ತೆಲುಗಿನಲ್ಲಿ ಕುರುಕ್ಷೇತ್ರ ಪ್ರಚಾರ ಮಾಡಿದ ದರ್ಶನ್!
ಸ್ಯಾಂಡಲ್‌ವುಡ್ ಮಲ್ಟಿಸ್ಟಾರ್ ಸಿನಿಮಾ 'ಕುರುಕ್ಷೇತ್ರ' ಪ್ರಚಾರಕ್ಕೆಂದು ದರ್ಶನ್ ಆಂಧ್ರ ಪ್ರದೇಶಕ್ಕೆ ತೆರಳಿದ್ದು ಚಿತ್ರದ ಬಗ್ಗೆ ತೆಲುಗಿನಲ್ಲಿ ಮಾತನಾಡಿದ್ದಾರೆ.
ಕನ್ನಡ ಚಿತ್ರರಂಗ ಮಾಡುತ್ತಿರುವ ಹೊಸ ಪ್ರಯತ್ನಕ್ಕೆ ಒಮ್ಮೆ ಚಪಾಳೆ ತಟ್ಟಲೇಬೇಕು ಏಕೆಂದರೆ ಪಂಚ ಭಾಷೆಯಲ್ಲಿ ಕುರುಕ್ಷೇತ್ರ 3D ಚಿತ್ರ ರಿಲೀಸ್ ಮಾಡುವುದು ಅಂದರೆ ದೊಡ್ಡ ಸಾಹಸವೇ ಹೌದು.
ಕುರುಕ್ಷೇತ್ರ 2 ನೇ ಟ್ರೇಲರ್ ರಿಲೀಸ್; ದರ್ಶನ್ ಅಬ್ಬರಕ್ಕೆ ಅಭಿಮಾನಿಗಳು ಫುಲ್ ಖುಷ್!
ಕೆಲ ದಿನಗಳ ಹಿಂದೆ ಕುರುಕ್ಷೇತ್ರ ಚಿತ್ರತಂಡವು ಪ್ರಚಾರದ ಸಲುವಾಗಿ ಆಂಧ್ರ ಪ್ರದೇಶಕ್ಕೆ ತೆರಳಿತ್ತು. ಸಿನಿಮಾ ನಿರ್ದೇಶಕರು ನಿರ್ಮಾಪಕರು ಹಾಗೂ ಕಲಾವಿದರೆಲ್ಲರೂ ಮಾತನಾಡಿದರೂ ಎಲ್ಲರ ಗಮನ ಸೆಳೆದದ್ದು ಮಾತ್ರ ದರ್ಶನ್ ಮಾತು. ದರ್ಶನ್‌ಗೆ ನಟನೆ ಎಷ್ಟು ಸುಲಭವೂ ಭಾಷಾ ಹಿಡಿತವೂ ಅಷ್ಟೇ ಸುಲಭ. ತೆಲುಗಿನಲ್ಲಿ ತುಂಬಾ ಚೆನ್ನಾಗಿ ಮಾತನಾಡಿ ಗಮನ ಸೆಳೆದರು.
ದರ್ಶನ್ ಅಭಿಮಾನಿ ಬೆನ್ನ ಮೇಲೆ ದುರ್ಯೋಧನ ಟ್ಯಾಟೋ
'ನನಗೊಬ್ಬ ಮಗನಿದ್ದಾನೆ. ಅವನು ಭೀಮ ಅಂದ್ರೆ ಛೋಟಾ ಭೀಮ ಮಾತ್ರ ನೋಡಿರುವುದು. ಅವರಿಗೆಲ್ಲಾ ಭೀಮ ಅಂದ್ರೆ ಉದ್ದಕ್ಕೆ, ಡುಮ್ಮಗೆ ಇರುತ್ತಾರೆ ಎಂಬ ಕಲ್ಪನೆ ಕೂಡಾ ಇಲ್ಲ. ಬಾಲ್ಯದಲ್ಲಿ ನಾವು DD Channel ನಲ್ಲಿ ಮಹಾಭಾರತ ಹಾಗೂ ರಾಮಾಯಣ ನೋಡಿ ಬೆಳೆದಿದ್ದೇವೆ’ ಎಂದು ಹೇಳಿದರು. ಚಿತ್ರದ ಬಗ್ಗೆ ಮಾತನಾಡುತ್ತಾ, 1970 ರಿಂದ 2010 ರವರೆಗೂ ನಟಿಸಿರುವ ಹಿರಿಯ ಕಲಾವಿದರು ಇಲ್ಲಿ ಅಭಿನಯಿಸಿದ್ದಾರೆ ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲ ಹಾಗೂ ಪ್ರೋತ್ಸಾಹ ಇರಲಿ ಎಂದು ತೆಲುಗಿನಲ್ಲಿ ವಿನಂತಿಸಿಕೊಂಡರು.