ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಹಾಗೂ ಪತ್ನಿ ಅನ್ನಾ ಲೆಜ್ನೆವಾ ದಾಂಪತ್ಯ ಕೊನೆಗೊಳಿಸುವುದಾಗಿ ಜಂಟಿಯಾಗಿ ಘೋಷಿಸಿದ್ದು, ಅಭಿಮಾನಿಗಳಲ್ಲಿ ಆಘಾತ ಮೂಡಿಸಿದೆ. ಅನ್ಯೋನ್ಯವಾಗಿದ್ದ ಈ ದಂಪತಿ ಏಕಾಏಕಿ ವಿಚ್ಛೇದನದ ನಿರ್ಧಾರಕ್ಕೆ ಬಂದಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಪವನ್ ಕಲ್ಯಾಣ್(Pawan Kalyan) ಅನ್ನ ಕೊನಿಡೇಲಾ(Anna Konidela) ಅವರ ವಿಚ್ಛೇದನ ನಿರ್ಧಾರ ಹೊರಬಿಳುತ್ತಿದ್ದಂತೆ ಟಾಲಿವುಡ್ನಲ್ಲಿ ಬಿರುಗಾಳಿ ಎಬ್ಬಿಸಿದೆ. ಪವನ್ ಕಲ್ಯಾಣ್ ಅವರ ಈ ನಿರ್ಧಾರಿಂದಾಗಿ ಅವರ ಅಭಿಮಾನಿಗಳು, ನೆಟಿಜನ್ ಗಳು ಭಾವುಕರಾಗಿದ್ದಾರೆ.
ಹೌದು ಪ್ರಸ್ತುತ ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಆಗಿರುವ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಜಿನೋವಾ ಕೊನಿಡೇಲಾ ಅವರೊಂದಿಗಿನ ದಾಂಪತ್ಯ ಕೊನೆಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ಬೆಳವಣಿಗೆ ಅಭಿಮಾನಿಗಳಿಗೆ ಶಾಕ್ ಮೂಡಿಸಿದೆ. ಈ ಬಗ್ಗೆ ನಿನ್ನೆ(ನವೆಂಬರ್ 9,ಸೋಮವಾರ) ದೀಪಾವಳಿಯ ಸಂಭ್ರಮದ ನಡುವೆಯೇ ಪವನ್ ಮತ್ತು ಪತ್ನಿ ಇಬ್ಬರೂ ಜಂಟಿಯಾಗಿ ಘೋಷಿಸಿರುವುದು ನೆಟಿಜನ್, ಫ್ಯಾನ್ಸ್ ಬೆಚ್ಚಿಬಿದ್ದಿದ್ದಾರೆ. ಏಕಿಂತ ನಿರ್ಧಾರ? ಎಲ್ಲವೂ ಚೆನ್ನಾಗಿತ್ತಲ್ಲ? ಎಂದು ಪ್ರಶ್ನಿಸಿದ್ದಾರೆ. ನಿನ್ನೆ ರಾತ್ರಿಯಿಂದ ಅಭಿಮಾನಿಗಳು ನೆಟಿಜನ್ಗಳು ಪವನ್ ಕಲ್ಯಾಣ್ ಅನ್ನ ಕೊನಿಡೆಲಾ ದಾಂಪತ್ಯ ಮುರಿದುಬಿಳಲು ನಿಜವಾದ ಕಾರಣಗಳೇನು ಎಂದು ಹುಡುಕಲಾರಂಭಿಸಿದ್ದಾರೆ. #Pawankalyan ಮತ್ತು #Divorce ಎಂಬ ಟ್ಯಾಗ್ಗಳು 'X' ನಲ್ಲಿ ಟ್ರೆಂಡಿಂಗ್ ಆಗಿವೆ.
ಹಾಗಾದರೆ ಪವನ್ ಕಲ್ಯಾಣ್ ಡೈವೋರ್ಸ್ ನಿರ್ಧಾರಕ್ಕೆ ನಿಜವಾದ ಕಾರಣಗಳೇನು?
ಪವನ್ ಮತ್ತು ಅನಾ ಕೊನಿಡೇಲಾ ತುಂಬಾ ಆತ್ಮೀಯರಾಗಿದ್ದರು. ಇತ್ತೀಚೆಗೆ ಚುನಾವಣೆಯಲ್ಲಿ ಪವನ್ ಕಲ್ಯಾಣ ಗೆದ್ದಾಗಲು, ಚುನಾವಣೆ ಸಂದರ್ಭದಲ್ಲೂ ಪತಿಯ ಜೊತೆಗೆ ಖುಷಿಯಿಂದ ಹೆಜ್ಜೆ ಹಾಕಿದ್ದವರು. ಆದರೆ ಇದಕ್ಕಿದ್ದಂತೆ ಏಕಾಏಕಿ ಡೈವೋರ್ಸ್ ನಿರ್ಧಾರ ಏಕೆ ಘೋಷಣೆ ಮಾಡಿದರು ಅನ್ನೋದೀಗ ಅಭಿಮಾನಿಗಳಿಗೆ ಶಾಕ್ ಆಗಿದೆ.
ಪವನ್ ಕಲ್ಯಾಣ್ ರಾಜಕೀಯ, ಹೋರಾಟ, ಪ್ರತಿಭಟನೆಗಳೆಂದು ಬ್ಯುಸಿಯಾಗಿದ್ದಾಗಲೂ ಪತ್ನಿ ಅವರನ್ನು ಸಂಪೂರ್ಣವಾಗಿ ಬೆಂಬಲಿಸಿದ್ದರು. ಮೈತ್ರಿ ಗೆದ್ದು ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾದಾಗ ಹೆಚ್ಚು ಸಂತೋಷ ಪಟ್ಟವರು ಅನ್ನಾ ಕೊನಿಡೇಲಾ ಅವರೇ. ಅಂದು ಗೆದ್ದ ಖುಷಿಯಲ್ಲಿ ಇಬ್ಬರೂ ಮೆಗಾಸ್ಟಾರ್ ಚಿರಂಜೀವಿ ಅವರ ಬಳಿಗೆ ಹೋಗಿ ಆಶೀರ್ವಾದ ಪಡೆದಿದ್ದರು. ಆಗಿನ ಆ ಸುಂದರ ಕ್ಷಣಗಳನ್ನು ಅಭಿಮಾನಿಗಳು ಇಂದು ಮತ್ತೆ ಹಂಚಿಕೊಳ್ಳುತ್ತಿದ್ದಾರೆ.
ಇನ್ನೊಂದು ವಿಷಯ ಹೇಳಬೇಕು. ಅದೇನೆಂದರೆ ಪವನ್ ಕಲ್ಯಾಣ್ ಅವರ ಮಗ ಮಾರ್ಕ್ ಶಂಕರ್ ಬೆಂಕಿ ಅವಘಡದಿಂದ ಬದುಕುಳಿದಿದ್ದು ಪವಾಡ. ಆ ಘಟನೆಯಿಂದ ಚೇತರಿಸಿಕೊಂಡ ನಂತರ ಪವನ್-ಅನ್ನಾ ಇಬ್ಬರೂ ತಿರುಮಲಕ್ಕೆ ಹೋಗಿ ಪೂಜೆ ಸಲ್ಲಿಸಿದರು. ಹಿಂದೂ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಅನುಸರಿಸಿ ಅಂದು ತಿರುಪತಿಯಲ್ಲಿ ಕೂದಲು ಮುಡಿ ಕೊಟ್ಟು ತಲೆ ಬೋಳಿಸಿಕೊಂಡು ಭಗವಂತನನ್ನ ಬೇಡಿದ್ದರು, ಭಕ್ತರಿಗೆ ಅನ್ನದಾನ ಮಾಡಿದ್ದರು. ಅಷ್ಟೊಂದು ಅನೋನ್ಯವಾಗಿದ್ದ ದಂಪತಿಗಳು ಇದೀಗ ಏಕಾಏಕಿ ಡೈವೋರ್ಸ್ ನಿರ್ಧಾರಕ್ಕೆ ಬಂದಿದ್ದೇಕೆ? ಬರಲು ಹೇಗೆ ಸಾಧ್ಯ? ದಾಂಪತ್ಯದಲ್ಲಿ ಅಂತಹದ್ದೇನಾಯ್ತು ಎಂಬ ಅಚ್ಚರಿ ಪ್ರಶ್ನೆಗಳು ಎದ್ದಿವೆ. ಹಳೆಯ ವಿಡಿಯೋಗಳು ವೈರಲ್ ಆಗುತ್ತಿವೆ.
ಹೆಸರು ಬದಲಾವಣೆ
ಇತ್ತೀಚೆಗೆ ಇನ್ಸ್ಟಾಗ್ರಾಮ್ ಖಾತೆ ತೆರೆದಿರುವ ಅನಾ ಲೆಜಿನೋವಾ... ತಮ್ಮ ಹೆಸರನ್ನು ಅನಾ ಕೊನಿಡೇಲಾ ಎಂದು ಬದಲಾಯಿಸಿಕೊಂಡಿದ್ದಾರೆ. ಮೆಗಾಸ್ಟಾರ್ ಚಿರು ತಮ್ಮ ಹುಟ್ಟುಹಬ್ಬದಂದು ಸ್ಪೆಷಲ್ ವಿಶ್ ಸಂದೇಶ ಕಳಿಸಿದ್ದರು. ಪತ್ನಿಗೆ ಕುಟುಂಬದ ಬಗ್ಗೆಯೂ ಅಪಾರ ಗೌರವವಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಅವರ ಹಿಂದಿನಿಂದಲೂ ಪವನ್ ಜೊತೆಗಿನ ವಿಡಿಯೋಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದರು.
…














