ಲಾಕ್‌ಡೌನ್‌ ನಂತರ ಚಿತ್ರ ನಿರ್ಮಾಪಕರು, ನಿರ್ದೇಶಕರು ತಮ್ಮ ಸಿನಿಮಾ ರಿಲೀಸ್‌ಗೆ OTT ಫ್ಲಾಟ್‌ ಫಾರ್ಮ್‌ಗಳ ಮೊರೆ ಹೋಗುತ್ತಿದ್ದಾರೆ. ಸದ್ಯದ ಮಟ್ಟಿಗೆ ಥಿಯೇಟರ್‌ಗಳು ನಷ್ಟದಲ್ಲಿವೆ. ಸಿನಿಮಾಗಳಿಲ್ಲ, ಪ್ರೇಕ್ಷಕರಿಲ್ಲದೆ ಬಡವಾಗಿದೆ. ಸದ್ಯದ ಕೊರೋನಾ ಪರಿಸ್ಥಿತಿ ಗಮನಸಿದರೆ ಥಿಯೇಟರ್‌ಗಳು ಸದ್ಯ ಪ್ರೇಕ್ಷಕರಿಗೆ ತೆರಯಲ್ಪಡುವ ಯಾವ ಸೂಚನೆಗಳೂ ಕಾಣುತ್ತಿಲ್ಲ.

ಹೀಗಾಗಿಯೇ ಸ್ವಲ್ಪ ಸಮಯ ಕಾದು ನೋಡಿದ ಸಿನಿಮಾ ನಿರ್ದೇಶಕರೆಲ್ಲಾ ಓಟಿಟಿಯಲ್ಲಿಯೇ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. ಈ ನಡುವೆಯೇ ಒಟಿಟಿ ಲಾಭ-ನಷ್ಟದ ಬಗ್ಗೆ ಚರ್ಚೆಯೂ ಆರಂಭವಾಗಿದೆ.

ಮುಂಬೈ ಸ್ಟ್ರೀಟ್‌ನಲ್ಲಿ ಕತ್ರೀನಾ ಸೈಕ್ಲಿಂಗ್..! ಇಲ್ಲಿವೆ ಫೊಟೋಸ್

ಇದೀಗ ನಟ ನವಾಜುದ್ದೀನ್ ಸಿದ್ದಕಿ ಒಟಿಟಿ ಗುಣಗಳ ಬಗ್ಗೆ ಮಾತನಾಡಿದ್ದಾರೆ. ಥಿಯೇಟರ್ ಬಿಟ್ಟು ಒಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡೋದ್ರಿದಂದ ಪ್ರಯೋಜನವೇನು ಎಂಬ ಪ್ರಶ್ನೆಗೆ ಉತ್ತರಿಸಿದ ನಟ, ನೆಟ್‌ಫ್ಲಿಕ್ಸ್‌ನಂತರ ದೊಡ್ಡ ಫ್ಲಾಟ್‌ ಫಾರ್ಮ್ ಸೇರಿ ಒಟಿಟಿಯಲ್ಲಿ ಸಿನಿಮಾಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಮತ್ತು ಲಾಭವೂ ಇದೆ ಎಂದವರು ಹೇಳಿದ್ದಾರೆ.

100 ಕೋಟಿ ಸಿನಿಮಾ ಮಾಡಿ ಅಥವಾ 150 ಕೋಟಿ ಸಿನಿಮಾ ಆಗಿದ್ದರೆ ಅದೆಂಥಾ ಕೆಟ್ಟ ಚಿತ್ರವಾದ್ರೂ ಜನ ಥಿಯೇಟರ್‌ಗೆ ಬಂದು ನೋಡುತ್ತಾರೆ. ಆದರೆ ಸಣ್ಣ ಬಜೆಟ್‌ನ ಒಳ್ಳೆಯ ಸಿನಿಮಾಗಳು ಚೆನ್ನಾಗಿದ್ರೂ, ಬೆಳಗ್ಗಿನ 11, ರಾತ್ರಿ 11 ಗಂಟೆಯ ಶೋ ಸಿಗುತ್ತದೆ. ಕನಿಷ್ಠ ಈಗ 100 ಕೋಟಿ ಸಿನಿಮಾವಾಗಲಿ, 15 ಕೋಟಿ ಸಿನಿಮಾವಾಗಲಿನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆದಾಗ ವೀಕ್ಷಕಕರ ಸಂಖ್ಯೆ ಒಂದೇ ರೀತಿ ಇರುತ್ತದೆ ಎಂದಿದ್ದಾರೆ.

ಸುಶಾಂತ್ ಸಾವಿನ ತನಿಖೆಗೆ ಬಂದ IPS ಅಧಿಕಾರಿಗೆ ಕ್ವಾರೆಂಟೈನ್..!

ಒಟಿಟಿಯಲ್ಲಿ ಈಗ ಯಾವ ಸಿನಿಮಾ ಚೆನ್ನಾಗಿದೆ, ಜನ ಯಾವ ಸಿನಿಮಾ ಇಷ್ಟಪಡುತ್ತಾರೆ ಎಂಬುದರ ಮೇಲೆ ಎಲ್ಲವೂ ಅವಲಂಬಿಸಿದೆ. ಅದೃಷ್ಟಕ್ಕೆ ಈಗ ಸಿನಿಮಾಗಳು ಜಗತ್ತಿನಾದ್ಯಂತ ಜನರಿಗೆ ತಲುಪುತ್ತವೆ, ಹಾಗೆಯೇ ನಮಗೆ ದೊಡ್ಡ ಮಟ್ಟದ ವೀಕ್ಷಕರಿದ್ದಾರೆ ಎಂದಿದ್ದಾರೆ.

ನೆಟ್‌ಫ್ಲಿಕ್ಸ್‌ನಲ್ಲಿ ಕೆಲವು ದಿನಗಳ ಹಿಂದಷ್ಟೇ ರಿಲೀಸ್ ಆದ ರಾತ್‌ ಅಕೇಲಿ ಸಿನಿಮಾದಲ್ಲಿ ನವಾಜುದ್ದೀನ್ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಹನಿ ತ್ರೆಹಾನ್ ನಿರ್ದೇಶಿಸಿದ್ದು, ರಾಧಿಕಾ ಆಪ್ಟೆ ನಟಿಸಿದ್ದಾರೆ. ಇದೀಗ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದೆ.