ಥ್ರಿಲ್ಲರ್‌ ಮತ್ತು ಸಾಹಸಪ್ರಧಾನ ಅಂಶಗಳನ್ನು ಒಳಗೊಂಡಿರುವ ‘ಟಕ್ಕರ್‌’ನಲ್ಲಿ ಮೂರು ಹಾಡುಗಳಿವೆ. ಡಾ. ವಿ ನಾಗೇಂದ್ರ ಪ್ರಸಾದ್‌ ಎರಡು ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಡ್ಯುಯೆಟ್‌ ಹಾಡನ್ನು ವಿಜಯಪ್ರಕಾಶ್‌ ಮತ್ತು ಅನುರಾಧಾ ಭಟ್‌ ಹಾಡಿದರೆ, ಮತ್ತೊಂದು ಹಾಡನ್ನು ಶಶಾಂಕ್‌ ಶೇಷಗಿರಿ ಹಾಡಿದ್ದಾರೆ. ಸ್ಫೂರ್ತಿದಾಯಕ ಗೀತೆಯನ್ನು ಸಂಜಿತ್‌ ಹೆಗ್ಡೆ ಹಾಡಿದ್ದಾರೆ. ಆಗಸ್ಟ್‌ ತಿಂಗಳಲ್ಲಿ ಆಡಿಯೋ ಬಿಡುಗಡೆ ಮಾಡಲು ತಯಾರಿ ನಡೆಯುತ್ತಿದೆ.

ಗಗನ ಮುಟ್ಟಿತು ಕುರುಕ್ಷೇತ್ರದ ಧುರ್ಯೋಧನ ಹಾಗೂ ಭೀಷ್ಮ ಕಟೌಟ್ !

ಇದು ತಂತ್ರಜ್ಞಾನದ ಯುಗ. ನಮ್ಮ ಮನೆ ಹೆಣ್ಣುಮಕ್ಕಳ ಮೇಲೆ ಕಣ್ಣಿಡಲು ಬೇರೆ ಯಾರೋ ಆಗಂತುಕರು ಎಂಟ್ರಿ ಕೊಡುವುದಿಲ್ಲ. ನಾಲ್ಕು ಗೋಡೆಗಳ ನಡುವೆ, ಕೈಲಿರುವ ಮೊಬೈಲು ಮತ್ತು ಕಂಪ್ಯೂಟರ್‌ ಲ್ಯಾಪ್‌ಟಾಪ್‌ಗಳು ಅವರ ಮಾನ, ಪ್ರಾಣಗಳನ್ನು ಹೇಗೆ ಬಲಿ ತೆಗೆದುಕೊಳ್ಳುತ್ತಿದೆ ಎಂಬುದರ ಸುತ್ತ ಮಾಡಿರುವ ಸಿನಿಮಾ ಇದು. ಕದ್ರಿ ಮಣಿಕಾಂತ್‌ ಸಂಗೀತ ಚಿತ್ರಕ್ಕಿದೆ. ಶ್ರೀಧರ್‌, ಶಂಕರ್‌ ಅಶ್ವಥ್‌, ಸುಮಿತ್ರಾ, ಭಜರಂಗಿ ಲೋಕಿ, ಸಾಧು ಕೋಕಿಲಾ, ಲಕ್ಷ್ಮಣ್‌ ಶಿವಶಂಕರ್‌, ಅಶ್ವಿನ್‌ ಹಾಸನ್‌, ಕುರಿ ಸುನಿಲ್‌, ಜೈಜಗದೀಶ್‌ ಮುಂತಾದವರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ದರ್ಶನ್ ಅಭಿಮಾನಿ ಬೆನ್ನ ಮೇಲೆ ದುರ್ಯೋಧನ ಟ್ಯಾಟೋ