- Home
- Entertainment
- Sandalwood
- ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿ, ಒಟಿಟಿಯಲ್ಲಿ ಕಮಾಲ್ ಮಾಡಿದ ಸ್ಯಾಂಡಲ್ವುಡ್ನ ಟಾಪ್ ಸಿನಿಮಾಗಳು
ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿ, ಒಟಿಟಿಯಲ್ಲಿ ಕಮಾಲ್ ಮಾಡಿದ ಸ್ಯಾಂಡಲ್ವುಡ್ನ ಟಾಪ್ ಸಿನಿಮಾಗಳು
ಥಿಯೇಟರ್ಗಳಲ್ಲಿ ಬಿಡುಗಡೆಯಾಗಿ ಸೋಲು ಕಂಡರೂ, ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ಬ್ಲಾಕ್ಬಸ್ಟರ್ ಆದ ಕನ್ನಡ ಸಿನಿಮಾಗಳ ಬಗ್ಗೆ ಈ ಲೇಖನದಲ್ಲಿದೆ. ಬ್ಲಿಂಕ್, ಶಾಖಾಹಾರಿ ಸೇರಿದಂತೆ ಹಲವು ಚಿತ್ರಗಳು ಒಟಿಟಿಯಲ್ಲಿ ಹೇಗೆ ಭರ್ಜರಿ ಯಶಸ್ಸು ಕಂಡವು ಎಂಬುದರ ವಿವರ ಇಲ್ಲಿದೆ.

ಥಿಯೇಟರ್ನಲ್ಲಿ ಅಟ್ಟರ್ ಫ್ಲಾಪ್
ಥಿಯೇಟರ್ನಲ್ಲಿ ಅಟ್ಟರ್ ಫ್ಲಾಪ್ ಆಗಿ, ಓಟಿಟಿ ಫ್ಲಾಟ್ಫಾರ್ಮ್ನಲ್ಲಿ ಬ್ಲಾಕ್ಬಸ್ಟರ್ ಸಿನಿಮಾಗಳು ಕನ್ನಡದಲ್ಲಿ ಬೇಕಾದಷ್ಟಿವೆ. ಥಿಯೇಟರ್ಗೆ ಬರುವ ಮುನ್ನ ಸಿನಿಮಾಗಳು ಸಾಕಷ್ಟು ಸದ್ದು ಮಾಡಿದ್ದವು. ಭಾರೀ ನಿರೀಕ್ಷೆ ಇಟ್ಕೊಂಡಿದ್ದ ಸಿನಿಮಾಗಳು ತೆರೆ ಮೇಲೆ ಹೀಗೆ ಬಂದು ಹಾಗೆ ಹೋಗಿದ್ದವು. ಅದೇ ನಿರಾಸೆಯಲ್ಲಿದ್ದ ಚಿತ್ರತಂಡಕ್ಕೆ ಓಟಿಟಿ ಮೂಲಕ ಹೊಸ ಭರವಸೆ ಸಿಕ್ಕಿತ್ತು. ಅಂತಹ ಸಿನಿಮಾಗಳ ವಿವರ ಹೀಗಿದೆ. ಇವತ್ತಿಗೂ ಕೂಡ ನೀವು ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದಾಗಿದೆ.
ಬ್ಲಿಂಕ್
ಶ್ರೀನಿಧಿ ಬೆಂಗಳೂರು ನಿರ್ದೇಶನದ ಬ್ಲಿಂಕ್ ಸಿನಿಮಾವು ಸಾಕಷ್ಟು ನಿರೀಕ್ಷೆ ಮೂಡಿತ್ತು. ಟೈಮ್ ಟ್ರಾವೆಲ್ ಕಥಾಹಂದರ ಹೊಂದಿದ ಚಿತ್ರವು ಹೆಚ್ಚಿನ ಪ್ರಚಾರವಿಲ್ಲದೇ ಕಡಿಮೆ ಕಲೆಕ್ಷನ್ ಮಾಡಿತ್ತು. ಆದರೆ ಅಮೆಜಾನ್ ಪ್ರೈಮ್ನಲ್ಲಿ ಬಿಡುಗಡೆಯಾದ ಭರ್ಜರಿ ಮೆಚ್ಚುಗೆ ಗಳಿಸಿತು. ದೀಕ್ಷಿತ್ ಶೆಟ್ಟಿ, ಚೈತ್ರಾ ಆಚಾರ್ ಸೇರಿದಂತೆ ಮೊದಲಾದ ತಾರಗಣ ಇತ್ತು. 4 ಕೋಟಿಯ ಬಜೆಟ್ ಸಿನಿಮಾ ಇದಾಗಿತ್ತು.
ಶಾಖಾಹಾರಿ
2024ರಲ್ಲಿ ತೆರೆಕಂಡ ಶಾಖಾಹಾರಿ ಸಿನಿಮಾಗೆ ಸಂದೀಪ್ ಸುಂಕದ್ ಆಕ್ಷನ್ ಕಟ್ ಹೇಳಿದ್ದರು. ಮೂರು ಕೋಟಿ ಬಜೆಟ್ನ ಈ ಸಿನಿಮಾವು ಮಲೆನಾಡಿನ ಸಣ್ಣ ಹೋಟೆಲ್ನಲ್ಲಿ ನಡೆಯುವ ಮಿಸ್ಟರಿ ಥ್ರಿಲ್ಲರ್ ಕಥೆ ಇದಾಗಿದೆ. ಬಾಕ್ಸ್ ಆಫೀಸ್ನಲ್ಲಿ ಸಾಧಾರಣ ಗಳಿಕೆ ಕಂಡರೂ ಒಟಿಟಿಯಲ್ಲಿ ದೊಡ್ಡ ಮಟ್ಟದ ವೀಕ್ಷಣೆ ಮತ್ತು ಪ್ರಶಂಸೆ ಪಡೆಯಿತು. ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ ಮೊದಲಾದವರು ನಟಿಸಿದ್ದರು.
ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ
ರಕ್ಷಿತ್ ಶೆಟ್ಟಿ ಅಭಿನಯದ ಈ ಸಿನಿಮಾ ನವೆಂಬರ್ 17, 2023 ರಲ್ಲಿ ರಿಲೀಸ್ ಆಯ್ತು. ಸೈಡ್ ಎ'ಗೆ ಹೋಲಿಸಿದರೆ 'ಸೈಡ್ ಬಿ' ಥಿಯೇಟರ್ನಲ್ಲಿ ನಿರೀಕ್ಷಿತ ಮಟ್ಟದ ಕಲೆಕ್ಷನ್ ಮಾಡಲಿಲ್ಲ. ಆದರೆ ಒಟಿಟಿಗೆ ಬಂದ ಮೇಲೆ ಸಿನಿಪ್ರಿಯರಿಂದ ಭಾರಿ ಮೆಚ್ಚುಗೆ ಪಡೆದು ಟ್ರೆಂಡ್ ಆಯಿತು. ಹೇಮಂತ್ ಎಂ.ರಾವ್ ನಿರ್ದೇಶನದ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರಾ ಆಚಾರ್ ಸೇರಿದಂತೆ ಅನೇಕರು ನಟಿಸಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 21 ದಿನಲ್ಲಿ 15.60 ಕೋಟಿ ಗಳಿಸಿತ್ತು. ನಂತರ ಓಟಿಟಿಗೆ ಬಂದ ಮೇಲೆ ಸಿನಿಮಾ ಮತ್ತೆ ಹಿಟ್ ಆಯಿತು.
ರತ್ನನ್ ಪ್ರಪಂಚ
2021 ರಲ್ಲಿ ತೆರೆಕಂಡ ಈ ಸಿನಿಮಾಗೆ ರೋಹಿತ್ ಪಡಕಿ ನಿರ್ದೇನ ಮಾಡಿದ್ದಾರೆ. ಧನಂಜಯ್, ರೆಬಾ ಮೋನಿಕಾ ಜಾನ್, ಉಮಾಶ್ರೀ, ಪ್ರಮೋದ್, ವೈನಿಧಿ ಜಗದೀಶ್, ಅನು ಪ್ರಭಾಕರ್, ಶ್ರುತಿ ಕೃಷ್ಣ, ರವಿಶಂಕರ್ ಗೌಡ ಮತ್ತು ಅಚ್ಯುತ್ ಕುಮಾರ್ ನಟಿಸಿದ್ದರು. ಭಾರೀ ನಿರಿಕ್ಷೆ ಮೂಡಿಸಿದ್ದರೂ ಥಿಯೇಟರ್ನಲ್ಲಿ ಸಿನಿಮಾ ಸೋತಿತ್ತು. ಆ ಬಳಿಕ ಓಟಿಟಿಯಲ್ಲಿ ರಿಲೀಸ್ ಆಗಿ ಭರ್ಜರಿ ಸಕ್ಸಸ್ ಕಂಡಿತ್ತು. ಜಿಯೋ ಹಾಟ್ಸ್ಟಾರ್ನಲ್ಲಿ ಸಿನಿಮಾ ನೋಡಬಹುದಾಗಿದೆ.
ಡೊಳ್ಳು
2022ರಲ್ಲಿ ಬಿಡುಗಡೆಯಾದ ಕನ್ನಡ ನಾಟಕ ಚಲನಚಿತ್ರವಾಗಿದೆ. ಇದನ್ನು ಸಾಗರ್ ಪುರಾಣಿಕ್ ನಿರ್ದೇಶಿಸಿದ್ದು, ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ನಿರ್ಮಿಸಿದ್ದಾರೆ. ಕಾರ್ತಿಕ್ ಮಹೇಶ್, ನಿಧಿ ಹೆಗಡೆ, ಬಾಬು ಹಿರಣ್ಣಯ್ಯ, ಶರಣ್ಯ ಸುರೇಶ್, ಚಂದ್ರ ಮಯೂರ್ ಸೇರಿದಂತೆ ಹಲವರು ಸಿನಿಮಾದಲ್ಲಿ ನಟಿಸಿದ್ದಾರೆ. ರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಯಲ್ಲಿ ಬೆಸ್ಟ್ ಕನ್ನಡ ಫೀಚರ್ ಸಿನಿಮಾ ಗೆದ್ದಿತ್ತು. ಈ ಸಿನಿಮಾವನ್ನು ನೀವು ಅಮೇಜಾನ್ ಪ್ರೈಮ್ನಲ್ಲಿ ವೀಕ್ಷಣೆ ಮಾಡಬಹುದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.















