- Home
- Entertainment
- Sandalwood
- ರಾಗಿಣಿ ಜೊತೆ ಒಂದಾದ ಧರ್ಮ ಕೀರ್ತಿರಾಜ್: ಬನಶಂಕರಿ ದೇವಸ್ಥಾನದಲ್ಲಿ ಆಗಿದ್ದು ಮುಹೂರ್ತ!
ರಾಗಿಣಿ ಜೊತೆ ಒಂದಾದ ಧರ್ಮ ಕೀರ್ತಿರಾಜ್: ಬನಶಂಕರಿ ದೇವಸ್ಥಾನದಲ್ಲಿ ಆಗಿದ್ದು ಮುಹೂರ್ತ!
ನನ್ನ ಪಾತ್ರದಲ್ಲಿ ದುರ್ಗೆಯ ಶಕ್ತಿ, ಸರಸ್ವತಿಯ ಬುದ್ಧಿ, ಲಕ್ಷ್ಮಿಯ ಸಮೃದ್ಧಿ ಇದೆ ಎಂದರು. ಈ ಸಿನಿಮಾದಲ್ಲಿ ಧರ್ಮ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದರು ರಾಗಿಣಿ.

ರಾಗಿಣಿ ದ್ವಿವೇದಿ ಹಾಗೂ ಧರ್ಮಕೀರ್ತಿರಾಜ್ ನಟನೆಯ ಹೊಸ ಸಿನಿಮಾ ‘ಸಿಂಧೂರಿ’. ಚಿತ್ರವನ್ನು ಶಂಕರ್ ಕೋನಮಾನಹಳ್ಳಿ ಬರೆದು ನಿರ್ದೇಶಿಸಿದ್ದು, ಎಸ್ ರಮೇಶ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಮುಹೂರ್ತ ಬೆಂಗಳೂರಿನ ಬನಶಂಕರಿ ದೇವಾಲಯದಲ್ಲಿ ನಡೆದಿದೆ.
ಸಿನಿಮಾ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಶಂಕರ್ ಕೋನಮಾನಹಳ್ಳಿ, ‘ ಈ ಸಿನಿಮಾದ ಶೀರ್ಷಿಕೆ ಕೇಳಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಡಿ ಕೆ ರವಿ ಅವರ ಕಥೆಯಾ ಅಂತ ಬಹಳ ಮಂದಿ ಕೇಳಿದ್ದಾರೆ.
ಆದರೆ ಈ ಚಿತ್ರಕ್ಕೂ ಅವರಿಬ್ಬರಿಗೂ ಯಾವುದೇ ಸಂಬಂಧ ಇಲ್ಲ. ಇದೊಂದು ಕಾಲ್ಪನಿಕ ಕಥೆ. ಮರ್ಡರ್ ಮಿಸ್ಟ್ರಿ. ಇದರಲ್ಲಿ ರಾಗಿಣಿ ಕಥೆಯ ನಿರ್ಣಾಯಕ ಪಾತ್ರದಲ್ಲಿದ್ದಾರೆ’ ಎಂದರು. ರಾಗಿಣಿ ದ್ವಿವೇದಿ, ಸಿನಿಮಾ ಶೀರ್ಷಿಕೆಯಲ್ಲೇ ಕೆಂಪು ಬಣ್ಣವಿದೆ.
ನನ್ನ ಪಾತ್ರದಲ್ಲಿ ದುರ್ಗೆಯ ಶಕ್ತಿ, ಸರಸ್ವತಿಯ ಬುದ್ಧಿ, ಲಕ್ಷ್ಮಿಯ ಸಮೃದ್ಧಿ ಇದೆ ಎಂದರು. ಈ ಸಿನಿಮಾದಲ್ಲಿ ಧರ್ಮ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ತನ್ನ ಪಾತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದರು.
ನಿರ್ಮಾಪಕ ಎಸ್ ರಮೇಶ್ ಹಿಂದಿನ ಸಿನಿಮಾಕ್ಕೆ ಬಂಡವಾಳ ಹೂಡಿ ಮೋಸ ಹೋದ ಕಥೆ ಹೇಳಿದರು. ಇನ್ನು ಮುಂದೆ ಸಿನಿಮಾ ಮಾಡಲ್ಲ ಎಂದು ದೃಢ ನಿರ್ಧಾರ ಮಾಡಿದ್ದ ಅವರನ್ನು ಈ ಸಿನಿಮಾ ಕಥೆ ಮತ್ತೆ ಇಂಡಸ್ಟ್ರಿಗೆ ಎಳೆದು ತಂದಿದೆಯಂತೆ.