ಚಿಂಗಾರಿ ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆಯಾಗಿ ನಟಿಸಿದ ಸುಶ್ಮಿತಾ ಸೇನ್, ಸೆಟ್‌ನಲ್ಲೂ ಅನುಚಿತ ವರ್ತನೆ ಅನುಭವಿಸಬೇಕಾಯಿತು. ಸಹನಟನ ಅನುಚಿತ ವರ್ತನೆ ಆಕೆಯನ್ನು ರೊಚ್ಚಿಗೆಬ್ಬಿಸಿತು. ಆದರೆ ಅಂದು ಏನು ನಡೆಯಿತು ಎಂಬುದು ನಿಗೂಢವಾಗಿಯೇ ಉಳಿಯಿತು.
ಬಾಲಿವುಡ್ ನಟಿ ಸುಷ್ಮಿತಾ ಸೇನ್ ಕೊನೆಯ ಬಾರಿಗೆ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡಿದ್ದು ಅಕ್ಷಯ್ ಕುಮಾರ್ ಜೊತೆಗೆ, ʼಬಾಸ್ʼ ಚಿತ್ರದಲ್ಲಿ. ಆ ಬಳಿಕ ಅವರು ಫಿಲಂಗಳಿಂದ ಹೆಚ್ಚಾಗಿ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಬರುವ ವೆಬ್ ಸೀರೀಸ್‌ಗಳಿಗೆ ಶಿಫ್ಟ್ ಆಗಿದ್ದಾರೆ. ʼಆರ್ಯʼ ಮತ್ತು ʼತಾಲಿʼಯಂತಹ ಜನಪ್ರಿಯ ಸೀರೀಸ್‌ಗಳಲ್ಲಿ ತಮ್ಮ ಅದ್ಭುತ ಅಭಿನಯಕ್ಕಾಗಿ ಮೆಚ್ಚುಗೆ ಗಳಿಸಿದ್ದಾರೆ. ಯಾವುದೇ ವಿಷಯದ ಬಗ್ಗೆ ಬಲವಾದ ಅಭಿಪ್ರಾಯ ಹೊಂದಿರುವ ನಟಿ. ಆದರೆ ನಟನೊಬ್ಬನ ಅನುಚಿತ ವರ್ತನೆ ಆಕೆ ಸಿನಿಮಾ ಸೆಟ್‌ನಿಂದ ಹೊರ ನಡೆಯುವಂತೆ ಮಾಡಿತಂತೆ. ಆ ನಟ ಬೇರೆ ಯಾರೂ ಅಲ್ಲ, ಮಿಥುನ್ ಚಕ್ರವರ್ತಿ.
ಚಿಂಗಾರಿ (2006) ಚಿತ್ರದ ಸೆಟ್‌ನಲ್ಲಿ ಈ ವಿವಾದ ಉಂಟಾಗಿತ್ತು. ಅದರಲ್ಲಿ ಸುಷ್ಮಿತಾ ಮತ್ತು ಮಿಥುನ್ ಚಕ್ರವರ್ತಿ ಆತ್ಮೀಯವಾಗಿರುವ ದೃಶ್ಯ ಚಿತ್ರೀಕರಿಸಬೇಕಿತ್ತು. ಆ ಸಂದರ್ಭದಲ್ಲಿ ಮಿಥುನ್ ಚಕ್ರವರ್ತಿ ಕೋಪಿಸಿಕೊಂಡಿದ್ದ. ಇದು ಇಬ್ಬರ ನಡುವೆ ಸ್ಪಷ್ಟ ಘರ್ಷಣೆಗೆ ಕಾರಣವಾಯಿತು. ಮಿಥುನ್, ಸುಶ್ಮಿತಾಳನ್ನು ಆಕೆಯ ಒಪ್ಪಿಗೆ ಇಲ್ಲದಿದ್ದರೂ ಅನುಚಿತವಾಗಿ ಮುಟ್ಟಬಾರದ ಕಡೆ ಸ್ಪರ್ಶಿಸಿದ ಎಂದು ಹೇಳಲಾಗುತ್ತದೆ. ಇದಾದ ನಂತರ ಸುಷ್ಮಿತಾ ಸೆಟ್‌ನಿಂದ ಅಳುತ್ತಾ ಹೊರನಡೆದಳಂತೆ. ಆಕೆ ಇದನ್ನು ಚಿತ್ರದ ನಿರ್ದೇಶಕಿ ಕಲ್ಪನಾ ಜಿ. ಲಾಜ್ಮಿ ಅವರಿಗೆ ತಿಳಿಸಿದಳು. ಇದು ಕೇವಲ ತಪ್ಪು ತಿಳುವಳಿಕೆಯಿಂದ ಆದದ್ದಾಗಿರಬಹುದು ಎಂದರು ಲಾಜ್ಮಿ.
ನಂತರ ಸುಷ್ಮಿತಾ ಪರಿಸ್ಥಿತಿಯನ್ನು ಮರುಪರಿಶೀಲಿಸಿದರು. ಮಿಥುನ್ ಅವರೊಂದಿಗೆ ಖಾಸಗಿಯಾಗಿ ಈ ವಿಷಯವನ್ನು ಪರಿಹರಿಸಿಕೊಡರಂತೆ. ಅವರಲ್ಲಿ ಯಾರೂ ಈ ವಿಷಯವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿಲ್ಲ ಅಥವಾ ಈ ಘಟನೆಯನ್ನು ದೃಢಪಡಿಸಿಲ್ಲ.
ಚಿಂಗಾರಿ ಚಿತ್ರದ ಸುತ್ತ ಸುತ್ತುವರೆದಿರುವ ಮತ್ತೊಂದು ವಿವಾದವೆಂದರೆ ಸುಶ್ಮಿತಾ ಮತ್ತು ಹೊಸಬ ಅನುಜ್ ಸಾಹ್ನಿಯದು. ಸುಶ್ಮಿತಾ ಅವರ ಪಾತ್ರವಾದ ಲೈಂಗಿಕ ಕಾರ್ಯಕರ್ತೆಯನ್ನು ಪ್ರೀತಿಸುವ ಪೋಸ್ಟ್‌ಮ್ಯಾನ್ ಪಾತ್ರವನ್ನು ಸಾಹ್ನಿ ನಿರ್ವಹಿಸಿದ್ದಾರೆ. ಪ್ರಚಾರದ ಹಂತದಲ್ಲಿ, ಅನುಜ್ ಅವರೊಂದಿಗೆ ತಾನು ಚುಂಬಿಸುವ ದೃಶ್ಯದ ಬಗ್ಗೆ ಹೆಮ್ಮೆಪಡುತ್ತಾ, ಸಾಹ್ನಿ 36 ರೀಟೇಕ್‌ಗಳನ್ನು ತೆಗೆದುಕೊಂಡೆ ಎಂದು ಹೇಳಿಕೊಂಡಿದ್ದ. ಈ ಹೇಳಿಕೆ ಸುಶ್ಮಿತಾ ಅವರನ್ನು ಕೆರಳಿಸಿದವು. ಅವರು ಚಿತ್ರದ ಪ್ರಚಾರಕ್ಕೆ ನಿರಾಕರಿಸಿದರು. ನಿರ್ದೇಶಕಿ ಕಲ್ಪನಾ ಹಾಗೂ ಸುಶ್ಮಿತಾ ನಡುವಿನ ನಿರಂತರ ಭಿನ್ನಾಭಿಪ್ರಾಯದಿಂದಾಗಿ ಎರಡು ತಿಂಗಳು ಆಕೆ ಪ್ರಚಾರಕ್ಕೆ ಹೋಗಲಿಲ್ಲ.
ಅನುಜ್ ಅಂತಿಮವಾಗಿ ಸುಶ್ಮಿತಾ ಅವರ ಮುಂದೆ ತಮ್ಮ ವರ್ತನೆಗೆ ಕ್ಷಮೆಯಾಚಿಸಿದರಂತೆ. ನಿರ್ದೇಶಕರು ತಮ್ಮ ತಪ್ಪನ್ನು ಸಾರ್ವಜನಿಕವಾಗಿ ಒಪ್ಪಿಕೊಂಡರು. "ಚಿಂಗಾರಿಯಂತಹ ಚಿತ್ರವನ್ನು ಆ ರೀತಿಯಲ್ಲಿ ಪ್ರಚಾರ ಮಾಡಬಾರದು ಎಂದು ನಾನು ಭಾವಿಸುತ್ತೇನೆ. ಅನುಜ್ ಚಿತ್ರದ ಹಿಂದಿನ ಸಂಪೂರ್ಣ ಸಂದೇಶಕ್ಕಿಂತ ಕಿಸ್ ಸೀಕ್ವೆನ್ಸ್‌ಗೆ ಪ್ರಾಮುಖ್ಯತೆ ನೀಡಿದ್ದು ನನಗೆ ತುಂಬಾ ನೋವಾಯಿತು" ಎಂದು ಕಲ್ಪನಾ ಹೇಳಿದರು.
ಈ ವಿವಾದಗಳನ್ನು ಬದಿಗಿಟ್ಟು ನೋಡಿದರೆ, ಚಿಂಗಾರಿಯಲ್ಲಿ ಬಸಂತಿ ಎಂಬ ಸೆಕ್ಸ್ ವರ್ಕರ್ ಪಾತ್ರವನ್ನು ಸುಶ್ಮಿತಾ ನಿರ್ವಹಿಸಿದ್ದರು. ಅದು ಭಾವನಾತ್ಮಕವಾಗಿ ಕಷ್ಟಕರವಾಗಿತ್ತು ಎಂದು ಸುಶ್ಮಿತಾ ಹೇಳಿದ್ದರು. ಲೈಂಗಿಕ ಕಾರ್ಯಕರ್ತೆಯ ಪಾತ್ರವು ನನ್ನ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರಿತು. ಇದರಿಂದಾಗಿ ಆತಂಕ ಮತ್ತು ಭಾವನಾತ್ಮಕವಾಗಿ ಬಳಲಿದೆ ಎಂದು ಸುಶ್ಮಿತಾ ಹೇಳಿದಳು.
Shruti Haasan: ತಂದೆ-ತಾಯಿ ಡಿವೋರ್ಸ್ ಆಗಿದ್ದು ಖುಷಿಯಾಯ್ತು! ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಸಂದರ್ಶನ
ಸುಶ್ಮಿತಾ ಏನೂ ಮುಗ್ಧೆಯಲ್ಲ. ಆಕೆ ಬದುಕಿನಲ್ಲಿ ಐದಾರು ಮಂದಿಯ ಜೊತೆಗೆ ಲಿವ್ ಇನ್‌ನಲ್ಲಿದ್ದರು. ನಿರ್ದೇಶಕ ವಿಕ್ರಮ್ ಭಟ್ ಜೊತೆಗೆ ಮೂರು ವರ್ಷ ಇದ್ದರು. 2006ರಲ್ಲಿ ರಂದೀಪ್ ಹೂಡಾ ಜೊತೆ ಮೂರು ವರ್ಷಗಳ ಕಾಲ ಡೇಟಿಂಗ್ ನಡೆಸಿದ್ದರು. ಚಲನಚಿತ್ರ-ನಿರ್ಮಾಪಕ ಮುದಸ್ಸರ್ ಅಜೀಜ್ ಮತ್ತು ಸುಶ್ಮಿತಾ ಸೇನ್ 2008ರಿಂದ 2010ರವರೆಗೆ ಡೇಟಿಂಗ್ ನಲ್ಲಿದ್ದರು. 2013ರಲ್ಲಿ, ವಾಸಿಂ ಅಕ್ರಮ್ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಅವರೊಂದಿಗೆ ಡೇಟಿಂಗ್ ಮಾಡುವ ಬಗ್ಗೆ ಭಾರಿ ಸುದ್ದಿ ಹಬ್ಬಿತು. ರೋಹ್ಮನ್ ಶಾಲ್ ಮತ್ತು ಸುಶ್ಮಿತಾ ಸೇನ್ 2018-2021ರ ನಡುವೆ ಪರಸ್ಪರ ಡೇಟಿಂಗ್ ಮಾಡಿದ್ದಾರೆ. 2022ರಲ್ಲಿ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಅವರು ಸುಶ್ಮಿತಾ ಸೇನ್ ಅವರೊಂದಿಗೆ ಆತ್ಮೀಯ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದರು.
BoycottMaldives ಬಿಸಿ, ಭಾರತೀಯ ಪ್ರವಾಸಿಗರ ಸೆಳೆಯಲು ಕತ್ರಿನಾ ಕೈಫ್‌ರನ್ನ ಜಾಗತಿಕ ರಾಯಭಾರಿ ಮಾಡಿದ ಮಾಲ್ಡೀವ್ಸ್!
