ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ತಮ್ಮ ಜನ್ಮದಿನದಂದು ಅಮ್ಮನನ್ನು ತಬ್ಬಿಕೊಂಡು ಭಾವುಕರಾದರು. 'ಜಾವಾ' ಚಿತ್ರದ ಪೋಸ್ಟರ್‌ನ್ನು ಪೌರಕಾರ್ಮಿಕರಿಂದ ಬಿಡುಗಡೆ ಮಾಡಿಸುವ ಮೂಲಕ ಎಲ್ಲರ ಮನಗೆದ್ದರು. ಮದುವೆ ಬಗ್ಗೆಯೂ ಮಾತನಾಡಿದ್ದಾರೆ.

ಬೆಂಗಳೂರು (ಮೇ 25): ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ತನ್ನ ಜನ್ಮದಿನದ ಆಚರಣೆಯಲ್ಲೇ ಕಣ್ಣೀರು ಹಾಕಿದ್ದಾರೆ. ಅವರು ಅಮ್ಮನನ್ನು ತಬ್ಬಿಕೊಂಡು ಕಣ್ಣುತುಂಬಿಕೊಂಡ ವೀಡಿಯೋ ಸೋಷಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಪೌರ ಕಾರ್ಮಿಕರೊಂದಿಗೆ ತಮ್ಮ ಜಾವಾ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ ಮಾಡಿಸಿದರು.

ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮದುವೆಯ ಬಗ್ಗೆ ಮಾತನಾಡಿದ ರಾಗಿಣಿ, ‘ನಾನು ಸಿಂಗಲ್ಲಾಗೇ ಚೆನ್ನಾಗಿದ್ದೀನಿ. ಸಿನಿಮಾಗಳಲ್ಲಿ ಬ್ಯುಸಿ ಇದ್ದೀನಿ. ಸರಿಯಾದ ವ್ಯಕ್ತಿ, ಸರಿಯಾದ ಸಮಯ ಬಂದಾಗ ಮದುವೆ ಆಗ್ತೀನಿ. ಸದ್ಯಕ್ಕೆ ಸಿನಿಮಾಗಳಿಗೆ ನನ್ನ ಪ್ರಿಯಾರಿಟಿ. ಮದುವೆ ಸದ್ಯಕ್ಕಿಲ್ಲ. ಜಾವಾದಲ್ಲಿ ಸೂಪರ್‌ಸ್ಟಾರ್ ಆರ್‌. ಕ್ವೀನ್‌ ಪಾತ್ರದಲ್ಲಿ ನಟಿಸುತ್ತಿದ್ದೇನೆ’ ಎಂದರು.

ನಾಯಕ ರಾಜವರ್ಧನ್‌ ಮಾತನಾಡಿ, ‘ರಾಗಿಣಿ ಮದುವೆ ಏನಿದ್ರೂ ಮುಂದಿನ ವರ್ಷ ಇಟ್ಟುಕೊಳ್ಳಲಿ, ಮೊದಲು ನಮ್ಮ ಸಿನಿಮಾಕ್ಕೆ ಡೇಟ್ಸ್‌ ಕೊಡಲಿ. ವಾರಕ್ಕೆ ಇವರ ನಟನೆಯ ಮೂರು ಸಿನಿಮಾ ಮುಹೂರ್ತ ನಡೀತಿದೆ. ನಮ್ಮ ಸಿನಿಮಾದಲ್ಲಿ ದುರಹಂಕಾರಕ್ಕೆ ಬ್ರಾಂಡ್‌ ಅಂಬಾಸಿಡರ್‌ನಂಥ ಸೂಪರ್‌ಸ್ಟಾರ್ ಪಾತ್ರ. ರಜನಿಕಾಂತ್‌ ಪಡೆಯಪ್ಪ ಸಿನಿಮಾದಲ್ಲಿ ರಮ್ಯಕೃಷ್ಣ ಮಾಡಿದ ಬಗೆಯ ಪಾತ್ರ’ ಎಂದರು.

ನಟಿ ರಾಗಿಣಿ ದ್ವಿವೇದಿ ಅವರು ಹುಟ್ಟು ಹಬ್ಬದ ದಿನದಂದು ವೇದಿಕೆ ಮೇಲೆ ಬರುತ್ತಲೇ ತಮ್ಮ ಅಮ್ಮನನ್ನು ತಬ್ಬಿಕೊಂಡು ಕಣ್ಣೀರಿಟ್ಟರು. ಕಣ್ಣೀರು ತಡೆಯಲಾಗದೇ ವೇದಿಕೆ ಮೇಲೆಯೇ ಪೇಪರ್‌ನಿಂದ ಒರೆಸಿಕೊಂಡು ಅಳು ನುಂಗಿದರು. ತನ್ನ ಸಿನಿ ಜರ್ನಿಗೆ ಅಮ್ಮ ಕೊಡುತ್ತಿರುವ ಸಪೋರ್ಟ್‌ಗೆ ಭಾವುಕರಾಗಿದ್ದಾಗಿ ತಿಳಿದುಬಂದಿದೆ. ಇನ್ನು ಸದಾ ಜಾಲಿಯಾಗಿರುವ ರಾಗಿಣಿ ಕಾರ್ಮಿಕರನ್ನು ಕಂಡರೆ ಅಷ್ಟೇ ಆತ್ಮೀಯವಾಗಿ ನಡೆದುಕೊಳ್ಳುತ್ತಾರೆ. ಇನ್ನು ಬೆಂಗಳೂರಿನ ಸ್ವಚ್ಛತಾ ಸೇನಾನಿಗಳಾದ ಪೌರ ಕಾರ್ಮಿಕರು ಎಂದರೆ ಅದೇನೋ ತುಸು ಹೆಚ್ಚಾಗಿಯೇ ರಾಣಿಗಿ ಪ್ರೀತಿ ತೋರಿಸುತ್ತಾರೆ. ಅವರ ಸಾಮಾಜಿಕ ಜಾಲತಾಣದ ಪೋಸ್ಟ್‌ಗಳಲ್ಲಿ ಪೌರ ಕಾರ್ಮಿಕರೊಂದಿಗೆ ಆತ್ಮೀಯವಾಗಿರುವ ಹಲವು ವಿಡಿಯೋಗಳು ಕೂಡ ಇವೆ.

View post on Instagram

ಇದೀಗ ಪೌರ ಕಾರ್ಮಿಕರಿಗೆ ಗೌರವಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯನ್ನು ಮುಂದಿಟ್ಟಿರುವ ರಾಗಿಣಿ ಅವರ 'ಜಾವಾ' ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಅನ್ನು ಪೌರ ಕಾರ್ಮಿಕರ ಕೈಯಿಂದಲೇ ಬಿಡುಗಡೆ ಮಾಡಿಸಿದರು. ಈ ವೇಳೆ ವೇದಿಕೆ ಮೇಲಿದ್ದ ಮೂರ್ನಾಲ್ಕು ಮಹಿಳಾ ಪೌರ ಕಾರ್ಮಿಕರೊಂದಿಗೆ ಯಾವುದೇ ಭೇದವನ್ನೂ ತೋರದೆ ಆತ್ಮೀಯರಂತೆ ನಡೆದುಕೊಂಡರು. ಕೆಲವರು ಪೌರ ಕಾರ್ಮಿಕರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳದೆ ದೂರ ಇಡುವ ಮನಸ್ಥಿತಿಯವರು ರಾಗಿಣಿಯವರನ್ನು ನೋಡಿ ಪಾಠ ಕಲಿಯಬೇಕು ಎಂದು ಕೆಲವರು ಹೇಳಿದ್ದಾರೆ.

ಇನ್ನು ಜಾವಾ ಚಿತ್ರದ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿರುವ ರಾಗಿಣಿ ಅವರ ವಿಡಿಯೋಗೆ ನೆಟ್ಟಿಗರು 'ನೀವು ಜೀವನದ ರಿಯಲ್ ಹೀರೋಯಿನ್' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನು ಕಲೆವರು ರಾಗಿಣಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.

View post on Instagram