಿತ್ರದಲ್ಲಿ ನೆಗೆಟಿವ್ ಪಾತ್ರ ಮಾಡಿದ್ದ ಅರುಣಾ ಇರಾನಿ ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಒಲಿದು ಬಂದಿತ್ತು. 'ಬೇಟಾ' ಚಿತ್ರವು ತಮಿಳಿನ 'ಎಂಗ ಚಿನ್ನ ರಾಸಾ' ಚಿತ್ರದ ರಿಮೇಕ್ ಆಗಿತ್ತು. ಈ ಚಿತ್ರವನ್ನು ಕೆ. ಭಾಗ್ಯರಾಜ್ ಅವರು ಬರೆದು, ನಿರ್ದೇಶಿಸಿ, ನಟಿಸಿದ್ದರು. ಈ ಕಥೆಯು ಬಿ. ಪುಟ್ಟಸ್ವಾಮಯ್ಯ ಅವರ ಕನ್ನಡ ಕಾದಂಬರಿ 'ಅರ್ಧಾಂಗಿ'ಯಿಂದ ಪ್ರೇರಿತವಾಗಿತ್ತು.
ಕನ್ನಡದಲ್ಲಿ ಅಣ್ಣಯ್ಯ
ಮೂಲ ಚಿತ್ರ 1987ರ ಜೂನ್ 17ರಂದು ಬಿಡುಗಡೆಯಾಗಿತ್ತು. ಇದನ್ನು ಹಿಂದಿ ಜೊತೆಗೆ ಕನ್ನಡದಲ್ಲಿ ರವಿಚಂದ್ರನ್ ನಟನೆಯ 'ಅಣ್ಣಯ್ಯ' ಮತ್ತು ತೆಲುಗಿನಲ್ಲಿ 'ಅಬ್ಬಯಿಗಾರು' ಹೆಸರಿನಲ್ಲಿ ಮರುನಿರ್ಮಾಣ ಮಾಡಲಾಗಿತ್ತು. 'ಬೇಟಾ' ಚಿತ್ರದಲ್ಲಿ ಅನಿಲ್ ಕಪೂರ್, ಮಾಧುರಿ ದೀಕ್ಷಿತ್ ಜೊತೆಗೆ ಅರುಣಾ ಇರಾನಿ, ಅನುಪಮ್ ಖೇರ್, ಪ್ರಿಯಾ ಅರುಣ್, ಆಕಾಶ್ ಖುರಾನಾ, ಕುನಿಕಾ ಸದಾನಂದ್, ಆದಿ ಇರಾನಿ, ಲಕ್ಷ್ಮೀಕಾಂತ್ ಬೆರ್ಡೆ, ಭಾರತಿ ಅಚ್ರೇಕರ್, ರಾಜೀವ್ ಮೆಹ್ತಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದರು.


