ನಟಿ ಹಾಗೂ ನಿರೂಪಕಿ ಅನುಶ್ರೀ ಅವರ ಮದುವೆ ಫಿಕ್ಸ್ ಆಗಿದೆ. ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಆಗಸ್ಟ್ 28ಕ್ಕೆ ಮದುವೆ ಆಗಲಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ. ಕೊಡಗು, ಕೂರ್ಗ್ ಮೂಲದ ಕಾರ್ಪೋರೇಟ್ ಉದ್ಯಮಿ ರೋಷನ್ ಜೊತೆ ಅನುಶ್ರೀ ಮದುವೆ ನಡೆಯಲಿದೆ.
ಕನ್ನಡದ ನಟ, ಪ್ಯಾನ್ ಇಂಡಿಯಾ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರ ಬಗ್ಗೆ ಅನುಶ್ರೀ (Anchor Anushree) ಮಾತನ್ನಾಡಿದ್ದಾರೆ. ಕೆಜಿಎಫ್ ಬಳಿಕ, ಯಶ್ ತಮ್ಮ ಮಕ್ಕಳ ಜೊತೆ ಒಮ್ಮೆ ಸಮಯ ಕಳೆಯುತ್ತಿದ್ದ ಸಮಯವದು. ಅದೇ ಸಮಯದಲ್ಲಿ ನಟ ಯಶ್ ಅವರು ಅನುಶ್ರೀ ಹೋಸ್ಟ್ ಮಾಡುತ್ತಿದ್ದ ಪ್ರೋಗ್ರಾಂ ಒಂದಕ್ಕೆ ಅತಿಥಿಯಾಗಿ ಹೋಗಿದ್ದಾರೆ. ಅಲ್ಲಿ ಆಂಕರ್ ಅನುಶ್ರೀ ಯಶ್ ಜೊತೆ ಮಾತನ್ನಾಡುತ್ತ ಅಂದು ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮಕ್ಕಳ ಬಗ್ಗೆ ಮಾತನ್ನಾಡಿದ್ದಾರೆ. ಅವರ ಮಾತು ಕೇಳಿ ಯಶ್ ಹೇಳಿದ್ದೇನು? ಎಲ್ಲವೂ ಇಲ್ಲದೆ ನೋಡಿ..
ಹೌದು, ಅನುಶ್ರೀ ಅವರು 'ಯಶ್ ಅವರನ್ನು ಜಗತ್ತಿನಲ್ಲಿ ಯಾರೂ ಕಟ್ಟಿಹಾಕಲು ಸಾಧ್ಯವಿಲ್ಲ. ಕಟ್ಟಿಹಾಕೋದು ಅಂದ್ರೆ ಮಾತಲ್ಲಿ.. ಮಾತಿನ ಮೂಲಕ ಯಶ್ ಅವರನ್ನು ತಡೆದು ತಾವು ಹೇಳಿದಂತೆ ಕೇಳುವಂತೆ ಮಾಡಲು ಸಾಮಾನ್ಯವಾಗಿ ಯಾರಿಂದಲೂ ಅಸಾಧ್ಯ ಎನ್ನಬಹುದು. ಆದರೆ ಆ ಕೆಲಸವನ್ನು ಒಬ್ಬರು ಮಾಡಿದ್ದಾರೆ. ಅದನ್ನೇ ಅನುಶ್ರೀ ಅಂದು ಹೇಳಿದ್ದಾರೆ. ಅದು ಬೇರೆ ಯಾರೂ ಅಲ್ಲ. ಯಶ್ ಮಗಳು ಐರಾ ಆ ಕೆಲಸವನ್ನು ಮಾಡಿದ್ದಾರೆ. ಯಶ್ ಅವರಿಗೆ ಊಟ ಮಾಡಿಸುತ್ತಿರುವ ಐರಾ, ಯಶ್ ಬೇಡ ಎಂದರೂ ಕೇಳದೇ ಹಠ ಮಾಡಿ ತನ್ನ ಅಪ್ಪ ಯಶ್ ಬಾಯಿಗೆ ಸ್ಪೂನ್‌ನಲ್ಲಿ ತಿನ್ನಿಸುತ್ತಿದ್ದಾಳೆ.
ಆ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಅದೇ ವಿಡಿಯೋವನ್ನು ಅನುಶ್ರೀ ಅವರು ತಮ್ಮ ಶೋದಲ್ಲಿ ಕೂಡ ಪ್ಲೇ ಮಾಡಿದ್ದಾರೆ. ಆಗ ಅಲ್ಲಿದ್ದ ಬಿಗ್ ಬಾಸ್ ಸ್ಪರ್ಧಿಗಳೂ ಸಹ ಅದನ್ನು ವೀಕ್ಷಿಸಿ ಸಾಕಷ್ಟು ತಮಾಷೆ ಹಾಗೂ ಖುಷಿ ಅನುಭವಿಸಿದ್ದಾರೆ. ಯಶ್ ಬೇಡ ಅಂದರೂ ಐರಾ ಕೇಳುತ್ತಿಲ್ಲ, ಅಪ್ಪನಿಗೆ ಹೆದರಿಸಿ ಒತ್ತಾಯ ಮಾಡಿ ಬಾಯಿಗೆ ಹಾಕುತ್ತಿದ್ದಾಳೆ. ಆ ವಿಡಿಯೋವನ್ನು ನೋಡಿ ಸ್ವತಃ ಯಶ್ ಕೂಡ ಸಿಕ್ಕಾಪಟ್ಟೆ ಖುಷಿ ಅನುಭವಿಸಿದ್ದಾರೆ. ಅದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಅಂದಹಾಗೆ, ನಟಿ ಹಾಗೂ ನಿರೂಪಕಿ ಅನುಶ್ರೀ ಅವರ ಮದುವೆ ಫಿಕ್ಸ್ ಆಗಿದೆ. ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರು ಆಗಸ್ಟ್ 28ಕ್ಕೆ ಮದುವೆ ಆಗಲಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಸಿಕ್ಕಿದೆ. ಕೊಡಗು, ಕೂರ್ಗ್ ಮೂಲದ ಕಾರ್ಪೋರೇಟ್ ಉದ್ಯಮಿ ರೋಷನ್ ಜೊತೆ ಅನುಶ್ರೀ ಮದುವೆ ನಡೆಯಲಿದೆ. ಅನುಶ್ರೀ ಅವರು ಫ್ಯಾಮಿಲಿ ನೋಡಿದ ಹುಡುಗನನ್ನೇ ಮದುವೆ ಆಗುತ್ತಿದ್ದಾರೆ. ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್. ಬೆಂಗಳೂರಿನಲ್ಲಿ ಗ್ರಾಂಡ್ ಆಗಿ ಮದುವೆ ನಡೆಯಲಿದೆ.
ಅಂತೆ ಕಂತೆಗಳು ತುಂಬಾ ಇತ್ತು:
ಕೆಲವು ಫೇಕ್ ಸೋಶಿಯಲ್ ಮೀಡಿಯಾ ಪೇಜ್‌ಗಳು ಅನುಶ್ರೀ ಅವರು ಆ ನಟನ ಜೊತೆ ಮದುವೆ ಆಗಲಿದ್ದಾರೆ, ಈ ನಟನ ಮದುವೆ ಆಗಲಿದ್ದಾರೆ ಎಂಬ ಸುದ್ದಿಗಳನ್ನು ಆಗಾಗ ಹಬ್ಬಿಸುತ್ತಿತ್ತು. ಆಗೆಲ್ಲ ಸ್ವತಃ ಅನುಶ್ರೀ 'ಇದೆಲ್ಲ ಸುಳ್ಳು' ಎಂದು ಹೇಳುತ್ತಿದ್ದರು. ಸಾಕಷ್ಟು ಜನರ ಜೊತೆ ಅನುಶ್ರೀ ಹೆಸರು ಥಳುಕು ಹಾಕಿಕೊಂಡಿತ್ತು. ಆರಂಭದಲ್ಲಿ ಸ್ಪಷ್ಟನೆ ನೀಡುತ್ತಿದ್ದ ಅನುಶ್ರೀ, ಆಮೇಲೆ ಇದೇ ವಿಷಯವನ್ನು ಹಾಸ್ಯವಾಗಿ ತಗೊಂಡಿದ್ದೂ ಇದೆ, ಆ ಬಗ್ಗೆ ಲೈಟ್ ಆಗಿ ಮಾತನ್ನಾಡಿದ್ದೂ ಇದೆ.
ಈ ಬಾರಿ ನಾನು ಮದುವೆ ಆಗ್ತೀನಿ!
'ಈ ಬಾರಿ ನಾನು ಮದುವೆ ಆಗ್ತೀನಿ, ಈ ವರ್ಷವೇ ಮದುವೆ ನಡೆಯುತ್ತದೆ' ಎಂದು ಅನುಶ್ರೀ ಅವರು ʼಸರಿಗಮಪʼ ಸೇರಿದಂತೆ ʼಮಹಾನಟಿʼ ಶೋನಲ್ಲಿ ಹೇಳಿದ್ದರು. ಅವರ ಮಾತೀಗ ನಿಜವಾಗಿದೆ. ಈ ಬಗ್ಗೆ ಅನುಶ್ರೀ ಅವರು ಅಧಿಕೃತ ಹೇಳಿಕೆ ನೀಡಬೇಕಿದೆ. ಅಂದಹಾಗೆ ಅನುಶ್ರೀ ಅವರ ತಂದೆ ಚಿಕ್ಕ ವಯಸ್ಸಿನಲ್ಲಿಯೇ ಮನೆ ಬಿಟ್ಟು ಹೋಗಿದ್ದರು. ಆ ಬಳಿಕ ಅವರ ತಾಯಿಯೇ ಅನುಶ್ರೀಯನ್ನು, ಅವರ ತಮ್ಮನನ್ನು ಸಾಕಿದ್ದರು. ಅನುಶ್ರೀ ಅವರು ಮಂಗಳೂರಿನವರು. ಒಂದು ಹಂತಕ್ಕೆ ಬಂದ ಬಳಿಕ, ಅನುಶ್ರೀ ಅವರು ತಾವೇ ದುಡಿಯಲು ಆರಂಭಿಸಿದರು. ಈಗ ಇಡೀ ಕುಟುಂಬದ ಜವಾಬ್ದಾರಿಯನ್ನು ಅವರೇ ಹೊತ್ತಿಕೊಂಡಿದ್ದಾರೆ.
ಕನ್ನಡದ ರಿಯಾಲಿಟಿ ಶೋ ಆಗಿರಲೀ, ಸಿನಿಮಾ ಕಾರ್ಯಕ್ರಮದ ಹೋಸ್ಟಿಂಗ್ ಇರಲಿ, ಅಲ್ಲಿ ಎಲ್ಲರೂ ಅನುಶ್ರೀಗೆ 'ನಿಮ್ಮ ಮದುವೆ ಯಾವಾಗ?' ಎಂಬ ಪ್ರಶ್ನೆ ಮಾಡುತ್ತಿದ್ದರು. ಆ ಸಮಯದಲ್ಲಿ ಅನುಶ್ರೀ ತಮಗೆ ತೋಚಿದ ಉತ್ತರ ಕೊಡುತ್ತಿದ್ದರು. ಯಾವುದೇ ವೇದಿಕೆಯಿದ್ದರೂ ಪಟ ಪಟ ಅಂತ ಮಾತನಾಡುವ ಅನುಶ್ರೀ ಅವರು, ಹಲವು ಬಾರಿ ಸ್ವತಃ ತಾವೇ ಕಾಮಿಡಿ ಸೃಷ್ಟಿ ಮಾಡುತ್ತಾರೆ. ಕನ್ನಡ ಕಿರುತೆರೆಯಲ್ಲಿ ನಂ 1 ಆಂಕರ್ ಆಗಿರುವ ಅನುಶ್ರೀ ಅವರು ಉತ್ತಮ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ.
ಬಹಳಷ್ಟು ರಿಯಾಲಿಟಿ ಶೋಗಳ ನಿರೂಪಣೆ ಮಾಡಿರುವ ಅನುಶ್ರೀ ಸಾವಿರಾರು ಇವೆಂಟ್‌ಗಳ ನಿರೂಪಣೆ ಮಾಡಿದ್ದಾರೆ. ಬಿಗ್ ಬಾಸ್ ಕನ್ನಡ, ಡ್ಯಾನ್ಸ್ ಶೋನಲ್ಲಿಯೂ ಅನುಶ್ರೀ ಅವರು ಭಾಗವಹಿಸಿದ್ದರು. ಜೊತೆಗೆ, 'ಬೆಂಕಿಪಟ್ಣ' ಸೇರಿದಂತೆ, ಕೆಲವು ಸಿನಿಮಾದಲ್ಲಿಯೂ ನಟಿಸಿದ್ದಾರೆ. 'ಉಪ್ಪು ಹುಳಿ ಖಾರ' ಸಿನಿಮಾದಲ್ಲಿಯೂ ಅವರು ನಟಿಸಿದ್ದರು. ಇದೀಗ ಅನುಶ್ರೀ ಮದುವೆ ಆಗ್ತಿದ್ದಾರೆ. ಹಲವರಿಗೆ ಈ ಸುದ್ದಿ ಕಂಗಾಲ್ ಆಗಲೂ ಕಾರಣ ಆಗಬಹುದು ಎಂಬುದು ಜೋಕ್ ಮಾತ್ರ ಅಲ್ಲ, ಅರ್ಧ ಸತ್ಯ ಸಂಗತಿ ಕೂಡ ಎನ್ನಬಹುದು.
