ಇವತ್ತಿನ ಹೆಚ್ಚಿನ ವಿದ್ಯಾರ್ಥಿಗಳು ಓದು ಶುರು ಮಾಡಲು ಪರ್ಫೆಕ್ಟ್ ಟೈಮ್‌ಗಾಗಿ ಕಾಯ್ತಾರೆ. ಆದರೆ ಖಾನ್ ಸರ್ ಪ್ರಕಾರ, ಅಂತಹ ಸಮಯ ಅಂತ ಯಾವುದೂ ಇಲ್ಲ. ನೀವು ಪುಸ್ತಕ ತೆರೆದ ತಕ್ಷಣವೇ ಸರಿಯಾದ ಸಮಯ ಶುರುವಾಗುತ್ತೆ.
ನೀವು ನಿಜವಾಗಿಯೂ ಕಷ್ಟಪಟ್ಟು ಓದುತ್ತಿದ್ದರೆ, ಫಲಿತಾಂಶ ಹೇಗಿರುತ್ತೆ ಅಂತ ನಿಮಗೇ ಒಂದು ಅಂದಾಜು ಸಿಗುತ್ತೆ ಅಂತ ಖಾನ್ ಸರ್ ನಂಬುತ್ತಾರೆ. ಅಂದಾಜು ಸಿಗ್ತಿಲ್ಲ ಅಂದ್ರೆ, ನಿಮ್ಮ ಪ್ರಯತ್ನದಲ್ಲಿ ಕೊರತೆ ಇದೆ ಎಂದರ್ಥ.
ಸತ್ಯ ಏನೆಂದರೆ, ಮೋಟಿವೇಶನ್ ಕೆಲವೇ ಸಮಯ ಇರುತ್ತೆ. ನಿಜವಾದ ಆಟ ಇರೋದು ಶಿಸ್ತಿನಲ್ಲಿ. ಪ್ರತಿದಿನ ಸ್ವಲ್ಪ ಸ್ವಲ್ಪನೇ ಓದಲು ಶುರು ಮಾಡಿ, ಅದು 20 ನಿಮಿಷವೇ ಆಗಿರಲಿ. ಒಮ್ಮೆ ಶುರು ಮಾಡಿದರೆ, ಅರ್ಧ ಗೆದ್ದಂತೆ .
ಅರ್ಥ ಆಗಿಲ್ಲ ಅಂದ್ರೆ ಓದು ವೇಸ್ಟ್, ಪ್ರಶ್ನೆಗಳನ್ನು ಕೇಳಿ, ಮತ್ತೆ ಮತ್ತೆ ಓದಿ, ದೃಶ್ಯದ ಮೂಲಕ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಗೊಂದಲ ವೀಕ್‌ನೆಸ್ ಅಲ್ಲ, ಬದಲಿಗೆ ಮೆದುಳು ಆಕ್ಟಿವ್ ಆಗೋದರ ಸಂಕೇತ.
ಯಾರೋ ನಿಮಗಿಂತ ಹೆಚ್ಚು ಓದಬಹುದು, ಯಾರೋ ಹೆಚ್ಚು ಅಂಕ ಗಳಿಸಬಹುದು. ಆದರೆ, ಅದರಿಂದ ನೀವು ದುರ್ಬಲರು ಅಂತ ಅರ್ಥವಲ್ಲ. ನಿಮ್ಮ ಪ್ರಗತಿಯ ಮೇಲೆ ಗಮನ ಕೊಡಿ. ಆತ್ಮವಿಶ್ವಾಸವನ್ನು ಕಡಿಮೆ ಮಾಡಿಕೊಳ್ಳಬೇಡಿ.
ದಿನಕ್ಕೆ 8-10 ಗಂಟೆ ಓದೋದು ಕೇಳೋಕೆ ಚೆನ್ನಾಗಿರುತ್ತೆ. ಆದರೆ, ಇದರಿಂದ ಮೆದುಳು ಸುಸ್ತಾಗುತ್ತೆ. ಮಧ್ಯೆ ಮಧ್ಯೆ ಸಣ್ಣ ಬ್ರೇಕ್ ತೆಗೆದುಕೊಳ್ಳಿ, ಸ್ವಲ್ಪ ಓಡಾಡಿ, ನೀರು ಕುಡಿಯಿರಿ. ಇದರಿಂದ ಫೋಕಸ್ ಹೆಚ್ಚಾಗುತ್ತೆ.
ಪರೀಕ್ಷೆ ಬಂದಾಗ ಹಲವು ವಿದ್ಯಾರ್ಥಿಗಳು ನಿದ್ದೆ ಬಿಟ್ಟು ಓದುತ್ತಾರೆ. ಆದರೆ, ಇದರಿಂದ ಮೆದುಳು ಸರಿಯಾಗಿ ಕೆಲಸ ಮಾಡುವುದಿಲ್ಲ. ನೀವು ಪ್ರತಿದಿನದ ಪ್ಲಾನ್ ಸರಿಯಾಗಿ ಇಟ್ಟುಕೊಂಡರೆ, ಕೊನೆ ಕ್ಷಣದಲ್ಲಿ ಓವರ್‌ಲೋಡ್ ಆಗಲ್ಲ.
ಖಾನ್ ಸರ್ ಸ್ಪಷ್ಟವಾಗಿ ಹೇಳುತ್ತಾರೆ, ಫೇಲ್ ಆಗುವುದರಿಂದ ನೀವು ಮುಂದೆ ಏನಾಗುತ್ತೀರಿ ಎಂಬುದು ನಿರ್ಧಾರವಾಗುವುದಿಲ್ಲ. ಇದು ಕೇವಲ ಒಂದು ಹೆಜ್ಜೆ, ಇದರಿಂದ ಪಾಠ ಕಲಿತು ಮುಂದೆ ಸಾಗುವುದು ಮುಖ್ಯ.