ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಅನ್ನಾ ಕೊನಿಡೇಲ ವಿಚ್ಛೇದನ ಪಡೆದ ಬೆನ್ನಲ್ಲೇ ಜ್ಯೋತಿಷಿ ವೇಣುಸ್ವಾಮಿ ಅವರ ಹಳೆಯ ವಿಡಿಯೋ ವೈರಲ್ ಆಗಿದೆ. ಪವನ್ ಕಲ್ಯಾಣ್ ಅವರ ಜಾತಕದಲ್ಲಿ ನಾಲ್ಕನೇ ಮದುವೆಯ ಯೋಗವಿದೆ ಎಂದು ವೇಣುಸ್ವಾಮಿ ನುಡಿದಿದ್ದ ಭವಿಷ್ಯ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಟಾಲಿವುಡ್ ಪವರ್ ಸ್ಟಾರ್ ಪವನ್ ಕಲ್ಯಾಣ್, ಪತ್ನಿ ಅನ್ನಾ ಕೊನಿಡೇಲ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದಾರೆ. ಇಬ್ಬರ ನಿರ್ಧಾರ ವೈಯುಕ್ತಿಕವಾಗಿದಗದರೂ, ಕಳೆದ 13 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ್ದ ದಂಪತಿಯ ಬೇರೆ ಆಗಿರುವುದು ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದೆ. ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು ಎಂದು ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆಯೇ ಪ್ರಮುಖ ಜ್ಯೋತಿಷಿ ವೇಣು ಸ್ವಾಮಿ ಈ ಹಿಂದೆ ನಟ ಪವನ್ ಕಲ್ಯಾಣ್ ಅವರ ಮದುವೆ ಬಗ್ಗೆ ನುಡಿದ ಭವಿಷ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ನಟ ಪವನ್ ಕಲ್ಯಾಣ್ ಅವರು ರಾಜಕೀಯಕ್ಕೆ ಎಂಟ್ರಿಯಾಗಿ ಜನಸೇನಾ ಪಕ್ಷ ಸ್ಥಾಪಿಸಿದ್ದರು. ಈ ಸಂದರ್ಭದಲ್ಲಿ ಅವರ ವೈಯುಕ್ತಿಕ ಜೀವನದ ಬಗ್ಗೆ ಭಾರೀ ಟೀಕೆಗಳು ಎದುರಾಗಿತ್ತು. ಅದರಲ್ಲೂ ಪವನ್ ಕಲ್ಯಾಣ್ ಮೂರನೇ ಮದುವೆಯಾದ ಸಂದರ್ಭದಲ್ಲಿ ಭಾರೀ ಟೀಕೆಗಳು, ಆರೋಪಗಳು, ಟ್ರೋಲ್ಗಳು ಬಂದಿತ್ತು. ಈ ಸಂದರ್ಭದಲ್ಲಿ ಸೆಲೆಬ್ರೆಟಿ ಜ್ಯೋತಿಷಿ ವೇಣು ಸ್ವಾಮಿ ಮಹತ್ವದ ಭವಿಷ್ಯ ನುಡಿದ್ದರು. ಜನಸೇನಾ ಪಕ್ಷದ ನಾಯಕ ಪವನ್ ಜಾತಕದ ಪ್ರಕಾರ ನಾಲ್ಕನೇ ಮದುವೆಯ ಅವಕಾಶವಿದೆ ಎಂದು ಶಾಕಿಂಗ್ ಭವಿಷ್ಯ ನುಡಿದ್ದರು.
ವಿಡಿಯೋದಲ್ಲಿ ಏನಿದೆ?
ಪವನ್ ಕಲ್ಯಾಣ್ ಜಾತಕದಲ್ಲಿ ನಾಲ್ಕನೇ ಮದುವೆಯ ಯೋಗವಿದೆ. ಅವರ ಜಾತಕದಲ್ಲಿ ಗುರು ಉನ್ನತ ಸ್ಥಾನದಲ್ಲಿದ್ದಾರೆ. ಇದರ ಆಧಾರದ ಮೇಲೆ ಓರ್ವ ವ್ಯಕ್ತಿಗೆ ಎಷ್ಟು ಮದುವೆಯಾಗುತ್ತದೆ ಎಂದು ಅಂದಾಜು ಮಾಡಬಹುದು. ಆದರೆ ಎಲ್ಲರೂ ನನ್ನನ್ನು ಬೈಯುತ್ತಾರೆ. ಆದರೆ ಇದನ್ನು ಯಾರು ಬೇಕು ಅಂತ ಮಾಡೋದಿಲ್ಲ. ಪವನ್ ಕಲ್ಯಾಣ್ ಅವರಿಗೆ ಈಗಾಗಲೇ ಮೂರು ಮದುವೆಯಾಗಿದೆ. ಆದರೆ ಅವರಿಗೆ ಇನ್ನೊಂದು ಮದುವೆಯಾಗುವ ಅವಕಾಶವಿದೆ. ಆದರೆ ಅದು ಯಾವಾಗ ಆಗುತ್ತೆ ಅನ್ನೋದು ಕಾದುನೋಡಬೇಕು. ಇದು ಒಂದು ತಿಂಗಳಿಗೋ, ವರ್ಷದೊಳಗೋ ಆಗುತ್ತೆ ನೋಡೋಣಾ ಎಂದು ವೇಣುಸ್ವಾಮಿ ಭವಿಷ್ಯ ನುಡಿದಿದ್ದರು.
'2024 ಜೂನ್ ವರೆಗೂ ಪವನ್ ಕಲ್ಯಾಣ್ ಅವರಿಗೆ ಮತ್ತೊಂದು ಮದುವೆಯಾಗುವ ಅವಕಾಶವಿಲ್ಲ. ಚುನಾವಣೆ ಮುಗಿಯುವ ವರೆಗೂ ಆಗೋದಿಲ್ಲ. ಇದು ಅವರ ವೈಯುಕ್ತಿಕ ವಿಚಾರ, ಇದರಲ್ಲಿ ನಾನು ರಾಜಕೀಯ ಮಾಡುತ್ತಿಲ್ಲ. ಏಕೆಂದರೆ ಅದು ಅವರ ನಿರ್ಧಾರ. ಆದರೆ ಅವರ ಜೀವನದಲ್ಲಿ ಇನ್ನಷ್ಟು ವಿವಾದಗಳು ಇದೆ ಅನ್ನೋದು ಮಾತ್ರ ಹೇಳುತ್ತಿದ್ದೇನೆ. ಆದರೆ 2024 ಜೂನ್ ವರೆಗೂ ಅವರಿಗೆ ಇದರ ಅವಕಾಶವಿಲ್ಲ, ಆ ಬಳಿಕ ಕುಡಿಬರಬಹುದು' ಎಂದು 2023ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ವೇಣುಸ್ವಾಮಿ ಶಾಕಿಂಗ್ ಭವಿಷ್ಯ ನುಡಿದ್ದರು.
2024ರಲ್ಲಿ ನೀಡಿದ್ದ ಮತ್ತೊಂದು ಸಂದರ್ಶನದಲ್ಲಿಯೂ ಈ ಬಗ್ಗೆ ಮಾತನಾಡಿ, 'ಪವನ್ ಕಲ್ಯಾಣ್ ಮೂರು ಮದುವೆಯಾಗಿದ್ದಾರೆ ಎಂದು ಹೇಳಿದ್ದಕ್ಕೆ ಅವರು ಏನು ಫೀಲಾದ್ರಾ? ನೀವು ಕೂಡ ಮಾಡಿಕೊಳ್ಳಿ ಎಂದಷ್ಟೇ ಹೇಳಿದ್ದರು. ನಾನು ಅವರ ಜಾತಕ ನೋಡಿ ನಾಲ್ಕನೇ ಮದುವೆಯ ಯೋಗವಿದೆ ಎಂದು ಹೇಳುತ್ತಿದ್ದೇನೆ, ಇದು ನನ್ನ ಅಭಿಪ್ರಾಯ. ಅವರಿಗೆ ಇಲ್ಲ ಕಷ್ಟ ನಿಮಗೆ ಯಾಕೆ?' ಎಂದು ವೇಣುಸ್ವಾಮಿ ಹೇಳಿದ್ದರು.
ಸದ್ಯ ಪವನ್ ಕಲ್ಯಾಣ್ ಮತ್ತು ಅನ್ನಾ ದಂಪತಿ ವಿಚ್ಛೇದನ ಅಧಿಕೃತವಾಗುತ್ತಿದ್ದಂತೆ ವೇಣುಸ್ವಾಮಿ ತಮ್ಮ ಸಂದರ್ಶನದ ವಿಡಿಯೋವನ್ನು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ನಾನು ಈ ಹಿಂದೆ ಈ ಬಗ್ಗೆ ಮಾತನಾಡಿದ್ದೆ ಎಂದು ವರ್ಷವನ್ನು ನಮೂಸಿದಿದ್ದಾರೆ. ಆದರೆ ಪವನ್ ಕಲ್ಯಾಣ್ ಅಭಿಮಾನಿಗಳು, ಜನಸೇನಾ ಪಕ್ಷದ ಕಾರ್ಯಕರ್ತರು ಯಾವ ರೀತಿ ರಿಯಾಕ್ಟ್ ಮಾಡ್ತಾರೆ ಅನ್ನೋ ಭಯದಿಂದ ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ಗೆ ಕಾಮೆಂಟ್ ಗಳನ್ನು ಆಫ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.














