ಅಮೃತಧಾರೆಯಲ್ಲಿ ಮಲ್ಲಿಯ ಪಾತ್ರ ಮಾಡುತ್ತಿರುವ ನಟಿ ಅನ್ವಿತಾ ಸಾಗರ್​, ರಿಯಲ್​ ಲೈಫ್​ನಲ್ಲಿಯೂ ಪ್ರೀತಿಯ ವಿಷಯದಲ್ಲಿ ನೋವುಂಡಿದ್ದಾರೆ. ನಟಿ ಹೇಳಿದ್ದೇನು? 

ಅಮೃತಧಾರೆ ಸೀರಿಯಲ್​ನಲ್ಲಿ ಸದ್ಯ ಮಲ್ಲಿಯ ಲೈಫ್​ನಲ್ಲಿ ಬಿರುಗಾಳಿ ಎದ್ದಿದೆ. ಪತಿ ಜೈದೇವ್​ ಬೇರೊಬ್ಬ ಹುಡುಗಿಯ ಜೊತೆ ಮದುವೆಯಾಗಿದ್ದಾನೆ. ಇಷ್ಟು ದಿನ ತಾನು ಬಡವಳು ಎಂದುಕೊಂಡಿದ್ದ ಮಲ್ಲಿ ಇದೀಗ ಸಹಸ್ರಾರು ಕೋಟಿ ರೂಪಾಯಿಗಳ ಒಡತಿ ಆಗಿದ್ದಾಳೆ. ಕೋಟ್ಯಧೀಶ್ವರ ರಾಜೇಂದ್ರ ಭೂಪತಿ ಮಗಳು ಎನ್ನುವ ವಿಷಯ ತಿಳಿಯುತ್ತಲೇ ಅಪ್ಪನನ್ನೂ ಕಳೆದುಕೊಂಡಿದ್ದಾಳೆ. ಒಟ್ಟಿನಲ್ಲಿ ಆಕೆಯ ಜೀವನ ಗೋಜಲು ಗೋಜಲಾಗಿದೆ. ಆದರೆ ರಿಯಲ್​ ಲೈಫ್​ನಲ್ಲಿಯೂ ಮಲ್ಲಿ ಅರ್ಥಾತ್​ ಅನ್ವಿತಾ ಸಾಗರ್​ ಅಷ್ಟೇ ಗೋಜಲನ್ನು ಅನುಭವಿಸಿದ್ದು, ಆ ಬಗ್ಗೆ ಇದೀಗ ಓಪನ್​ ಆಗಿ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಫ್​ಡಿಎಫ್​ಎಸ್​ ಯುಟ್ಯೂಬ್​ ಚಾನೆಲ್​ ಜೊತೆ ಮಾತನಾಡಿರುವ ಅನ್ವಿತಾ ಅವರು ತಮ್ಮ ರಿಯಲ್​ ಲೈಫ್​ ಲವ್​, ಬ್ರೇಕಪ್​ ಬಗ್ಗೆ ಹೇಳಿಕೊಂಡಿದ್ದಾರೆ. ನಾನು ನಿಜ ಜೀವನದಲ್ಲಿಯೂ ಒಂಥರಾ ಮಲ್ಲಿಯ ರೀತಿಯವಳೇ ಎಂದಿದ್ದಾರೆ. ನಾನು ಪ್ರೀತಿಸಿದವರಿಂದ ಎಕ್ಸ್​ಪೆಕ್ಟ್​ ಮಾಡಿದ್ದು ಸಿಗದೇ ಇದ್ದಾಗ ತುಂಬಾ ಹರ್ಟ್​ ಆಗುತ್ತದೆ. ನನಗೂ ಹಾಗೆಯೇ ಆಗಿದೆ. ಯಾರೇ ನನ್ನ ಜೀವನದಲ್ಲಿ ಬಂದ ಸಮಯದಲ್ಲಿ ನನಗೇ ಮೊದಲ ಪ್ರಯಾರಿಟಿ ಕೊಡಬೇಕು. ಬೇರೆಯ ಫ್ರೆಂಡ್ಸ್​ ಬರುವುದು ಬೇಡ ಅಂತೇನೂ ನಾನು ಹೇಳಲ್ಲ. ಆದರೆ ನನಗೆ ಆದ್ಯತೆ ಕೊಡಬೇಕು. ಹಾಗೆ ಮಾಡದೇ ನನ್ನನ್ನು ನೆಗ್ಲೆಕ್ಟ್​ ಮಾಡಿದರೆ ಮನಸ್ಸಿಗೆ ನೋವಾಗುತ್ತದೆ. ಇಂಥದ್ದೇ ನನ್ನ ಲೈಫ್​ನಲ್ಲಿಯೂ ಆಗಿದೆ ಎಂದಿದ್ದಾರೆ. ಲವ್​ ಮಾಡಿದ್ದೆ. ಈಗ ಎಲ್ಲಾ ಹೋಗಿದೆ. ಈಗ ಹ್ಯಾಪ್ಪಿನೋ ಹೌದೋ ಅಲ್ವೋ ಗೊತ್ತಿಲ್ಲ. ಒಟ್ಟಿನಲ್ಲಿ ಇದ್ದೀನಿ ಅಷ್ಟೇ ಎಂದು ನೋವಿನಿಂದ ನುಡಿದಿದ್ದಾರೆ ನಟಿ ಅನ್ವಿತಾ. ನಾನು ಲವ್​ ಮಾಡುವ ಹುಡುಗನಿಂದ ಏನೇನೋ ದೊಡ್ಡದ್ದೇನು ಬಯಸಲಿಲ್ಲ. ಅವನು ಹೆಚ್ಚು ದುಡಿಯಬೇಕು, ಒಳ್ಳೆಯ ಕಡೆ ಕರೆದುಕೊಂಡು ಹೋಗಬೇಕು, ಇಂಟರ್​ನ್ಯಾಷನಲ್​ ಟೂರ್​ ಮಾಡಬೇಕು ಎಂದೇನೂ ನಾನು ಬಯಸುವವಳಲ್ಲ. ತಳ್ಳುವ ಗಾಡಿಯಲ್ಲಿ ಏನು ಕೊಡಿಸಿದರೂ ಸಾಕು. ಅಂಥವಳು ನಾನು. ಆದರೆ ನನ್ನ ಜೀವನದಲ್ಲಿ ಆಗಿದ್ದೆಲ್ಲಾ ಮೋಸವೇ. ತುಂಬಾ ಅನ್ಯಾಯವಾಯಿತು ಎಂದಿದ್ದಾರೆ ನಟಿ.

ಇನ್ನು ನಟಿ ಅನ್ವಿತಾ ಸಾಗರ್‌ ಕುರಿತು ಹೇಳುವುದಾದರೆ, ಇವರು ಕನ್ನಡ ಸಿನಿಮಾ ಮತ್ತು ಧಾರಾವಾಹಿ ಕ್ಷೇತ್ರದಲ್ಲಿ ಕಳೆದೊಂದು ದಶಕದಿಂದ ಸಕ್ರಿಯರಾಗಿದ್ದದಾರೆ. ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ ಗಟ್ಟಿಮೇಳದಲ್ಲಿ ಆದ್ಯಾ ಪಾತ್ರದಲ್ಲಿ ನಟಿಸಿದ್ದರು. ಇದಾದ ಬಳಿಕ ಉದಯ ಟಿವಿಯ ಅಣ್ಣ ತಂಗಿ ಸೀರಿಯಲ್​ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದು 1 ಸಾವಿರ ಸಂಚಿಕೆಗಳನ್ನು ಆಗಲೇ ಪೂರೈಸಿದೆ. ಇದೀಗ ಮತ್ತೆ ಅನ್ವಿತಾ ಸಾಗರ್ ಅಮೃತಧಾರೆ ಸೀರಿಯಲ್ ಮೂಲಕ ಕಮ್‌ ಬ್ಯಾಕ್ ಮಾಡಿದ್ದಾರೆ. ಮಲ್ಲಿ ಪಾತ್ರಧಾರಿಯಾಗಿದ್ದ ರಾಧಾ ಭಗವತಿ ಅವರು ಭಾರ್ಗವಿ ಎಲ್​ಎಲ್​ಬಿ ಸೀರಿಯಲ್​ಗಾಗಿ ಈ ಪಾತ್ರ ತೊರೆದ ಬಳಿಕ, ಈಗ ಆ ಪಾತ್ರದಲ್ಲಿ ಅನ್ವಿತಾ ನಟಿಸುತ್ತಿದ್ದಾರೆ.

ಸೀರಿಯಲ್​ನಲ್ಲಿ, ಅವಕಾಶ ಇದ್ದರೂ ಸಿನಿಮಾಕ್ಕೆ ಬರಲು ಕಾರಣವನ್ನೂ ತಿಳಿಸಿರುವ ಅವರು, ಧಾರಾವಾಹಿಗೆ ಅಂಟಿಕೊಂಡಿರುವುದು ಬೇಡ ಎಂದುಕೊಂಡೆ. ಸಿನಿಮಾಕ್ಕೆ ಬರಬೇಕು ಎನ್ನುವ ಹಂಬಲ ಇತ್ತು. ಇದೀಗ ಬಣ್ಣದ ಲೋಕಕ್ಕೆ ಬಂದು 10 ವರ್ಷನೇ ಆಗಿದೆ. ಸೀರಿಯಲ್​ನಲ್ಲಿಯೂ ಸಾಕಷ್ಟು ಡಿಮಾಂಡ್​ ಇದ್ದರೂ, ಸಿನಿಮಾ ನನ್ನ ಮೊದಲ ಪ್ರೀತಿ. ಐತಿಹಾಸಿಕ, ಪೌರಾಣಿಕ ಪಾತ್ರ ಮಾಡುವ ಆಸೆ ಕೂಡ ಇದೆ ಎಂದಿದ್ದಾರೆ ಅನ್ವಿತಾ. ಅಂದಹಾಗೆ ಈ ಚಿತ್ರಕ್ಕಾಗಿ ಅವರು ಪಾರ್ವತಿ ಎನ್ನುವ ಹೆಸರು ಇಟ್ಟುಕೊಂಡಿದ್ದಾರೆ. ತಮ್ಮ ಅಜ್ಜ ಈ ಹೆಸರು ಇಟ್ಟಿರುವುದಾಗಿ ಅನ್ವಿತಾ ಹೇಳಿದ್ದಾರೆ. ಆದ್ದರಿಂದ ಚಿತ್ರದಲ್ಲಿ ಪಾರ್ವತಿ ಎಂದೇ ಹೆಸರು ಇದೆ.

YouTube video player