ಬಾಕ್ಸ್ ಆಫೀಸ್ ಕಲೆಕ್ಷನ್ ಮುಟ್ಟುವ ಎಲ್ಲಾ ಸಾಧ್ಯತೆ ಇರುವ ಮೊದಲ ಕನ್ನಡ 3D ಚಿತ್ರ 'ಕುರುಕ್ಷೇತ್ರ' ಚಿತ್ರಮಂದಿರದ ಎದುರು ಕಟೌಟ್ ಭಾರೀ ಸೌಂಡ್ ಮಾಡುತ್ತಿದೆ.
ಆಗಸ್ಟ್ 9 ರಂದು ದೇಶದಾದ್ಯಂತ ತೆರೆ ಕಾಣುತ್ತಿರುವ ಮುನಿರತ್ನ ’ಕುರುಕ್ಷೇತ್ರ' ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದ್ದು ಈಗ ಚಿತ್ರ ಮಂದಿರದ ಮುಂದೆ ಕಟೌಟ್ ಹಾಕುವ ಮೂಲಕ ಸೌಂಡ್ ಜಾಸ್ತಿ ಮಾಡುತ್ತಿದೆ.
ರಿಲೀಸ್‌ಗೂ ಮುನ್ನವೇ ಬಾಲಿವುಡ್‌ಗೆ ಕೋಟಿಗೆ ಮಾರಾಟವಾಯ್ತಾ ಕುರುಕ್ಷೇತ್ರ ?
ಬೆಂಗಳೂರಿನ ಮಾಗಡಿ ರಸ್ತೆಯಲ್ಲಿರುವ ಪ್ರಸನ್ನ ಚಿತ್ರಮಂದಿರದ ಎದುರು ಎತ್ತರದ ಕಟೌಟ್ ಹಾಕಲಾಗಿದೆ. ಅಷ್ಟೇ ಅಲ್ಲದೇ ಅಭಿಮಾನಿಯೊಬ್ಬಳು ಕಟೌಟ್ ಗೆ ತೆಂಗಿನ ಕಾಯಿ ಒಡೆದು ಆರತಿ ಎತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ವಿಶೇಷವೇನೆಂದರೆ ಕಟೌಟ್ ನಲ್ಲಿ ದರ್ಶನ್ ಜೊತೆಯಾಗಿ ಅಂಬರೀಶ್ ಸಹ ಇದ್ದಾರೆ. ಕುರುಕ್ಷೇತ್ರ ಚಿತ್ರಕ್ಕೆ ನರ್ತಕಿ ಮುಖ್ಯ ಚಿತ್ರಮಂದಿರವಾಗಿದ್ದು ರಿಲೀಸ್‌ಗೂ ಮುನ್ನ ಮಲ್ಟಿಸ್ಟಾರ್‌ಗಳ ಫೋಟೋ ಹಾಕಲಾಗುತ್ತಿದೆಯಂತೆ.
