ಆ ಬಾಲಿವುಡ್ ನಟ ಬಡತನದಿಂದ ಬೆಳೆದು ಸೂಪರ್ ಸ್ಟಾರ್ ಆದವರು. ಅವರ ತಂದೆ ಹೋಟೆಲ್ ಮಾಣಿಯಾಗಿ ಕೆಲಸ ಮಾಡುತ್ತಿದ್ದರು. ಮುಂದೆ ಬಾಲಿವುಡ್ ಹೀರೋ ಆದ ಬಳಿಕ ಆ ಹೋಟೆಲನ್ನೇ ಖರೀದಿಸಿ ತಂದೆಗೆ ಉಡುಗೊರೆಯಾಗಿ ನೀಡಿದರು!
ತಂದೆ ವೇಯ್ಟರ್ ಆಗಿ ಕೆಲಸ ಮಾಡುತ್ತಿದ್ದ ಹೋಟೆಲನ್ನೇ ಖರೀದಿಸಿದ ಬಾಲಿವುಡ್ ನಟ!
ಬಡತನದಿಂದ ಮೇಲೆ ಬಂದು ಚಿತ್ರರಂಗದಲ್ಲಿ ದೊಡ್ಡ ತಾರೆಯರಾದ ಅನೇಕ ಬಾಲಿವುಡ್ ನಟರಿದ್ದಾರೆ. ಅವರಲ್ಲಿ ಒಬ್ಬರು, ಜೀವನದಲ್ಲಿ ಕಠಿಣ ಸಮಯವನ್ನು ಎದುರಿಸಿ ನಂತರ ಸೂಪರ್ ಸ್ಟಾರ್ ಆದ ಸುನೀಲ್ ಶೆಟ್ಟಿ. ಈ ನಟ ತಮ್ಮ ಆರಂಭಿಕ ದಿನಗಳಲ್ಲಿ ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡರು. ಆದರೆ ಇಂದು ಅವರು ಬಾಲಿವುಡ್‌ನ ಪ್ರಮುಖ ನಟರಲ್ಲಿ ಒಬ್ಬರು. ಅವರ ಆಸ್ತಿ ಮೌಲ್ಯವೂ ಸುಮಾರು 125 ಕೋಟಿ ರೂ.ಗಳ ಆಚೆ ಈಚೆ ಇದೆ.
ಸುನೀಲ್ 1992ರಲ್ಲಿ 31ನೇ ವಯಸ್ಸಿನಲ್ಲಿ ದಿವ್ಯಾ ಭಾರತಿ ಎದುರು ಬಲ್ವಾನ್ ಚಿತ್ರದ ಮೂಲಕ ಚಲನಚಿತ್ರಗಳಿಗೆ ಪಾದಾರ್ಪಣೆ ಮಾಡಿದರು. ನಂತರದ ವರ್ಷಗಳಲ್ಲಿ ಸುನೀಲ್ ಶೆಟ್ಟಿ ಆಕ್ಷನ್ ಚಿತ್ರಗಳ ಹೀರೋ ಆಗಿ ಮನೆಮಾತಾದರು. 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. 90ರ ದಶಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾದರು. ಇಂದು ಶೆಟ್ಟಿ ಶ್ರೀಮಂತ ವ್ಯಕ್ತಿ ಮತ್ತು ಜೀವನದ ಐಷಾರಾಮಿತನವನ್ನು ಆನಂದಿಸುತ್ತಿದ್ದರೆ ಅವರು ಅಂದು ಕಷ್ಟದ ದಿನಗಳನ್ನು ಹಾದುಬಂದುದೇ ಕಾರಣವಂತೆ. ಹಾಗಂತ ಸುನೀಲ್ ಶೆಟ್ಟಿ ಒಂದು ಸಂದರ್ಶನದಲ್ಲಿ ಬಹಿರಂಗಪಡಿಸಿದರು.
ಕುಟುಂಬದ ಜೀವನ ಸಾಗಿಸಲು, ಅವರ ತಂದೆ ಒಂದು ಹೋಟೆಲ್‌ನಲ್ಲಿ ವೇಯ್ಟರ್ (ಮಾಣಿ) ಆಗಿ ಕೆಲಸ ಮಾಡುತ್ತಿದ್ದರು ಎಂದು ಸುನೀಲ್ ಬಹಿರಂಗಪಡಿಸಿದರು. "ನನ್ನ ತಂದೆ ವೀರಪ್ಪ ಶೆಟ್ಟಿ ಅಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಿದ್ದರು" ಎಂದು ಅವರು ಹೇಳಿದರು. ಅಲ್ಲಿ ದುಡಿದು ಬಂದ ಹಣದಿಂದ ವೀರಪ್ಪ ಶೆಟ್ಟಿ ತಮ್ಮ ಕುಟುಂಬವನ್ನು ಸಾಕಿದ್ದಲ್ಲದೆ, ಮಗನ ಆಸೆಗೆ ತಕ್ಕಂತೆ ಬೆಳೆಯಲು ಅವಕಾಶವನ್ನೂ ಮಾಡಿಕೊಟ್ಟಿದ್ದರು. ಇದಕ್ಕಾಗಿ ಅವರು ಬಹಳ ಕಾಲ ಓವರ್‌ಟೈಮ್ ಡ್ಯೂಟಿ ಕೂಡ ಮಾಡಬೇಕಾಗಿ ಬಂದಿತ್ತು. ಅಪ್ಪನಿಗೆ ಮಗ ಸಾಕಷ್ಟು ಸಿಕ್ಕದೆ ಹೋದರೂ, ಮಕ್ಕಳಿಗೆ ಕಷ್ಟಗಳು ಬರದಿರಲಿ ಎಂಬುದು ಅವರ ಆಸೆಯಾಗಿತ್ತು.
ಮುಂದೆ ಸುನಿಲ್ ದೊಡ್ಡ ನಟರಾಗಿ ಬೆಳೆದರು. ಸಾಕಷ್ಟು ಹಣ ಸೇರಿದ ಬಳಿಕ ಮಾಡಿದ್ದೇನು ಗೊತ್ತೆ? ತಂದೆ ಕೆಲಸ ಮಾಡುತ್ತಿದ್ದ ಅದೇ ಹೋಟೆಲ್ ಅನ್ನು ಕೊಂಡುಕೊಂಡು ತಮ್ಮ ತಂದೆಗೆ ಉಡುಗೊರೆಯಾಗಿ ನೀಡಿದರು! ತಂದೆ ವೀರಪ್ಪ ಶೆಟ್ಟಿ ಬಹಳ ಕಾಲ ಅಲ್ಲೇ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲೇ ಇದ್ದ ಮೂರು ಕಟ್ಟಡಗಳನ್ನು ಸುನಿಲ್ ಸಾಲಾಗಿ ಖರೀದಿಸಿದರು. ಅವು ಮುಂಬಯಿಯ ವರ್ಲಿಯಲ್ಲಿ ಇವೆ. ಬಾಲ್ಯದಲ್ಲಿ ಸುನಿಲ್ ಶೆಟ್ಟಿ ಕೂಡ ಈ ಕೆಲಸದಲ್ಲಿ ತಂದೆಗೆ ನೆರವಾಗುತ್ತಿದ್ದರಂತೆ.
"ನನ್ನ ತಂದೆ ತಮ್ಮ ಜೀವನದಲ್ಲಿ ಬಹಳಷ್ಟು ಕಷ್ಟಪಟ್ಟರು. ತಮ್ಮದೇ ಆದ ಗುರುತನ್ನು ಮಾಡಿಕೊಂಡರು. ಅವರು ನನ್ನ ಪಾಲಿಗೆ ನಿಜವಾದ ಹೀರೋ. ಅವರು ಯಾವುದೇ ಕೆಲಸ ಮಾಡುವಲ್ಲಿ ನಾಚಿಕೆಪಡಲಿಲ್ಲ. ಅವರು ನನಗೂ ಅದನ್ನೇ ಕಲಿಸಿದರು" ಅಂತಾರೆ ಶೆಟ್ಟಿ. ಈಗ ಸುನಿಲ್ ಶೆಟ್ಟಿಗೆ 62 ವರ್ಷ ವಯಸ್ಸು ಆದರೆ ಈಗಲೂ ಸಹ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ. ಇದಕ್ಕೆ ಮುಖ್ಯ ಕಾರಣ ಅವರ ಫಿಟ್ನೆಸ್. ಚಿತ್ರರಂಗಕ್ಕೆ ಕಾಲಿರಿಸಿದಾಗಿನಿಂದಲೂ ಫಿಟ್ನೆಸ್ ಮೇಲೆ ಗಮನ ಹರಿಸಿರುವ ಸುನಿಲ್ ಶೆಟ್ಟಿ ಇಂದಿಗೂ ಜಿಮ್ ಅನ್ನು ಎರಡನೇ ಮನೆಯನ್ನಾಗಿ ಮಾಡಿಕೊಂಡಿದ್ದಾರೆ.
ಸುಶ್ಮಿತಾ ಸೇನ್ ಜೊತೆ ಅಶ್ಲೀಲವಾಗಿ ವರ್ತಿಸಿದ ನಟ ಇವನೇ!
ಪ್ರಸ್ತುತಕ್ಕೆ ಬಂದರೆ, ಸುನೀಲ್ ಮಹಾರಾಷ್ಟ್ರದಲ್ಲಿ ವಿವಿಧ ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ. ಖಂಡಾಲಾದಲ್ಲಿ ಒಂದು ತೋಟದ ಮನೆ ಮತ್ತು ಮುಂಬೈನಲ್ಲಿ ಒಂದು ಐಷಾರಾಮಿ ಮನೆ. ಹಲವು ಬ್ಯುಸಿನೆಸ್ ಕಟ್ಟಡಗಳು, ಹೋಟೆಲ್‌ಗಳು. ಸುನೀಲ್ ಅವರ ಮುಂಬೈ ನಿವಾಸ ಆಲ್ಟಮೌಂಟ್ ರಸ್ತೆಯಲ್ಲಿರುವ ದುಬಾರಿ ಪೃಥ್ವಿ ಅಪಾರ್ಟ್‌ಮೆಂಟ್‌ಗಳಲ್ಲಿದೆ. ಇದು ನಗರದ ಅತ್ಯಂತ ವಿಶೇಷ ಪ್ರದೇಶಗಳಲ್ಲಿ ಒಂದು ಮತ್ತು ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಅವರ ನೆಲೆಯಾಗಿದೆ.
ಸುನಿಲ್ ಶೆಟ್ಟಿ ಅವರು, ಪಾಪಾ ಕಾರ್ನ್ ಮೀಡಿಯಾ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದರು. ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಫಿಟ್ನೆಸ್ಗೆ ಸಂಬಂಧಿಸಿದ ಕೆಲವು ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಮುಂಬೈನಲ್ಲಿ ಕೆಲವು ಕಡೆಗಳಲ್ಲಿ ಶೆಟ್ಟಿಯ ಜಿಮ್ ಸಹ ಇದೆ.
Shruti Haasan: ತಂದೆ-ತಾಯಿ ಡಿವೋರ್ಸ್ ಆಗಿದ್ದು ಖುಷಿಯಾಯ್ತು! ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಸಂದರ್ಶನ
