ರಾಮಾಯಣ ಪಾರ್ಟ್-1 ಎಂಟು ದಿನಗಳಲ್ಲಿ ಸಾವಿರ ಕೋಟಿ ದಾಟಿ ಮುನ್ನುಗ್ಗುತ್ತಿದೆ. 2,070 ಕೋಟಿ ಗಳಿಸಿರುವ ದಂಗಲ್ ದಾಖಲೆಯನ್ನು ಈ ಯಶ್ ಸಿನಿಮಾ ಮುರಿಯಬಲ್ಲದೆ ಎಂಬ ಕುತೂಹಲ ಮೂಡಿದೆ. ಆಮೀರ್​ ಖಾನ್​ ಅವರ ದಂಗಲ್​ ಸಿನಿಮಾ ಸ್ಟೋರಿ ಏನು? ಏಕಿದು ಇಷ್ಟು ಕಲೆಕ್ಷನ್​ ಮಾಡಿತು?

ಮುಂಬೈ: ರಾಮಾಯಣ ಪಾರ್ಟ್​-1 ಮೂವಿ (Ramayana Part-1 Movie) ಕೇವಲ ಎಂಟು ದಿನಗಳಲ್ಲಿ 1ಸಾವಿರ ಕೋಟಿ ರೂಪಾಯಿ ಕ್ರಾಸ್​ ಮಾಡಿ ಗಳಿಕೆ ಕಂಡಿದೆ. ಇನ್ನೂ ಈ ಸಿನಿಮಾ ಹವಾ ಸೃಷ್ಟಿಸುತ್ತಲೇ ಇದೆ. ಈ ಹೊತ್ತಿನಲ್ಲಿ ಬಾಲಿವುಡ್​ನ ಟಾಪ್​-1 ಮೂವಿಯ ಬಗ್ಗೆ ಸಕತ್​ ಚರ್ಚೆಯಾಗುತ್ತಿದೆ. ಈ ಸಿನಿಮಾ ವಿಶ್ವಾದ್ಯಂತ 2,070 ಕೋಟಿ ರೂಪಾಯಿ ಗಳಿಕೆ ಮಾಡಿ, ಅತಿ ಹೆಚ್ಚು ಗಳಿಕೆ ಮಾಡಿರುವ ಸದ್ಯದ ಟಾಪ್​ 1 ಭಾರತೀಯ ಸಿನಿಮಾ ಎನ್ನಿಸಿಕೊಂಡಿದೆ. ಅದೇ ದಂಗಲ್​ (Dangal Movie) ಸಿನಿಮಾ.

2016ರಲ್ಲಿ ಬಿಡುಗಡೆಯಾದ, ಆಮೀರ್​ ಖಾನ್​, ಫಾತಿಮಾ ಶೇಖ್​, ಸುಹಾನಿ ಭಟ್ನಾಗರ್​, ಜೈರಾ ವಾಸಿಮ್​ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಸಿನಿಮಾದ ದಾಖಲೆಯನ್ನು ಇನ್ನೂ ಸದ್ಯ ಯಾವುದೇ ಭಾರತೀಯ ಸಿನಿಮಾ ಮುರಿದಿಲ್ಲ. ಅಂದಹಾಗೆ ದಂಗಲ್​ ಸಿನಿಮಾ 2 ಸಾವಿರ ಕೋಟಿ ಪ್ಲಸ್​ ಗಳಿಕೆ ಮಾಡಿದ್ದು 53ನೇ ದಿನದಲ್ಲಿ. ಚೀನಾದಲ್ಲಿ ಈ ಸಿನಿಮಾ ಪ್ರಸಾರ ಕಂಡಿದ್ದರಿಂದ ಈ ಪರಿಯಲ್ಲಿ ಕಲೆಕ್ಷನ್​ ಮಾಡಲು ಸಾಧ್ಯವಾಗಿದೆ. , ಇದು ಮಾಜಿ ಕುಸ್ತಿಪಟು ಮಹಾವೀರ್ ಸಿಂಗ್ ಫೋಗಟ್ ಮತ್ತು ಅವರ ಪುತ್ರಿಯರಾದ ಗೀತಾ ಫೋಗಟ್ ಹಾಗೂ ಬಬಿತಾ ಫೋಗಟ್ ಅವರ ನಿಜ ಜೀವನದ ಸ್ಪೂರ್ತಿದಾಯಕ ಕಥೆಯಾಧಾರಿತ ಚಿತ್ರವಾಗಿದೆ.

ಮಹಾವೀರ್ ಸಿಂಗ್ ಫೋಗಟ್ (ಅಮೀರ್ ಖಾನ್) ಹರಿಯಾಣದ ಮಾಜಿ ರಾಷ್ಟ್ರೀಯ ಮಟ್ಟದ ಕುಸ್ತಿಪಟು. ದೇಶಕ್ಕಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆಲ್ಲಬೇಕೆಂಬುದು ಅವರ ದೊಡ್ಡ ಕನಸಾಗಿರುತ್ತದೆ. ಆದರೆ ಆರ್ಥಿಕ ಪರಿಸ್ಥಿತಿಯಿಂದಾಗಿ ಅವರು ಕುಸ್ತಿ ಬಿಟ್ಟು ಉದ್ಯೋಗಕ್ಕೆ ಸೇರಬೇಕಾಗುತ್ತದೆ. ತಮ್ಮ ಈ ಕನಸನ್ನು ತಮ್ಮ ಗಂಡು ಮಗು ಈಡೇರಿಸುತ್ತದೆ ಎಂದು ಅವರು ಭಾವಿಸುತ್ತಾರೆ. ಆದರೆ ನಾಲ್ವರು ಹೆಣ್ಣೇ ಆದ ಬಳಿಕ, ಹೆಣ್ಣು ಮಗುವೇ ಹೇಗೆ ದೇಶಕ್ಕೆ ಕೀರ್ತಿ ತರುತ್ತಾಳೆ ಎನ್ನುವ ಮೂವಿ ಇದಾಗಿದೆ.

ಮುಂದಿನ ಟಾಪ್​ನಲ್ಲಿ ಇರೋದು ಈ ಮೂವಿಗಳು

ಈ ಸಿನಿಮಾ ಹೊರತುಪಡಿಸಿದೆ Baahubali 2: The Conclusion (ಬಾಹುಬಲಿ 2: ದಿ ಕನ್‌ಕ್ಲೂಷನ್) - ₹1,810 ಕೋಟಿ, hurandhar 2: The Revenge (ಧುರಂಧರ್ 2) - ₹1,644 ಕೋಟಿ, Pushpa 2: The Rule (ಪುಷ್ಪ 2: ದಿ ರೂಲ್) - ₹1,604 ಕೋಟಿ ವಿಶ್ವಾದ್ಯಂತ ಗಳಿಸಿದೆ. ಇನ್ನು ಕನ್ನಡದ ಮಟ್ಟಿಗೆ ಹೇಳುವುದಾದರೆ, ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆ ಮಾಡಿದ ಸ್ಯಾಂಡಲ್‌ವುಡ್ (ಕನ್ನಡ) ಚಿತ್ರ 'ಕೆ.ಜಿ.ಎಫ್: ಚಾಪ್ಟರ್ 2' (K.G.F: Chapter 2) ಆಗಿದೆ. 2022ರಲ್ಲಿ ಬಿಡುಗಡೆಯಾದ ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಯಶ್ ನಟನೆಯ ಈ ಚಿತ್ರವು ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಸುಮಾರು ₹1,215 ರಿಂದ ₹1,250 ಕೋಟಿ ಗಳಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಇದೀಗ ರಾಮಾಯಣ ಮೂವಿ ದಂಗಲ್​ ಸಿನಿಮಾದ ದಾಖಲೆಯನ್ನು ಮುರಿಯತ್ತಾ ಎಂದು ಯಶ್​ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ.