ಕುರುಕ್ಷೇತ್ರ 2 ನೇ ಟ್ರೇಲರ್ ರಿಲೀಸ್; ದರ್ಶನ್ ಅಬ್ಬರಕ್ಕೆ ಅಭಿಮಾನಿಗಳು ಫುಲ್ ಖುಷ್!

ದರ್ಶನ್ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರ | 2 ನೇ ಟ್ರೇಲರ್ ರಿಲೀಸ್ | ದರ್ಶನ್ ಧುರ್ಯೋಧನನ ಅಬ್ಬರಕ್ಕೆ ಅಭಿಮಾನಿಗಳು ಫುಲ್ ಖುಷ್ 

Kannada movie Kurukshetra 2 official trailer released

ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ಕುರುಕ್ಷೇತ್ರ. ಈ ಚಿತ್ರದ ಎರಡನೇ ಟ್ರೇಲರ್ ರಿಲೀಸ್ ಆಗಿದ್ದು ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ, ಕಾತರ ಹೆಚ್ಚಾಗುವಂತೆ ಮಾಡಿದೆ. 

 

ನಟ ದರ್ಶನ್‌ ಸೇರಿದಂತೆ ಬಹುಭಾಷೆಯ, ಬಹು ತಾರಾಗಣವನ್ನು ಒಳಗೊಂಡಿರುವ, ನಾಗಣ್ಣ ನಿರ್ದೇಶನದ ‘ಮುನಿರತ್ನ ನಿರ್ಮಾಣದ ಚಿತ್ರವಿದು. 

ರಿಲೀಸ್ ಗೂ ಮುನ್ನ ಇಲ್ಲಿವರೆಗೂ ಕುರುಕ್ಷೇತ್ರ 20 ಕೋಟಿ ವಹಿವಾಟು ಮಾಡಿದೆ. ಅದು ಕೂಡ ಕೇವಲ ಟೀವಿ ರೈಟ್ಸ್‌ ಹಾಗೂ ಆಡಿಯೋ ರೈಟ್ಸ್‌ನಲ್ಲಿ ಮಾತ್ರ ಎಂಬುದು ವಿಶೇಷ. 

ಹಿಂದಿ ಸ್ಯಾಟಿಲೈಟ್‌ ಹಕ್ಕುಗಳನ್ನು 9.5 ಕೋಟಿಗೆ ಈಗಾಗಲೇ ಮಾರಲಾಗಿದೆ. ಇನ್ನೂ ಕನ್ನಡದಲ್ಲಿ ಟೀವಿ ಹಕ್ಕುಗಳನ್ನು 9 ಕೋಟಿ ಕೊಟ್ಟಿದ್ದು, ಆಡಿಯೋ ಹಕ್ಕುಗಳನ್ನು 1.5 ಕೋಟಿ ಕೊಟ್ಟು ಲಹರಿ ಆಡಿಯೋ ಸಂಸ್ಥೆ ತಮ್ಮದಾಗಿಸಿಕೊಂಡಿದೆ.  ಅಲ್ಲಿಗೆ ‘ಮುನಿರತ್ನ ಕುರುಕ್ಷೇತ್ರ’ ಚಿತ್ರದ ಸುತ್ತ ಇಲ್ಲಿವರೆಗೂ ಆಗಿರುವ ಒಟ್ಟು ಬ್ಯುಸಿನೆಸ್‌ 20 ಕೋಟಿ ಮಾತ್ರ.

Latest Videos
Follow Us:
Download App:
  • android
  • ios