ದರ್ಶನ್ ಅಭಿಮಾನಿ ಬೆನ್ನ ಮೇಲೆ ದುರ್ಯೋಧನ ಟ್ಯಾಟೋ
ದರ್ಶನ್ ಕುರುಕ್ಷೇತ್ರ ರಿಲೀಸ್‌ಗೆ ರೆಡಿ | ದರ್ಶನ್ ಅಭಿಮಾನಿಯೊಬ್ಬನ ಮೈಮೇಲೆ ದುರ್ಯೋಧನ ಟ್ಯಾಟೋ |
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯೊಬ್ಬ ಮೈಮೇಲೆ ಧುರ್ಯೋಧನನ ಟ್ಯಾಟೋ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾರೆ. ಹರೀಶ್ ಅನ್ನುವ ದರ್ಶನ್ ಅಭಿಮಾನಿ ದುರ್ಯೋಧನನ ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಡಿ ಬಾಸ್ ನಮ್ಮ ದೇವರು ಇದ್ದಂಗೆ ಎಂದು ಅಭಿಮಾನಿ ನಂಬಿದ್ದಾರೆ.
ಅಭಿಮಾನಿಯ ಬೆನ್ನ ಮೇಲೆ ‘ಸಂಗೊಳ್ಳಿ ರಾಯಣ್ಣ’ ಟ್ಯಾಟು ವೈರಲ್ !
ಟ್ಯಾಟೋ 28-30 ಇಂಚಿದೆ. 24 ಗಂಟೆಗಳ ಕಾಲ ಟ್ಯಾಟೋ ವರ್ಕ್ ಮಾಡಲಾಗಿದೆ. ಲೈಫ್ ಲಾಂಗ್ ಟ್ಯಾಟೋ ಇದಾಗಿದೆ.
ಬಹು ನಿರೀಕ್ಷೆಯ ಹಾಗೂ ಬಹುಭಾಷೆಯ ‘ಮುನಿರತ್ನ ಕುರುಕ್ಷೇತ್ರ’ ಬಿಡುಗಡೆಯ ದಿನಾಂಕ ಪಕ್ಕಾ ಆಗಿದೆ. ಆಗಸ್ಟ್ 2ಕ್ಕೆ ತೆರೆ ಮೇಲೆ ಅದ್ದೂರಿಯಾಗಿ ಈ ಸಿನಿಮಾ ಮೂಡುತ್ತಿದೆ. ಆ ಮೂಲಕ ಚಿತ್ರದ ಬಿಡುಗಡೆಯ ದಿನಾಂಕದ ಗೊಂದಲಗಳಿಗೆ ವಿತರಕ ರಾಕ್‌ಲೈನ್ ವೆಂಕಟೇಶ್ ತೆರೆ ಎಳೆದಿದ್ದಾರೆ.
ಚಾಲೆಂಜಿಂಗ್ ಸ್ಟಾರ್‌ಗೆ ಸಿಕ್ತು ಹೊಸ ಬಿರುದು; ಕೊಟ್ಟಿದ್ದು ಅಭಿಮಾನಿಗಳಲ್ಲ!
ಏಕಕಾಲದಲ್ಲಿ ಐದು ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದ್ದು, ಎಲ್ಲಾ ಭಾಷೆಗಳಲ್ಲೂ ರಾಕ್‌ಲೈನ್ ವೆಂಕಟೇಶ್ ಅವರೇ ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ತಾವೇ ಮುಂದೆ ನಿಂತು ಈ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ.